* ಮಹಿಳೆ ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆ
* ಈ ಜಗಳದ ಹಿಂದೆ ಅಕ್ರಮ ಸಂಬಂಧದ ಕಥೆ
* ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಘಟನೆ
ಯಾದಗಿರಿ, (ಜ.15): ಅಕ್ರಮ ಸಂಬಂಧ (Extra Marital Affair )ನಿರಾಕರಿಸಿದ್ದಕ್ಕೆ ಮಹಿಳೆಯನ್ನ ಹತ್ಯೆಗೆ ಯತ್ನಿಸಿರುವ ಘಟನೆ ಇಂದು(ಶನಿವಾರ) ಯಾದಗಿರಿ(Yadgir) ಜಿಲ್ಲೆಯ ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಲ್ಲಮ್ಮ ಹಲ್ಲೆಗೊಳಗಾದ ಮಹಿಳೆ. ಮಲ್ಲಮ್ಮ ಎನ್ನುವ ಮಹಿಳೆಗೆ ಮೂರು ಮಕ್ಕಳು ಇದ್ದಾರೆ. ಆದರೂ ಅದೇ ಗ್ರಾಮದ ವೆಂಕಪ್ಪ ಎನ್ನುವ ಅನೈತಿಕ ಸಂಬಂಧಕ್ಕೆ ಆಹ್ವಾನಿಸಿದ್ದಾನೆ. ಆದ್ರೆ, ಮಹಿಳೆ ನಿರಾಕರಿಸಿದ್ದಾಳೆ.
undefined
Crime News ಕೊಟ್ಟ ಸಾಲ ಕೇಳಿದ್ದಕ್ಕೆ ಅನೈತಿಕ ಸಂಬಂಧ ಪಟ್ಟ, ಮನನೊಂದು ತಾಯಿ-ಮಕ್ಕಳು ಆತ್ಮಹತ್ಯೆ
ಆದರೂ ಬಿಡದ ವೆಂಕಪ್ಪ ಮಹಿಳೆ ಹೋದಲೆಲ್ಲಾ ಹಿಂದೆ-ಹಿಂದೆ ಗಂಟು ಬೀಳುತ್ತಿದ್ದ. ಈ ವಿಚಾರ ಗ್ರಾಮದ ಮುಖಂಡ ಬಳಿ ಹೋಗಿತ್ತು. ಈ ರೀತಿ ಮಾಡಬೇಡ ಎಂದು ಊರಿನ ಮುಖಂಡರು ವೆಂಕಪ್ಪನಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ವೆಂಕಪ್ಪ, ತನ್ನ ಮರ್ಯಾದೆ ಕಳೆದಳು ಎಂದು ಮಹಿಳೆ ಮೇಲೆ ಕೊಂಪಗೊಂಡಿದ್ದ.
ಮಕರಸಂಕ್ರಾಂತಿ ಹಬ್ಬದ ಹಿನ್ನೆಲೆ ಗ್ರಾಮದ ಹನುಮಾನ ಮಂದಿರ ಪ್ರದಕ್ಷಣೆ ಹಾಕುತ್ತಿದ್ದ ವೇಳೆ ವೆಂಕಪ್ಪ ಹಲ್ಲೆ (assault) ಮಾಡಿದ್ದಾನೆ. ಅಲ್ಲದೇ ಮೇಲೆ ಕಲ್ಲು ಎತ್ತಿ ಹಾಕುವಾಗ ಜನರನ್ನು ಕಂಡು ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಪ್ರೇಯಸಿ ಮಲ್ಲಮ್ಮಳನ್ನ ಶಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಣದ ವಿಚಾರಕ್ಕೆ ಜಗಳ
ಹೌದು....ಮೇಲಿನಂದು ವಿಚಾರವಾದರೆ, ಈ ಇಬ್ಬರ ನಡುವೆ ಮತ್ತೊಂದು ವಿಚಾರ ಇದೆ ಎಂದು ಸುದ್ದಿಯಾಗಿದೆ. ಮಲ್ಲಮ್ಮ ಹಾಗೂ ವೆಂಕಪ್ಪ ನಡುವೆ ಈಗಾಗಲೇ ಅಕ್ರಮ ಸಂಬಂಧ ಇತ್ತು. ಹಣದ ವಿಚಾರಕ್ಕೆ ಈ ಜಗಳ ನಡೆದಿದೆ ಎನ್ನಲಾಗುತ್ತಿದೆ.
ಬೆಂಗಳೂರಲ್ಲಿದ್ದ ಮಲ್ಲಮ್ಮ, ಎಳ್ಳು ಅಮವಾಸ್ಯೆದಂದು ಕುಟುಂಬಸ್ಥರೊಂದಿಗೆ ಊರಿಗೆ ಬಂದಿದ್ದಳು. ಆ ವೇಳೆ ಇಬ್ಬರ ನಡುವೆ ಹಣಕ್ಕೆ ಜಗಳವಾಗಿದೆ.
ಹಣ ನೀಡದಕ್ಕೆ ಹಾಗೂ ಮೂರು ಮಕ್ಕಳಿವೆ ಎಂದು ಕಾರಣ ಹೇಳಿ ನಮ್ಮಿಬ್ಬರ ಸಂಬಂಧ ಇಲ್ಲಿಗೆ ಬಿಟ್ಟು ಬಿಡೋಣ ಎಂದಿದ್ದಾಳಂತೆ. ಹೀಗಾಗಿ ವೆಂಕಪ್ಪ ಕೋಪಗೊಂಡು ಕೊಲೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಎಣ್ಣೆಗೆ ಹಣ ಕೊಟ್ಟಲ್ಲವೆಂದು ಹತ್ಯೆ
ಮದ್ಯ ಖರೀದಿಸಲು ಹಣ ನೀಡದ 7 ತಿಂಗಳ ಗರ್ಭಿಣಿಯನ್ನು ಆಕೆಯ ಗಂಡನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್‌ನ (Jharkhand) ಛತ್ರಾ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ. ಹೆಂಡತಿಯನ್ನು ಕೊಂದ ಆರೋಪಿಯನ್ನು ತಿಲೇಶ್ವರ ಗಂಜು ಎಂದು ಗುರುತಿಸಲಾಗಿದ್ದು, ಶುಕ್ರವಾರ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ತಿಲೇಶ್ವರ್ ಕಳೆದ ವರ್ಷ ಮೇ 25ರಂದು ಪ್ರಿಯಾ ದೇವಿ ಎಂಬಾಕೆಯನ್ನು ಮದುವೆಯಾಗಿದ್ದ. ಹಜಾರಿಬಾಗ್ ನಿವಾಸಿಯಾಗಿರುವ ಪ್ರಿಯಾ ಅವರ ಸಹೋದರ ನರೇಶ್ ಗಂಜು ಅವರ ಪ್ರಕಾರ, ತಿಲೇಶ್ವರ್ ದಿನವೂ ಕಂಠಪೂರ್ತಿ ಕುಡಿದು ಪ್ರಿಯಾಗೆ ಥಳಿಸುತ್ತಿದ್ದ. ಆಲ್ಕೋಹಾಲ್ (Liquor) ಖರೀದಿಸಲು ಆತ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಮಾರಾಟ ಮಾಡುತ್ತಿದ್ದ.
ಕಳೆದ ಗುರುವಾರ ಆತ ತನ್ನ ಹೆಂಡತಿ ಪ್ರಿಯಾ ಬಳಿ ಆಲ್ಕೋಹಾಲ್ ಖರೀದಿಸಲು ಹಣ ಕೇಳಿದ್ದ. ಆದರೆ, ಆಕೆ ಹಣವನ್ನು ನೀಡಲು ನಿರಾಕರಿಸಿದ್ದಳು. ನಂತರ ಅವರು ಅವಳನ್ನು ಥಳಿಸಿದರು ಎಂದು ನರೇಶ್ ಹೇಳಿದ್ದಾರೆ. 7 ತಿಂಗಳ ಗರ್ಭಿಣಿಯಾಗಿದ್ದ ಪ್ರಿಯಾ ಜೊತೆಗೆ ಇದೇ ವಿಷಯಕ್ಕೆ ಜಗಳವಾಡಿದ ಆತ ಹಣಕ್ಕಾಗಿ ಪ್ರಿಯಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಲೀವಿಂಗ್ ರಿಲೇಷನ್‌ಶಿಪ್ನಲ್ಲಿದ್ದ ಪ್ರಿಯತಮೆ ಕೊಂದ ಆರೋಪಿ ಅರೆಸ್ಟ್
ಬೆಂಗಳೂರು: ಲೀವಿಂಗ್ ರಿಲೇಷನ್‌ಶಿಪ್ನಲ್ಲಿದ್ದ ಪ್ರಿಯತಮೆ ಮೇಲೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ನಡೆದಿದೆ. ಮಂಜುಳಾ ಕೊಲೆಯಾದವರು. ಸದ್ಯ ಘಟನೆ ಸಂಬಂಧ ಆರೋಪಿ ಮಂಜುನಾಥ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮೂರು ದಿನಗಳ ಹಿಂದೆ ಕೋಣನಕುಂಟೆ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು. ಕೋಣನಕುಂಟೆಯ ಬೀರೇಶ್ವರ ನಗರದಲ್ಲಿ ಗಂಡನಿಲ್ಲದ ಮಂಜುಳಾ(35) ಜೊತೆ ಮಂಜುನಾಥ್ ಲೀವಿಂಗ್ ರಿಲೇಷನ್‌ಶಿಪ್ನಲ್ಲಿದ್ದ. ಮಂಜುಳಾಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧವಿರೋದಾಗಿ ಅನುಮಾನಿಸಿ ಆಕೆಯನ್ನು ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸುವ ನಾಟಕವಾಡಿದ್ದ. ಸದ್ಯ ಕೋಣನಕುಂಟೆ ಠಾಣೆ ಪೊಲೀಸರು ಆರೋಪಿ ಮಂಜುನಾಥ್ನನ್ನು ಬಂಧಿಸಿದ್ದಾರೆ.