ಎರಡನೇ ವಿವಾಹಕ್ಕಾಗಿ ಹುಡುಕಾಟ ನಡೆಸುತ್ತಿದ್ದ ವಿಚ್ಛೇದಿತ ವ್ಯಕ್ತಿಯೊಬ್ಬನನ್ನು 54ರ ಪ್ರಾಯದ, ಎರಡು ಮಕ್ಕಳ ತಾಯಿಯೊಬ್ಬಳು ತಾನು 30 ರ ಹರೆಯದ ಹೆಣ್ಣು ಎಂದು ಹೇಳಿ ವಿವಾಹವಾಗಿ ಮೋಸ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಎರಡನೇ ವಿವಾಹಕ್ಕಾಗಿ ಹುಡುಕಾಟ ನಡೆಸುತ್ತಿದ್ದ ವಿಚ್ಛೇದಿತ ವ್ಯಕ್ತಿಯೊಬ್ಬನನ್ನು 54ರ ಪ್ರಾಯದ, ಎರಡು ಮಕ್ಕಳ ತಾಯಿಯೊಬ್ಬಳು ತಾನು 30 ರ ಹರೆಯದ ಹೆಣ್ಣು ಎಂದು ಹೇಳಿ ವಿವಾಹವಾಗಿ ಮೋಸ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಮಾತು ಚಾಲ್ತಿಯಲ್ಲಿದೆ. ಇದನ್ನೇ ಅನೇಕರು ನಿಜ ಜೀವನದಲ್ಲಿ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಎರಡನೇ ವಿವಾಹಕ್ಕೆ ಸಿದ್ಧರಾದ ಡಿವೋರ್ಸಿಗಳೇ ಇಂತಹ ಮೋಸಗಾರರ ಟಾರ್ಗೆಟ್ ಆಗಿದ್ದಾರೆ.
ತಮಿಳುನಾಡಿನ (Tamil Nadu) ತಿರುವಳ್ಳೂರು (Tiruvallur) ಜಿಲ್ಲೆಯ ಪುದುಪೆಟ್ಟೈನ (Pudupettai) 65 ವರ್ಷದ ಇಂದ್ರಾಣಿ (indrani) ಎಂಬ ಮಹಿಳೆ ಖಾಸಗಿ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ತನ್ನ ವಿಚ್ಛೇದಿತ ಮಗ(35) ನೊಂದಿಗೆ ವಾಸ ಮಾಡುತ್ತಿದ್ದರು. ಆರು ವರ್ಷಗಳಿಂದ, ಇಂದ್ರಾಣಿ ಅವರು ತಮ್ಮ ವಿಚ್ಛೇದಿತ ಮಗನಿಗಾಗಿ ಹುಡುಗಿಯ ಹುಡುಕಾಟದಲ್ಲಿದ್ದರು. ಕೊನೆಗೂ ಅವರಿಗೆ ದಲ್ಲಾಳಿ ಮೂಲಕ ಕಳೆದ ವರ್ಷ ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಪುತ್ತೂರು ಮೂಲದ ಶರಣ್ಯ ಎಂಬ ಮಹಿಳೆಯ ಪರಿಚಯವಾಗಿತ್ತು.
ಟೀನಾ ದಾಬಿ ಜೊತೆ ಡೈವೋರ್ಸ್ ಬಳಿಕ 2ನೇ ಮದುವೆಗೆ ಸಜ್ಜಾದ ಅಥರ್ ಅಮೀರ್ ಖಾನ್, ಇವರೇ ವಧು!
ನಂತರ ಮದುವೆಯ ಮಾತುಕತೆಗಾಗಿ ಇಂದ್ರಾಣಿ ಅವರು ಶರಣ್ಯ ಅವರ ನಿವಾಸಕ್ಕೆ ಬರಲು ಸಿದ್ಧತೆ ನಡೆಸಿದರು. ಇತ್ತ ತನ್ನನ್ನು ನೋಡಲು ಗಂಡಿನ ಕಡೆಯವರು ಬರುತ್ತಾರೆ ಎಂಬ ವಿಚಾರ ತಿಳಿದ 54 ವರ್ಷದ ಶರಣ್ಯ ಬ್ಯೂಟಿ ಪಾರ್ಲರ್‌ಗೆ ಭೇಟಿ ನೀಡಿ ತನ್ನನ್ನು ಸುಂದರ ತರುಣಿಯಂತೆ ಅಲಂಕರಿಸಿಕೊಂಡು ಬಂದಿದ್ದಾರೆ. ಪರಿಣಾಮ ಇಂದ್ರಾಣಿ ಕಡೆಯವರಿಗೆ ಈಕೆ ಮೂವತ್ತರ ಆಸುಪಾಸಿನಲ್ಲಿರುವ ಮಹಿಳೆಯಂತೆ ಕಾಣಿಸಿದ್ದು, ನಂತರ ಇಂದ್ರಾಣಿ ತಿರುವಳ್ಳೂರಿನಲ್ಲಿ ಅದ್ಧೂರಿ ಸಮಾರಂಭ ಆಯೋಜಿಸಿ ತಮ್ಮ ಪುತ್ರನೊಂದಿಗೆ ಶರಣ್ಯಳ ವಿವಾಹ ಮಾಡಿಸಿದ್ದಾರೆ. ಅಲ್ಲಿ ಮದುಮಗನ ಕುಟುಂಬವು ಶರಣ್ಯಗೆ 25 ಪವನ್ ಬಂಗಾರವನ್ನು ನೀಡಿದೆ.
ಇದಾದ ಕೆಲವು ದಿನಗಳ ನಂತರ, ಶರಣ್ಯಾ ತನ್ನ ಪತಿ ಮತ್ತು ಅತ್ತೆಗೆ ತಮ್ಮ ಆಸ್ತಿಯನ್ನು ತನ್ನ (ಶರಣ್ಯಾ) ಹೆಸರಿಗೆ ನೋಂದಾಯಿಸುವಂತೆ ಒತ್ತಾಯಿಸಿ ಕಿರುಕುಳ ನೀಡಲು ಶುರು ಮಾಡಿದ್ದಾಳೆ. ಅಲ್ಲದೇ ತಾನು ಗಂಡನ ತಾಯಿ ಇಂದ್ರಾಣಿಯನ್ನು ಮನೆಯಿಂದ ಹೊರಗೆ ಕಳುಹಿಸಲು ನೋಡಿದ್ದಾಳೆ. ಈಕೆಯ ಕಿರುಕುಳ ಸಹಿಸಲಾಗದೆ ಆಕೆಯ ಪತಿ ಶರಣ್ಯಳ ಹೆಸರಿಗೆ ಆಸ್ತಿ ವರ್ಗಾವಣೆಗೆ ಮುಂದಾಗಿದ್ದಾರೆ. ಅದಕ್ಕಾಗಿ ಆಕೆಯ ಆಧಾರ್ ಕಾರ್ಡ್ ನೀಡುವಂತೆ ಕೇಳಿದ್ದಾರೆ. ಈ ವೇಳೆ ಆಧಾರ್ ಕಾರ್ಡ್‌ನಲ್ಲಿ ಕೇರ್ ಆಫ್ ಫೀಲ್ಡ್‌ನಲ್ಲಿ 'ರವಿ' ಎಂಬ ಹೆಸರು ಇರುವುದನ್ನು ನೋಡಿ, ಇಂದ್ರಾಣಿ ಮತ್ತು ಅವರ ಮಗ ಶರಣ್ಯ ಮೇಲೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದಾಗ ಸತ್ಯಾಂಶ ಬಯಲಾಗಿದೆ.
Marriage Fraud: 60 ವರ್ಷದ ಮುದುಕನ ಮದುವೆಗೆ ತಂದಿದ್ದ ಸೀರೆ, ತಾಳಿ ಜತೆ ವಧು ಪರಾರಿ..!
ಪೊಲೀಸರು ಆಧಾರ್ ಕಾರ್ಡ್ ಸಹಾಯದಿಂದ ತನಿಖೆ ನಡೆಸಿದಾಗ ತಾಯಿ ಮತ್ತು ಮಗನಿಗೆ ಆಘಾತವಾಗಿದೆ. ಪುತ್ತೂರಿನ(Puttur) ಶರಣ್ಯ ಅಲಿಯಾಸ್ ಸುಕನ್ಯಾ (Sukanya) ಅಲಿಯಾಸ್ ಸಂಧ್ಯಾಗೆ ಅದೇ ಊರಿನ ರವಿ ಎಂಬಾತನ ಜೊತೆ ಈಗಾಗಲೇ ವಿವಾಹವಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದು, ಹೆಣ್ಣು ಮಕ್ಕಳಿಗೂ ಮದುವೆಯಾಗಿದೆ. ರವಿ ಜೊತೆಗಿನ ಜಗಳದ ನಂತರ ಶರಣ್ಯ ತನ್ನ ತಾಯಿಯೊಂದಿಗೆ ಪುತ್ತೂರಿನಲ್ಲಿ ವಾಸವಾಗಿದ್ದಳು. ಆದರೆ ಜೀವನೋಪಾಯಕ್ಕೆ ಆದಾಯದ ಮೂಲವಿಲ್ಲದ ಕಾರಣ ಈ ತಾಯಿ ಮಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಹೀಗಾಗಿ ತನ್ನ ಕಷ್ಟಗಳನ್ನು ನೀಗಿಸಲು ಶರಣ್ಯ ಎರಡನೇ ಮದುವೆಗೆ ಯೋಚಿಸಿ ಮದುವೆ ದಲ್ಲಾಳಿಗಳ ಮೊರೆ ಹೋಗಿದ್ದಳು. ಅವರ ಸಹಾಯದಿಂದ, ಅವಳು ವಿಚ್ಛೇದಿತ ಮಧ್ಯವಯಸ್ಕ ವ್ಯಕ್ತಿಗಳನ್ನು ಗುರಿ ಮಾಡಿಕೊಂಡಿದ್ದಳು.
ಈ ಇಂದ್ರಾಣಿ ಪುತ್ರನನ್ನು ವಿವಾಹವಾಗುವ ಮೊದಲು ಈ ಶರಣ್ಯ (Saranya) ಸಂಧ್ಯಾ (Sandhya) ಎಂದು ಪರಿಚಯಿಸಿಕೊಂಡು ಸುಬ್ರಮಣಿ ಎಂಬಾತನನ್ನು ಮದುವೆಯಾಗಿದ್ದಳು. ಅಲ್ಲದೇ ಆತನೊಂದಿಗೆ 11 ವರ್ಷಗಳ ಕಾಲ ಇದ್ದಳು. ಆದರೆ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಆತನನ್ನು ಬಿಟ್ಟು ತನ್ನ ತಾಯಿಯ ಬಳಿಗೆ ಬಂದಿದ್ದಳು. ಈ ಮಧ್ಯೆ ಇಂದ್ರಾಣಿ ತನ್ನ ಮಗನಿಗೆ ಮರು ಮದುವೆ ಮಾಡುವ ಉದ್ದೇಶವನ್ನು ತಿಳಿದ ಶರಣ್ಯ ಅವರನ್ನು ತನ್ನ ಮೋಸದ ಬಲೆಗೆ ಬೀಳಿಸಿದ್ದಳು. ಇದಕ್ಕೂ ಮೊದಲು ಶರಣ್ಯ ತನ್ನ ಮೊದಲ ಪತಿ ರವಿ ವಿರುದ್ಧವೂ ಪೊಲೀಸ್ ಕೇಸ್ ದಾಖಲಿಸಿ ಆತನಿಂದ 10 ಲಕ್ಷ ರೂ. ವಸೂಲಿ ಮಾಡಿದ್ದಳು.