ಬೃಹತ್ ಗಾತ್ರದ ಕಲ್ಲು ಉರುಳಿಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೌಡೂರು ತಾಂಡದಲ್ಲಿ ನಡೆದಿದೆ.
ರಾಯಚೂರು (ಅ.15): ಬೃಹತ್ ಗಾತ್ರದ ಕಲ್ಲು ಉರುಳಿಬಿದ್ದು ಇಬ್ಬರು ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೌಡೂರು ತಾಂಡದಲ್ಲಿ ನಡೆದಿದೆ.
ದುರಂತದಲ್ಲಿ ಮಂಜುನಾಥ, ವೈಶಾಲಿ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಇನ್ನೋರ್ವ ರಘು(8) ಬಾಲಕನ ಕಾಲು ಮುರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಯಚೂರು: ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ತಾಯಿ-ಮಗಳು ನಾಪತ್ತೆ
ಮೂವರು ವಿದ್ಯಾರ್ಥಿಗಳು ಮೂರನೇ ತರಗತಿಯಲ್ಲಿ ಓದುತ್ತಿದ್ದರು ಎನ್ನಲಾಗಿದೆ. ದಸರಾ ಹಬ್ಬದ ಪ್ರಯುಕ್ತ ಶಾಲೆಗಳಿಗೆ ರಜೆ ಘೋಷಿಸಿರುವ ಹಿನ್ನೆಲೆ ಪೋಷಕರ ಜೊತೆಗೆ ಜಮೀನಿಗೆ ಬಂದಿದ್ದ ಮಕ್ಕಳು. ಜಮೀನು ಬದಿಯಲ್ಲಿ ಬೃಹತ್ ಬಂಡೆಗಳು ಹಾಕಲಾಗಿತ್ತು. ಇದೇ ಕಲ್ಲು ಬಂಡೆಗಳ ಸುತ್ತ ಆಟವಾಡುತ್ತಿದ್ದ ಮಕ್ಕಳು. ಮಕ್ಕಳು ಆಟವಾಡುವಾಗಲೇ ಕುಸಿದುಬಿದ್ದಿರುವ ಬೃಹತ್ ಬಂಡೆ. ಬಂಡೆಗಳ ಕೆಳಗೆ ಆಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ಏಕಾಏಕಿ ಉರುಳಿಬಿದ್ದಿ. ಮಕ್ಕಳ ನರಳಾಟ ಕೇಳಿ ಓಡಿಬಂದಿರುವ ಪೋಷಕರು. ತಕ್ಷಣ ಕಲ್ಲು ಬಂಡೆ ಎತ್ತಿಹಾಕದಷ್ಟು ಭಾರವಾಗಿದ್ದರಿಂದ ಪೋಷಕರು ಮಕ್ಕಳ ನರಳಾಟ ಕೇಳಿ ಅಸಹಾಯಕರಾಗಿದ್ದಾರೆ. ಕಣ್ಮುಂದೆ ಅಟವಾಡುತ್ತಿದ್ದ ದಾರುಣ ಸಾವು ಕಂಡು ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ. ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಬಂದು ಬೃಹತ್ ಬಂಡೆ ಎತ್ತಿಹಾಕಿದ್ದಾರೆ.