Bengaluru: ಮನೆಯಿಂದ ಮನೆಗೆ ಜಿಗಿವಾಗ ಕೆಳಕ್ಕೆ ಬಿದ್ದು ಮನೆಗಳ್ಳ ಸ್ಥಳದಲ್ಲೇ ಸಾವು

Kannadaprabha News   | Asianet News
Published : Jan 16, 2022, 08:30 AM ISTUpdated : Jan 16, 2022, 08:33 AM IST
Bengaluru: ಮನೆಯಿಂದ ಮನೆಗೆ ಜಿಗಿವಾಗ ಕೆಳಕ್ಕೆ ಬಿದ್ದು ಮನೆಗಳ್ಳ ಸ್ಥಳದಲ್ಲೇ ಸಾವು

ಸಾರಾಂಶ

*   ವಿಲ್ಸನ್‌ಗಾರ್ಡನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ  *   ಚಾವಣಿಗೆ ಜಿಗಿಯುವಾಗ ತುಂಡಾದ ಶೀಟ್‌: ಆಯತಪ್ಪಿ ಬಿದ್ದು ಕಳ್ಳ ಸಾವು *   ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವು  

ಬೆಂಗಳೂರು(ಜ.15): ವೃತ್ತಿಪರ ಕಳ್ಳನೊಬ್ಬ(Professional Thief) ಮನೆಯ ಶೀಟಿನ ಚಾವಣಿಯಿಂದ ಬೇರೊಂದು ಮನೆ ಶೀಟಿನ ಚಾವಣಿ ಮೇಲೆ ಜಿಗಿಯುವ ವೇಳೆ ಶೀಟ್‌ತುಂಡಾಗಿ ನೆಲಕ್ಕೆ ಬಿದ್ದು ಮೃತಪಟ್ಟಿರುವ(Death) ಘಟನೆ ಶನಿವಾರ ವಿಲ್ಸನ್‌ಗಾರ್ಡನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಿದ್ದಾಪುರ ನಿವಾಸಿ ಥಾಮಸ್‌(37) ಮೃತ ವ್ಯಕ್ತಿ. ಬೆಳಗ್ಗೆ 9.30ರ ಸುಮಾರಿಗೆ ನಾರಾಯಣಪುರದ ಶೀಟಿನ ಮನೆಯ ಚಾವಣಿ ಏರಿದ್ದು, ಮೂರ್ನಾಲ್ಕು ಮನೆಗಳ ಛಾವಣಿಗೆ ಜಿಗಿದಿದ್ದಾನೆ. ಬಳಿಕ ಮತ್ತೊಂದು ಶೀಟಿನ ಮನೆಯ ಚಾವಣಿ ಮೇಲೆ ಜಿಗಿಯುವಾಗ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

Theft Cases: ಮನೆಗಳುವು ಮಾಡುತ್ತಿದ್ದ ಮೂವರು ಜೈಲ್‌ ಫ್ರೆಂಡ್ಸ್‌ ಮತ್ತೆ ಜೈಲು ಪಾಲು..!

ಯಾವ ಕಾರಣಕ್ಕೆ ಥಾಮಸ್‌ಮನೆಯ ಚಾವಣಿ ಏರಿದ್ದ ಎಂಬುದು ಗೊತ್ತಿಲ್ಲ. ಥಾಮಸ್‌ವೃತ್ತಿಪರ ಕಳ್ಳನಾಗಿದ್ದು, ಮಡಿವಾಳ, ಸಿದ್ದಾಪುರ, ಮೈಕೋ ಲೇಔಟ್‌ಸೇರಿದಂತೆ ವಿವಿಧ ಪೊಲೀಸ್‌ಠಾಣೆಗಳಲ್ಲಿ ಮನೆಗಳವು ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ಆರೋಪಿಗೆ(Accused) ಜೈಲು(Jail) ಶಿಕ್ಷೆಯಾಗಿದ್ದು, ಜೈಲು ವಾಸವನ್ನೂ ಅನುಭವಿಸಿದ್ದಾನೆ. ಕೆಲ ಪ್ರಕರಣಗಳಲ್ಲಿ ಜಾಮೀನಿನ(Bail)  ಮೇಲೆ ಹೊರಬಂದಿದ್ದಾನೆ. ಆದರೆ, ಕಳೆದ ಐದು ತಿಂಗಳಿಂದ ಮನೆಗೆ ಹೋಗಿಲ್ಲ ಎಂಬ ವಿಚಾರ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಥಾಮಸ್‌ ಬೆಳಗ್ಗೆ ಯಾವ ಕಾರಣಕ್ಕೆ ನಾರಾಯಣಪುರಕ್ಕೆ ಬಂದಿದ್ದ. ಏತಕ್ಕಾಗಿ ಮನೆ ಚಾವಣಿ ಏರಿದ್ದ ಹಾಗೂ ಘಟನೆ ವೇಳೆ ಈತನ ಜತೆಗೆ ಬೇರೆ ಯಾರಾದರೂ ಇದ್ದರೆ ಎಂಬುದು ತಿಳಿದು ಬಂದಿಲ್ಲ. ಥಾಮಸ್‌ಗಾಂಜಾ ಮತ್ತಿನಲ್ಲಿ ಬಿದ್ದಿರುವ ಬಗ್ಗೆ ಖಚಿತವಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಈ ಬಗ್ಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸರು ಹೇಳಿದ್ದಾರೆ. ವಿಲ್ಸನ್‌ಗಾರ್ಡನ್‌ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಿಂದ ಬೆಳ್ಳಿ ವಸ್ತುಗಳು ಕಳವು

ಕಾರ್ಕಳ(Karkala): ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿದ ಕಳ್ಳರು, ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ ಘಟನೆ ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮದ ಜಾರ್ಕಳ ಕುಕ್ಕುಂದೂರು ವಿಜೇಂದ್ರ ನಾಯಕ್‌ ಎಂಬವರ ಮನೆಯಲ್ಲಿ ನಡೆದಿದೆ. 

ಜ.11ರಂದು ಮನೆಯಿಂದ ಹೊರಗೆ ಹೋಗಿದ್ದ ವಿಜೇಂದ್ರ ನಾಯಕ್‌ಕುಟುಂಬವು ಜ.14ರಂದು ಮನೆಗೆ ಹಿಂದಿರುಗಿ ಬಂದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ. ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಬೆಳ್ಳಿಯ ವಸ್ತುಗಳು, ವಾಚ್‌ಸೇರಿದಂತೆ ಒಟ್ಟು 35 ಸಾವಿರ ಮೌಲ್ಯದ ಸಾಮಗ್ರಿಗಳನ್ನು ಕಳವುಗೈದಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Theft Cases: ಜೇಬಿಗೆ ಕತ್ತರಿ ಹಾಕಿ ಚಿನ್ನಾಭರಣ ಕದ್ದಿದ್ದ 3 ಖದೀಮರ ಬಂಧನ

ಗಮನ ಬೇರೆಡೆ ಸೆಳೆದು 1.40 ಲಕ್ಷ ಕಳ್ಳತನ

ಸುರಪುರ: ಬ್ಯಾಂಕಿನಿಂದ(Bank) ಹಣ ಡ್ರಾ ಮಾಡಿಕೊಂಡು ಬರುತ್ತಿದ್ದಾಗ, ಗಮನ ಬೇರೆಡೆ ಸೆಳೆದು ಬ್ಯಾಗಿನಲ್ಲಿದ್ದ 1.40 ಲಕ್ಷ ರು.ಗಳ ಕಳ್ಳತನ ಮಾಡಿರುವ ಘಟನೆ ನಗರದ ತರಕಾರಿ ಮಾರುಕಟ್ಟೆಯ ಪಟೇಲ್‌ವೃತ್ತದಿಂದ ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ಹೋಗುವ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ನಡೆದಿದೆ. 

ತಾಲೂಕಿನ ಹಂದ್ರಾಳ ಗ್ರಾಮದ ಸಂಜೀವರೆಡ್ಡಿ ಎಂಬುವವರೇ ಹಣ(Money) ಕಳೆದುಕೊಂಡವರು. ಕೆನರಾ ಬ್ಯಾಂಕಿನಿಂದ ಸಂಜೀವ ರೆಡ್ಡಿ 2 ಲಕ್ಷ ರು.ಗಳ ಡ್ರಾ ಮಾಡಿಕೊಂಡಿದ್ದು, ಇದರಲ್ಲಿ 60 ಸಾವಿರ ರು.ಗಳನ್ನು ಬೇರೊಬ್ಬರಿಗೆ ನೀಡಿದ್ದಾರೆ. ಉಳಿದ ಹಣವನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಮನೆಗೆ ತೆರಳುವ ಸಂದಂರ್ಭದಲ್ಲಿ ತರಕಾರಿ ಮತ್ತು ದಿನ ಬಳಕೆ ವಸ್ತು ಖರೀದಿ ಮಾಡುತ್ತಿರುವಾಗ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಕಳ್ಳತನದ ಬಗ್ಗೆ ಈಗಾಗಲೇ ತನಿಖೆ(Investigation) ಆರಂಭಿಸಲಾಗಿದೆ. ಸತ್ಯಾಸತ್ಯತೆ ತಿಳಿದು ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಸಿಪಿಐ ಸುನೀಲ್‌ ಮೂಲಿಮನಿ ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!