
ಬೆಂಗಳೂರು(ಅ.16): ನಗರದಲ್ಲಿ ಸತತವಾಗಿ ಮಳೆಯಾಗುತ್ತಿರುವ ವೇಳೆ ಬಿಬಿಎಂಪಿ ಪಾರ್ಕ್‌ನಲ್ಲಿರುವ ಶ್ರೀಗಂಧದ ಮರಗಳನ್ನ ಕಳ್ಳರು ಎಗರಿಸಿದ ಘಟನೆ ನಿನ್ನೆ(ಮಂಗಳವಾರ) ನಡೆದಿದೆ. ಸತತ ಮಳೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆ ಸೇರಿದ ನಂತರ ಬಿಬಿಎಂಪಿ ಪಾರ್ಕ್ ನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.
ಯಲಹಂಕ ನ್ಯಾಯಾಂಗ ಲೇಔಟ್ ನಾ ಬಿಬಿಎಂಪಿ ಪಾರ್ಕ್ ನಲ್ಲಿ ನಿನ್ನೆ ರಾತ್ರಿ ಶ್ರೀಗಂಧದ ಮರಗಳ ಕಳ್ಳತನವಾಗಿದೆ. ಮಳೆಯ ನಡುವೆಯೇ ಶ್ರೀಗಂಧದ ಮರಗಳನ್ನ ಕತ್ತರಿಸಿ ಸಾಗಿಸಿದ್ದಾರೆ ಖದೀಮರು. ಬೆಳಗ್ಗೆ ವಾಕಿಂಗ್ ಹೋದ ವೇಳೆ ಮರ ಕಳ್ಳತನವಾಗಿರುವ ಬಗ್ಗೆ ಸಾರ್ವಜನಿಕರು ಗಮನಿಸಿದ್ದಾರೆ.
ಮನೆ ಮುಂದಿನ ಕುರಿ, ಮೇಕೆಗಳನ್ನ ಕದ್ದು ಮಾರಾಟ ಮಾಡುತ್ತಿದ್ದ 'ಸಿಂಧನೂರು ಗ್ಯಾಂಗ್' ಅರೆಸ್ಟ್!
ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಉಳಿದ ಶ್ರೀಗಂಧದ ತುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ