
ಕಲಬುರಗಿ (ನ.26): ಐದು ವರ್ಷದ ಬಾಲಕಿಯ ಮೇಲೆ 45 ವರ್ಷದ ವಿವಾಹಿತ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನ ನಡೆಸಿದ ಘಟನೆ ಕಲ್ಬುರ್ಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಮಾರ್ ಜಾಧವ್ ಎನ್ನುವ 45 ವರ್ಷದ ವ್ಯಕ್ತಿಯಿಂದ ಈ ಹೀನ ಕೃತ್ಯ ನಡೆದಿದ್ದು, ಜನರೇ ಹಿಡಿದು ಈತನನ್ನು ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಂಡಾವೊಂದರಲ್ಲಿ ಐದು ವರ್ಷದ ಬಾಲಕಿ, ತನ್ನ ಮನೆಯ ಹೊರಗಡೆ ಆಟವಾಡುತ್ತಾ ನಿಂತಿದ್ದಳು. ಅದೇ ಗ್ರಾಮದ 45 ವರ್ಷದ ವ್ಯಕ್ತಿ, ಚಾಕ್ಲೆಟ್ ಕೊಟ್ಟು ಆ ಬಾಲಕಿಯನ್ನು ಪಕ್ಕದಲ್ಲಿಯೇ ಇರುವ ತೊಗರಿ ಹೊಲಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾನೆ. ಇದರಿಂದ ಆತಂಕ್ಕೊಳಗಾದ ಬಾಲಕಿ ಕಿರುಚಾಡಲು ಶುರು ಮಾಡಿದ್ದಾಳೆ. ಒಂದಿಷ್ಟು ದೂರದಲ್ಲಿ ಅದೇ ತೊಗರಿ ಹೊಲದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಬಾಲಕಿಯ ಅಳು, ಚೀರಾಟ, ಕೂಗಾಟ ಕೇಳಿಸಿದೆ. ತಕ್ಷಣವೇ ಅವರು ಸ್ಥಳಕ್ಕೆ ಬಂದು ನೋಡಿದಾಗ, ಈ ಕಾಮುಕನ ಕೃತ್ಯ ಬಟಾ ಬಯಲಾಗಿದೆ.
ಪಂಜಾಬ್‌ನಲ್ಲಿ ನಾಲ್ವರು ಕಾಮುಕಿಯರಿಂದ ಪುರುಷನ ಮೇಲೆ ಅತ್ಯಾಚಾರ..!
ಜನರಿಂದಲೇ ಬಿತ್ತು ಗೂಸಾ: ಕೇವಲ ಐದು ವರ್ಷದ ಪುಟ್ಟ ಬಾಲಕಿಯ ಸ್ಥಿತಿಯನ್ನು ಕಣ್ಣಾರೆ ಕಂಡ ಜನ ರೊಚ್ಚಿಗೆದ್ದು ಈ ಕಾಮುಕನಿಗೆ ಮನ ಬಂದಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಆತನನ್ನು ಹಿಡಿದುಕೊಂಡು ಸ್ತಳೀಯ ವಾಡಿ ಪೊಲೀಸ ಠಾಣೆಗೆ ಒಪ್ಪಿಸಿದ್ದಾರೆ. ಈ ಕುರಿತು ಸಂತ್ರಸ್ತ ಬಾಲಕಿಯ ತಾಯಿ ವಾಡಿ ಪೊಲೀಸ್ ಠಾಣೆಗೆ ದೂರು ಸಹ ಸಲ್ಲಿಸಿದ್ದಾಳೆ. ಫೋಕ್ಸೋ ಅಡಿ ದೂರು ದಾಖಲಿಸಿಕೊಂಡಿರುವ ವಾಡಿ ಪೊಲೀಸರು ಆರೋಪಿಯನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.
ವಿವಾಹಿತ ಆದ್ರೆ ಹೆಂಡತಿ ದೂರ: ಈ ವಿಕೃತ ಕಾಮುಕ ಕುಮಾರ್ ಜಾದವ್ ಸಂತೃಸ್ಥ ಬಾಲಕಿ ವಾಸಿಸುವ ತಾಂಡಾದವನೇ ಆಗಿದ್ದಾನೆ. ಈತ ವಿವಾಹಿತನಾಗಿದ್ದು ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಆದರೆ, ಈತನ ವಿಕೃತಿ ಇಂದಾನೋ ಏನೋ ಹೆಂಡತಿ, ತನ್ನ ಮಕ್ಕಳೊಂದಿಗೆ ತವರು ಸೇರಿದ್ದಾಳೆ. ಇದೀಗ ಒಬ್ಬಂಟಿಯಾಗಿರುವ ಕುಮಾರ, ಇಂತಹ ವಿಕೃತಿಗಿಳಿದು ಜನರಿಂದ ಒದೆ ತಿಂದಿದ್ದಲ್ಲದೇ ಕಂಬಿ ಎಣಿಸುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ