ಹೆತ್ತವಳಿಗೆ ಮಗನ ಭವಿಷ್ಯ ಮುಖ್ಯ; ಆದರೆ ಮಗನಿಗೆ ತಾಯಿ ಸಾವೇ ಮುಖ್ಯ!

Published : Oct 05, 2022, 11:11 AM ISTUpdated : Oct 05, 2022, 11:37 AM IST
ಹೆತ್ತವಳಿಗೆ ಮಗನ ಭವಿಷ್ಯ ಮುಖ್ಯ; ಆದರೆ ಮಗನಿಗೆ ತಾಯಿ ಸಾವೇ ಮುಖ್ಯ!

ಸಾರಾಂಶ

ಕೋಟ್ಯಂತರ ಮೌಲ್ಯದ ಆಸ್ತಿ ಕೊಟ್ಟರೂ ತೀರಲಿಲ್ಲ ಮಗನಿಗೆ ಹಣದ ದಾಹ. ವಯಸ್ಸಾದರೂ ಬದುಕಿದ್ದ ತಾಯಿ ಉಸಿರು ತೆಗೆದು ಸಾಯಿಸಲು ಮುಂದಾದ ಮಗ. ಇದು ನಿಜಕ್ಕೂ ಕರುಳು ಹಿಂಡುವ ಕಥೆ. ಬೆಂಗಳೂರಿನ ಆರ್.ಟಿ.ನಗರದಲ್ಲಿ ನಡೆದ ಘಟನೆ.

ಬೆಂಗಳೂರು (ಅ.5) : ಕೋಟ್ಯಂತರ ಮೌಲ್ಯದ ಆಸ್ತಿ ಕೊಟ್ಟರೂ ತೀರಲಿಲ್ಲ ಮಗನಿಗೆ ಹಣದ ದಾಹ. ವಯಸ್ಸಾದರೂ ಬದುಕಿದ್ದ ತಾಯಿ ಉಸಿರು ತೆಗೆದು ಸಾಯಿಸಲು ಮುಂದಾದ ಮಗ. ಇದು ನಿಜಕ್ಕೂ ಕರುಳು ಹಿಂಡುವ ಕಥೆ ಆಸ್ತಿಗಾಗಿ ಹೆತ್ತವಳನ್ನೇ ಕೊಲ್ಲಲು ಮುಂದಾಗಿದ್ದ ವ್ಯಕ್ತಿ ಬಂಧನ. ಜಾನ್ ಡಿ ಕ್ರೂಸ್(John de Cruce) (65) ಎಂಬ ವ್ಯಕ್ತಿಯೇ ಆಸ್ತಿಗಾಗಿ ಹೆತ್ತವಳನ್ನು ಕೊಲ್ಲಲು ಮುಂದಾಗಿದ್ದ ಕ್ರೂರಿ. ಆರ್ ಟಿ ನಗರದ ೨ನೇ ಬ್ಲಾಕ್ ನಲ್ಲಿ ನಡೆದ ಘಟನೆ 88 ವರ್ಷದ ತಾಯಿ ಕ್ಯಾಥರಿನ್ ಡಿ ಕ್ರೂಸ್ ಹತ್ಯೆಗೆ ಮುಂದಾಗಿದ್ದ ಮಗl

ತಾಯಿಯ ಹತ್ಯೆಗೈದ 'ಸುಪುತ್ರ', ಅಪರಾಧ ಮುಚ್ಚಿಡಲು ಅಂಗಾಂಗ ತಿಂದ!

ಕ್ಯಾಥರಿನ್‌ಗೆ ನಾಲ್ಕು ಜನ ಮಕ್ಕಳಲ್ಲಿ  ಮೊದಲನೇಯವನು ಜಾನ್ ಡಿ ಕ್ರೂಸ್. ಉಳಿದ ಇಬ್ಬರು ಗಂಡು ಮಕ್ಕಳು ಅಮೆರಿಕಾದಲ್ಲಿದ್ದರೆ, ಮಗಳು ಆಶ್ರಮದಲ್ಲಿದ್ದಾಳೆ. ಮೊದಲ ಮಗನ ಹೆಸರಿಗೆ ಆಸ್ತಿ ಬರೆದಿದ್ದ ಕ್ಯಾಥರಿನ್ ಗೆ ಹಲವು ಆರೋಗ್ಯ ಸಮಸ್ಯೆಗಳಿದ್ದವು. ಅದರಲ್ಲಿ ಉಸಿರಾಟದ ಸಮಸ್ಯೆ ಹಿನ್ನಲೆ ಆಕೆಗೆ ನಿರಂತರ ಆಕ್ಸಿಜನ್ ಪೂರೈಕೆ ಅಗತ್ಯವಾಗಿತ್ತು. ಹೀಗಾಗಿ ಅಮೆರಿಕಾದ ಮಗನ ಮೂಲಕ ಕೇರ್ ಟೇಕರ್ ಬಂದು ನೋಡಿಕೊಳ್ಳುತಿದ್ದಳು. ಇತ್ತ ಜಾನ್ ಗೆ ಆಸ್ತಿ ಬರೆದು ಕೊಟ್ಟಿದ್ದರೂ ಬದುಕಿದ್ದ ತಾಯಿ ಮೇಲೆ ಕೋಪವಿತ್ತು. ಆಸ್ತಿ ವಿಚಾರವಾಗಿ ತಾಯಿ ಜೊತೆ ಆಗಾಗ ಜಗಳ ಮಾಡುತಿದ್ದ ಮಗ ಜಾನ್.  ಕಳೆದ ತಿಂಗಳ 29ರಂದು ಸಂಜೆ ಮನೆಗೆ ನುಗ್ಗಿದ ಜಾನ್, ಆನಾರೋಗ್ಯದಲ್ಲಿರುವ ತಾಯಿಯೊಂದಿಗೆ ಜಗಳ ತೆಗೆದಿದ್ದಾನೆ. ಈ ವೇಳೆ ಕೇರ್ ಟೇಕರ್ ಹೊರಗೆ ತಳ್ಳಿ ತಾಯಿ ಕೊಲೆಗೆ ಯತ್ನಿಸಿದ್ದಾನೆ.

ತಾಯಿಯ ಆಕ್ಸಿಜನ್ ಪೈಪ್ ಕಿತ್ತು ಕೊಲೆಗೆ ಯತ್ನ:

ಕೊಲೆ ಮಾಡುವ ಉದ್ದೇಶದಿಂದಲೇ ಮನೆಗೆ ಬಂದಿದ್ದ ಜಾನ್, ತಾಯಿ ಅನಾರೋಗ್ಯದಲ್ಲಿದ್ದಾಳೆಂಬುದನ್ನು ಮರೆತು ಜಗಳಕ್ಕಿಳಿದು ಹಲ್ಲೆ ನಡೆಸಿದ್ದಾನೆ. ಈ ವೇಳೆ ತಡೆಯಲು ಬಂದ ಕೇರ್ ಟೇಕರ್‌ನ ಹೊರಗೆ ತಳ್ಳಿದ್ದಾನೆ. ಬಳಿಕ ತಾಯಿಗೆ ಅಳವಡಿಸಿದ್ದ ಆಕ್ಸಿಜನ್ ಪೈಪ್ ಕಿತ್ತು ಕೊಲೆ ಮಾಡಲು ಯತ್ನಿಸಿದ್ದಾನೆ. ಕೂಡಲೇ  ಪೊಲೀಸರಿಗೆ ಕರೆ ಮಾಡಿದ ಕೇರ್ ಟೇಕರ್. ಸ್ಥಳಕ್ಕೆ ಬಂದ ಆರ್ ಟಿ ನಗರ ಪೊಲೀಸರು ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ ಕೇರ್ ಟೇಕರ್ ದೂರಿನ ಮೇರೆಗೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಬಳಿಕ ತಾಯಿಯನ್ನೇ ಕೊಲೆ ಮಾಡಲು ಮುಂದಾಗಿದ್ದ ಮಗನ ಬಂಧಿಸಿದ ಆರ್ ಟಿನಗರ ಪೊಲೀಸರು. ಆರ್ ಟಿ ನಗರ ಪೊಲೀಸರಿಂದ ಮುಂದುವರೆದ ತನಿಖೆ.

ಚಿನ್ನದ ವ್ಯಾಪಾರಿ ಮೇಲೆ ಹಲ್ಲೆ; 2.11 ಕೋಟಿ ರೂ. ಕಸಿದು ಪರಾರಿಯಾದ ದರೋಡೆಕೋರರು!

ಕೇರ್ ಟೇಕರ್ ಕೊಟ್ಟಿರೋ ದೂರಿನಲ್ಲಿ ಏನಿದೆ?

ನಾನು ಸುಮಾರು 20 ವರ್ಷಗಳಿಂದ ಆಶ್ರಮ ನಡೆಸುತ್ತಿದ್ದು, ಈ ಆಶ್ರಮದಲ್ಲಿ ನ್ಯಾನ್ಸಿ ಡಿ ಕ್ರೂಸ್ 61 ವರ್ಷದ ಮಹಿಳೆ ಸುಮಾರು ಹದಿನೈದು ವರ್ಷಗಳಿಂದ ಆಶ್ರಯ ಪಡೆದಿದ್ದಾರೆ. ಈಕೆಯ ತಾಯಿ ಕ್ಯಾಥರೀನ್ ಡಿ.ಕ್ರೂಸ್. ಮೊದಲಿನಿಂದಲೂ ಆಗಾಗ ನಮ್ಮ ಆಶ್ರಮಕ್ಕೆ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದರು. ಈ ಸಮಯದಲ್ಲಿ ಮಗ ಜಾನ್ ಡಿ ಕ್ರೂಸ್ ಆಸ್ತಿಯ ವಿಚಾರಕ್ಕೆ ಜಗಳ ತೆಗೆದು ತೊಂದರೆ ಕೊಡುತ್ತಿದ್ದ ವಿಚಾರ ಕ್ಯಾಥರೀನ್ ಹೇಳುತ್ತಿದ್ದಳು. ಆಕೆ ತೀವ್ರ ಅನಾರೋಗ್ಯಕ್ಕೊಳಗಾದ ನಂತರ ಆಶ್ರಮಕ್ಕೆ ಬರುವುದು ನಿಲ್ಲಿಸಿದ್ದಳು.

ಇತ್ತೀಚೆಗೆ ಅಂದರೆ 25 ದಿನಗಳ ಹಿಂದೆ ಕ್ಯಾಥರೀನ್ ನನಗೆ ಫೋನ್ ಮಾಡಿ ಮನೆ ಬಳಿ ಬರುವಂತೆ ತಿಳಿಸಿದ್ದರು. ನಾನು ಮನೆಗೆ ಬಂದಾಗ ಕ್ಯಾಥರಿನ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಳು. ಇಂಥ ಸ್ಥಿತಿಯಲ್ಲೂ ಮಗ ಆಸ್ತಿ ವಿಚಾರವಾಗಿ ನಿತ್ಯ ತಾಯಿಯೊಂದಿಗೆ ಜಗಳ ತೆಗೆಯುತ್ತಿದ್ದ. ಜಾನ್‌ ಕ್ಯಾಥರೀನ್‌ ವಾಸವಾಗಿರುವ ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದ. ನಾನು ಕೇರ್ ಟೇಕರ್ ಆಗಿ ಮನೆಗೆ ಹೋದಾಗ ಕೆಲವು ದಿನಗಳ ಕಾಲ ಅಲ್ಲೇ ಇದ್ದುಕೊಂಡು ಆರೈಕೆ ಮಾಡಿದೆ. ಆದರೆ ಈ ವೇಳೆ ಜಾನ್ ತಾಯಿಗೆ ದಿನನಿತ್ಯ ತೊಂದರೆ ಕೊಡುತ್ತಿದ್ದ. ಬಾಗಿಲು, ಕಿಟಕಿ ಜೋರು ಬಡೆಯುವುದು, ಗಾಳಿ, ಬೆಳಕು ಅಡ್ಡವಾಗಿ ಏನಾದರೂ ಇಡುತ್ತಿದ್ದ ಎಂದು ಮಗನ ಪೈಶಾಚಿಕ ಕೃತ್ಯದ ಬಗ್ಗೆ ಕೇರ್ ಟೇಕರ್ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಈ ಪ್ರಕರಣ ನೋಡಿದಾಗ, ಆಸ್ತಿ, ಹಣಕ್ಕಾಗಿ ಜೀವನ ನೀಡಿದ ತಾಯಿಯನ್ನೇ ಕೊಲ್ಲುವಂಥ ಮಕ್ಕಳಿದ್ದಾರಲ್ಲ ಅಂತಾ ದುಃಖವಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?