Uttara Kannada: ಜಿಪಿಎಸ್ ಟ್ರ್ಯಾಕರ್ ಬಳಸಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ

Published : Nov 26, 2022, 10:45 PM IST
Uttara Kannada: ಜಿಪಿಎಸ್ ಟ್ರ್ಯಾಕರ್ ಬಳಸಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ

ಸಾರಾಂಶ

ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಬಳಿ ಕಳೆದ ತಿಂಗಳು ಚಾಕು ತೋರಿಸಿ ವ್ಯಕ್ತಿಯೋರ್ವರಿಂದ ಲಕ್ಷಾಂತರ ರೂಪಾಯಿ ಎಗರಿಸಿದ್ದ ದರೋಡೆಕೋರನ್ನು ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಉತ್ತರ ಕನ್ನಡ (ನ.26): ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಬಳಿ ಕಳೆದ ತಿಂಗಳು ಚಾಕು ತೋರಿಸಿ ವ್ಯಕ್ತಿಯೋರ್ವರಿಂದ ಲಕ್ಷಾಂತರ ರೂಪಾಯಿ ಎಗರಿಸಿದ್ದ ದರೋಡೆಕೋರನ್ನು ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ಟೋಬರ್ 19ರಂದು ಅಂಡಗಿ ಬಳಿ ಹಸನ್ ಖಾನ್ ಎಂಬವರಿಗೆ ಸೇರಿದ 50 ಲಕ್ಷ ರೂಪಾಯಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ, ದೋಚಿ ಪರಾರಿಯಾಗಿದ್ದರು. ಕಾರಿಗೆ ಅಳವಡಿಸಿದ್ದ ಜಿಪಿಎಸ್ ಟ್ರ್ಯಾಕರ್ ಸಹಾಯದಿಂದ ಈ ದರೋಡೆ ನಡೆಸಿದ್ದರು. 

ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಶನಿವಾರದಂದು 9 ಮಂದಿ ಅಂತರ್ ಜಿಲ್ಲಾ ದರೋಡೆಕೊರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ 13 ಲಕ್ಷ ರೂ. ಹಣವನ್ನು ಜಪ್ತು ಪಡಿಸಲಾಗಿದೆ. ಸಾಗರದ ಆಸಿಫ್ ಸತ್ತಾರ್, ಅಬ್ದುಲ್ ಸತ್ತಾರ್, ಮನ್ಸೂರ್ ಜಾಫರ್ ಖಾನ್, ನೆಜ್ಜೂರಿನ ಅಜಿಮುಲ್ಲಾ ಸಾಬ್, ಭಟ್ಕಳದ ಅಬ್ದುಲ್ ರೆಹಮಾನ್ ವಟರಾಗ, ಚಿಕ್ಕಮಗಳೂರಿನ ರಿಯಾಜ್ ಫಯಾಜ್, ವಿಶ್ವನಾಥ ಶೆಟ್ಟಿ, ಮನೋಹರ ಶೆಟ್ಟಿ ಹಾಗೂ ತೀರ್ಥಹಳ್ಳಿಯ ಇಕ್ಬಾಲ್ ಅಬ್ದುಲ್ ಕೆ. ಪ್ರಕರಣದ ಬಂಧಿತ ಆರೋಪಿಗಳು. 

Uttara Kannada: ಕರಾವಳಿಯ ಅಖಾಡದಲ್ಲಿ ಬಿಜೆಪಿ ವಿರುದ್ದ ತೊಡೆ ತಟ್ಟಿದ ಕಾಂಗ್ರೆಸ್

ಬಂಧಿತರಿಂದ 13.82 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಒಂದು ರಿಡ್ಜ್ ಹಾಗೂ ಒಂದು ಓಮಿನಿ ಮತ್ತು 12 ಮೊಬೈಲ್ ಹಾಗೂ ಒಂದು ಜಿ.ಪಿ.ಎಸ್.ಟ್ರ್ಯಾಕರ್ ಅನ್ನು ವಶಕ್ಕೆ ಪಡೆಯಲಾಗಿದೆ.‌ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳ ಪತ್ತೆ ಹಾಗೂ ನಗದು ಜಪ್ತು ಬಾಕಿ ಇದ್ದು, ತನಿಖೆ ಮುಂದುವರೆದಿದೆ. ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ರವಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ, ಪಿಎಸ್ಐ ಗಳಾದ ಹನಮಂತ ಬಿರದಾರ, ಭೀಮಾಶಂಕರ, ಚಂದ್ರಕಲಾ ಪತ್ತಾರ್, ಸಿಬ್ಬಂದಿ ಕೊಟೇಶ್ ನಾಗರವಳ್ಳಿ, ರಾಘವೇಂದ್ರ ಜಿ, ಶಿವರಾಜ ಎಸ್.

Udupi: ಕಾಂತರಾ ಕಂಬಳ ಗದ್ದೆಯಲ್ಲಿ ಮತ್ತೊಮ್ಮೆ ಕೋಣಗಳ ಕಲರವ!

ಚಂದ್ರಪ್ಪ ಕೊರವರ್, ಪ್ರಶಾಂತ ಪಾವಸ್ಕರ್, ಮಹಾಂತೇಶ್ ಬಾರಕೆರ್, ನಾಗಪ್ಪ ಒಣಿಕೇರಿ, ಗುರುರಾಜ ಸಿ., ಮಂಜುನಾಥ ಬಿ., ರಾಮಯ್ಯ ಪೂಜಾರಿ, ಬಸವರಾಜ ಜಾಢರ್, ಹನುಮಂತ ಮಾಕಾಪುರ, ಅಶೋಕ ನಾಯ್ಕ, ಜಿಮ್ಮು ಶಿಂಧೆ, ಕುಮಾರ್ ಬಣಕಾರ, ರಮೇಶ್ ನಾಯ್ಕ,ಉದಯ ಗುನಗಾ, ರಾಜೇಶ್ ನಾಯ್ಕ, ರಾಮದೇವ್ ಗಾಂವಕರ್, ವೆಂಕಟೇಶ ನಾಯಕ, ಬಸವರಾಜ ಮ್ಯಾಗೇರಿ, ಪ್ರವೀಣ, ಮಾದೇವ, ಸಂತೋಷ ತಳವಾರ ಹಾಗೂ ಪಾಂಡುರಂಗ ನಾಗೋಜಿ ಭಾಗಿಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ