Udupi crime: ಮನೆ ಬೀಗ ಮುರಿದು ಚಿನ್ನಾಭರಣ ದೋಚಿದ್ದ ಖತರ್‌ನಾಕ್ ಕಳ್ಳರ ಸೆರೆ

By Ravi JanekalFirst Published Jan 23, 2023, 9:56 PM IST
Highlights

2022 ರ ಸೆಪ್ಟೆಂಬರ್ ನಲ್ಲಿ ಬ್ರಹ್ಮಾವರ ವೃತ್ತದ ಕೋಟ ಠಾಣಾ ವ್ಯಾಪ್ತಿಯ ಪಾಂಡೇಶ್ವರ ಗ್ರಾಮದ ಮಠದ ತೋಟ ಸಾಸ್ತಾನ ಎಂಬಲ್ಲಿರುವ ರಾಜೇಶ ಪೂಜಾರಿರವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಬ್ರಹ್ಮಾವರ ವೃತ್ತನಿರೀಕ್ಷಕ ಅನಂತಪದ್ಮನಾಭ ಅವರ ತಂಡವು ಯಶಸ್ವಿಯಾಗಿದೆ. 

ಉಡುಪಿ (ಜ.23) : 2022 ರ ಸೆಪ್ಟೆಂಬರ್ ನಲ್ಲಿ ಬ್ರಹ್ಮಾವರ ವೃತ್ತದ ಕೋಟ ಠಾಣಾ ವ್ಯಾಪ್ತಿಯ ಪಾಂಡೇಶ್ವರ ಗ್ರಾಮದ ಮಠದ ತೋಟ ಸಾಸ್ತಾನ ಎಂಬಲ್ಲಿರುವ ರಾಜೇಶ ಪೂಜಾರಿರವರ ಮನೆಯಲ್ಲಿ ರಾತ್ರಿ ಮನೆಯ ಬಾಗಿಲು ಒಡೆದು ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಆರೋಪಿಗಳನ್ನು ಬ್ರಹ್ಮಾವರ ವೃತ್ತನಿರೀಕ್ಷಕ ಅನಂತಪದ್ಮನಾಭ ಅವರ ತಂಡವು ಬಂಧಿಸುವಲ್ಲಿ ಯಶಸ್ವಿಯಾಗಿದೆ. 

ಕಾಪು ತಾಲೂಕಿನ ಎಲ್ಲೂರು ಗ್ರಾಮದ ರಾಜೇಶ್ ದೇವಾಡಿಗ(Rajesh Devadiga) ( 38) ಹಾಗು ಕಾರ್ಕಳ ತಾಲೂಕಿನ ಹೊಸ್ಮಾರು ಈದು ಗ್ರಾಮದ ರಿಯಾಝ್(Riyaz) ( 39) ಬಂಧಿತ ಆರೋಪಿಗಳು.

 Udupi Crime: ವಜ್ರದುಂಗುರ, ಚಿನ್ನ ಕದಿಯುತ್ತಿದ್ದ ನಟೋರಿಯಸ್ ಕಳ್ಳನ ಸೆರೆ

ಜ. 22 ರಂದು ಕೋಟ ಠಾಣಾ ಸರಹದ್ದಿನ ಸಾಯಬರಕಟ್ಟೆ ಬಳಿ ಖಚಿತ ಮಾಹಿತಿಯಂತೆ ವಿಶೇಷ ತಂಡವು ಆರೋಪಿ ಪತ್ತೆಯ ಬಗ್ಗೆ ವಾಹನ ತಪಾಸಣೆ ನಡೆಸುವ ಸಮಯದಲ್ಲಿ ಬಂದ ಪೋರ್ಡ್‌ ಮಾಂಡಿಯೋ ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ರಾಜೇಶ ದೇವಾಡಿಗ ಮತ್ತು ಮೊಹಮ್ಮದ್‌‌‌‌ ರಿಯಾಜ್‌‌‌‌‌‌‌ ಹೊಸ್ಮಾರ್‌‌‌‌ ಅಲಿಯಾಸ್ ರಿಯಾಜ್‌‌‌‌‌‌ ಎಂಬುವವರಿದ್ದು ಕಾರನ್ನು ಪರಿಶೀಲನೆ ನಡೆಸಿದಾಗ ಅವರ ಬಳಿ ಯಾವುದೇ ದಾಖಲೆಯಿಲ್ಲದ ಚಿನ್ನಾಭರಣಗಳು ಇರುವುದು ಕಂಡುಬಂದಿರುತ್ತದೆ. 

ಈ ಬಗ್ಗೆ ವಿಚಾರಿಸಿದಾಗ 2022 ನೇ ಸಾಲಿನ ಸೆಪ್ಟಂಬರ್‌‌‌‌‌‌‌‌ ತಿಂಗಳಲ್ಲಿ ಸಾಸ್ತಾನದ  ಚರ್ಚ್‌ ಬಳಿ ಒಂದು ಮನೆಯಿಂದ ಕಳವು ಮಾಡಿದ ಚಿನ್ನಾಭರಣಗಳಾಗಿರುವುದಾಗಿ ಅವುಗಳನ್ನು ಮಾರಾಟ ಮಾಡಲು ಶಿವಮೊಗ್ಗ ಕಡೆಗೆ ಹೋಗುತ್ತಿರುವುದಾಗಿ ಒಪ್ಪಿಕೊಂಡಿರುತ್ತಾರೆ.   

ಈ ಆರೋಪಿಗಳಿಂದ ಒಟ್ಟು 19 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವುಗಳಲ್ಲಿ ಕಳ್ಳತನ ನಡೆಸಿದ ಸುಮಾರು 15 ಲಕ್ಷದ ಚಿನ್ನಾಭರಣ, ಕಳ್ಳತನ ಮಾಡಿದ ಹಣದಿಂದ ಖರೀದಿಸಿದ ಸುಮಾರು 2 ಲಕ್ಷ 50 ಸಾವಿರ ಮೌಲ್ಯದ ಪೋರ್ಡ್‌ ಮಾಂಡಿಯೋ ಕಾರು, ಸುಮಾರು 1 ಲಕ್ಷ ಮೌಲ್ಯದ ಹಿರೋ ಕಂಪೆನಿಯ ಡೆಸ್ಟೀನಿ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 50,000 ಸಾವಿರ ಮೌಲ್ಯದ  ಹೊಂಡಾ ಆ್ಯಕ್ಟೀವ್ ಮೋಟಾರ್ ಸೈಕಲ್ ಸ್ವಾಧೀನ ಪಡಿಸಲಾಗಿರುತ್ತದೆ. 


ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂಎಚ್ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ, ಡಿವೈಎಸ್ಪಿ ದಿನಕರ ಪಿ,ಕೆ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಕೋಟ ಠಾಣಾ ಪಿ.ಎಸ್‌. ಐ ಮಧು ಬಿ.ಈ, ತನಿಖಾ ಪಿ.ಎಸ್.ಐ ಪುಷ್ಪಾ, ಪ್ರೋಬೇಷನರಿ ಪಿ.ಎಸ್.ಐ ನೂತನ್ ಡಿ.ಈ, ಕೋಟ ಠಾಣಾ ಸಿಬ್ಬಂದಿಯವರಾದ ಎ.ಎಸ್.ಐ ರವಿಕುಮಾರ್, ರಾಘವೇಂದ್ರ, ಪ್ರಸನ್ನ, ಬ್ರಹ್ಮಾವರ ಠಾಣಾ ಸಿಬ್ಬಂದಿಗಳಾದ ವೆಂಕಟರಮಣ ದೇವಾಡಿಗ, ಸಂತೋಷ ರಾಥೋಡ್, ಬ್ರಹ್ಮಾವರ ವೃತ್ತ ಕಛೇರಿ ಸಿಬ್ಬಂದಿಯವರಾದ ಎ.ಎಸ್.ಐ ಕೃಷ್ಣಪ್ಪ, ಪ್ರದೀಪ ನಾಯಕ್ ಮತ್ತು ಜಿಲ್ಲಾ ಸಿಡಿಆರ್‌ ವಿಭಾಗದ ನಿತಿನ್‌, ದಿನೇಶ್‌, ಹಾಗೂ ಚಾಲಕರಾದ ಗೋಪಾಲ ಮತ್ತು ಶೇಖರ ಸೇರುಗಾರ್ ಪ್ರಮುಖ ಪಾತ್ರ ವಹಿಸಿರುತ್ತಾರೆ. ಕಾರ್ಯಾಚರಣೆಯಲ್ಲಿ ಕಾಪು ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿಯವರು ಸಹಕರಿಸಿರುತ್ತಾರೆ. ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಹೆಚ್ ತಂಡವನ್ನು ಅಭಿನಂದಿಸಿದ್ದಾರೆ. 

ಈ ಇಬ್ಬರು ಆರೋಪಿಗಳು ಹಿರಿಯಡ್ಕ ಜೈಲಿನಲ್ಲಿರುವಾಗ ಪರಿಚಯವಾಗಿದ್ದು ರಾತ್ರಿ ಮನೆ ಕಳ್ಳತನ ನಡೆಸಲು ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾತ್ರಿ ಹೊತ್ತು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ನಡೆಸಲು ಸಂಚು ನಡೆಸುತ್ತಿದ್ದರು. 

ರಾಜೇಶ್‌‌‌‌‌ ದೇವಾಡಿಗ:

ಈತನು ಹಳೆಯ ಕಳ್ಳತನದ ಆರೋಪಿಯಾಗಿದ್ದು ಜೈಲುವಾಸ ಅನುಭವಿಸಿ ಬಿಡುಗಡೆಗೊಂಡಿರುತ್ತಾನೆ. ಈಗಾಗಲೇ ಈತನ ಮೇಲೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 12 ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ಈತನು ಕಾಪು ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ, ಶಿರ್ವ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ 4 ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.  

Udupi: ದೇವಾಲಯಗಳ ನಗರಿ ಉಡುಪಿಯಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ!

ಮೊಹಮ್ಮದ್‌‌‌‌ ರಿಯಾಜ್‌‌‌‌‌‌‌ ಹೊಸ್ಮಾರ್‌‌‌:

ಈತನು ಮೇಲೆ 2018 ರಲ್ಲಿ ಕಾರ್ಕಳದ ಪ್ಲೋರಿನ್ ಮಚಾದೋ ರವರ ಕೊಲೆ ಹಾಗೂ ಸುಲಿಗೆ ಪ್ರಕರಣ ಹಾಗೂ 2021 ರಲ್ಲಿ ಕಾಸರಗೊಡು ಜಿಲ್ಲೆಯಲ್ಲಿ ನಡೆದ ಪ್ರಮುಖ ಪ್ರಕರಣವಾದ ಮಂಜೇಶ್ವರದ ರಾಜಧಾನಿ ಜ್ಯುವೆಲರ್ಸ್‌ ದರೋಡೆ ಪ್ರಕರಣದ ಆರೋಪಿಯಾಗಿರುತ್ತಾನೆ.     

click me!