ರೈತರ ಮನೆ ಮುಂದಿನ ಕುರಿಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಬೆಂಗಳೂರು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಪರಶುರಾಮ್, ಅಮರೇಶ್, ರಮೇಶ್, ಹುಲುಗಪ್ಪ, ವೆಂಕಟೇಶ್, ಈರಣ್ಣ ಬಂಧಿತರು.
ಬೆಂಗಳೂರು (ಅ.16): ರೈತರ ಮನೆ ಮುಂದಿನ ಕುರಿಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಬೆಂಗಳೂರು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.
ಪರಶುರಾಮ್, ಅಮರೇಶ್, ರಮೇಶ್, ಹುಲುಗಪ್ಪ, ವೆಂಕಟೇಶ್, ಈರಣ್ಣ ಬಂಧಿತರು. ಬಂಧಿತ ಆರೋಪಿಗಳಿಂದ 2.43 ಲಕ್ಷ ರೂ. ನಗದು, 29 ಕುರಿ/ ಮೇಕೆಗಳು ಹಾಗೂ ಒಂದು ಬೊಲೆರೊ ವಾಹನ ವಶಕ್ಕೆ ಪಡೆದ ಪೊಲೀಸರು. ಆರೋಪಿಗಳು ಸಿಂಧನೂರು ಮೂಲದವರಾಗಿದ್ದಾರೆ. ಮೇಕೆ, ಕುರಿಗಳನ್ನು ಕದ್ದು ಮಾರಾಟ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಖದೀಮರು.
undefined
ಇತ್ತೀಚೆಗೆ ಬೆಂಗಳೂರಿನ ಹೊರವಲಯದ ಶೆಟ್ಟಿಗೆರೆ, ದೊಡ್ಡಜಾಲ ಬಿಲ್ಲಮಾರನಹಳ್ಳಿ ಗ್ರಾಮದಲ್ಲಿ ಒಂದೇ ದಿನ ಕೈಚಳಕ ತೋರಿದ್ದ ಆರೋಪಿಗಳು. ದೊಡ್ಡಜಾಲ ಬಳಿ ರೈತರನೋರ್ವ ಮನೆ ಬಳಿ ಸಾಕಿದ್ದ ಕುರಿಗಳನ್ನು ಕದ್ದೊಯ್ದಿದ್ದ ಗ್ಯಾಂಗ್. ಬೆಂಗಳೂರಲ್ಲಿ ಕದ್ದ ಕುರಿ, ಮೇಕೆಗಳನ್ನು ನಗರದಲ್ಲೇ ಮಾರಾಟ ಮಾಡಿದರೆ ಸಿಕ್ಕಿಬೀಳುವ ಅಪಾಯದಿಂದ ಹೊಸಪೇಟೆ, ಬಳ್ಳಾರಿಯಲ್ಲಿ ಮಾರಾಟ ಮಾಡುತ್ತಿದ್ದ ಖದೀಮರು.
ರಾಯಚೂರು: ಬೃಹತ್ ಕಲ್ಲುಬಂಡೆ ಉರುಳಿಬಿದ್ದು ಮಕ್ಕಳಿಬ್ಬರು ದಾರುಣ ಸಾವು
ರಾತ್ರೋರಾತ್ರಿ ಗ್ರಾಮಗಳಿಗೆ ನುಗ್ಗುತ್ತಿದ್ದ ಗ್ಯಾಂಗ್ ಮನೆ ಮುಂದೆ ಕಟ್ಟಿಹಾಕಿರುವ ಮೇಕೆ, ಕುರಿಗಳನ್ನ ಬೊಲೆರೊ ವಾಹನದಲ್ಲಿ ತುಂಬಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಿದ್ದ ಗ್ಯಾಂಗ್. ನಗರದ ಹೊರವಲಯದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಂದೇ ರೀತಿ ಕಳ್ಳತನ ಮಾಡಿ ಕೈಚಳಕ ತೋರಿಸಿದ್ದ ಗ್ಯಾಂಗ್. ಪೊಲೀಸರಿಗೆ ದೂರು ಬಂದ ಹಿನ್ನೆಲೆ ಗ್ಯಾಂಗ್ ಬೆನ್ನುಹತ್ತಿದ್ದ ಪೊಲೀಸರು. ಕೊನೆಗೂ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.