ಬೆಂಗಳೂರು: ಕೂಲಿ ಕಾರ್ಮಿಕನ 6 ವರ್ಷದ ಮಗಳ ಮೇಲೆ 30 ವರ್ಷದ ಕಾಮುಕನ ಲೈಂಗಿಕ ದೌರ್ಜನ್ಯ

Published : Apr 23, 2024, 11:29 AM IST
ಬೆಂಗಳೂರು: ಕೂಲಿ ಕಾರ್ಮಿಕನ 6 ವರ್ಷದ ಮಗಳ ಮೇಲೆ 30 ವರ್ಷದ ಕಾಮುಕನ ಲೈಂಗಿಕ ದೌರ್ಜನ್ಯ

ಸಾರಾಂಶ

ಬೆಂಗಳೂರಿನಲ್ಲಿ 6 ವರ್ಷದ ಪುಟ್ಟ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಈ ಸಂಬಂಧ ಆರೋಪಿ ಮಮ್ಜುಲ್ ಎಂಬಾತನನ್ನು ಬಂಧಿಸಲಾಗಿದೆ.

ಬೆಂಗಳೂರು (ಏ.23): ಬೆಂಗಳೂರಿನಲ್ಲಿ 6 ವರ್ಷದ ಪುಟ್ಟ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಈ ಸಂಬಂಧ ಕೆ.ಆರ್ .ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ತನಿಖೆ ನಡೆಸಿರುವ ಪೊಲೀಸರು ಆರೋಪಿ ಮಮ್ಜುಲ್ ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿ ಮಮ್ಜುಲ್ (30) ಕೂಲಿ ಕೆಲಸ ಮಾಡೋ ದಂಪತಿ ಮಗಳ ಮೇಲೆ ಕಣ್ಣು ಹಾಕಿದ್ದ. ಬಾಲಕಿಯನ್ನು ಆಟವಾಡಿಸೋ ನೆಪದಲ್ಲಿ ಮೈ ಕೈ ಮುಟ್ಟಿ ಅಸಭ್ಯ ವರ್ತನೆ ತೋರಿದ್ದಾನೆ. ಇದನ್ನು ಗಮನಿಸಿದ ಬಾಲಕಿಯ ತಂದೆ ಆರೋಪಿಗೆ ಬೈದು ಕಳಿಸಿದ್ದರು.

ಗದಗ ಒಂದೇ ಕುಟುಂಬ ನಾಲ್ವರನ್ನು ಭೀಕರ ಹತ್ಯೆಗೈದ ಫಯಾಜ್ ಗ್ಯಾಂಗ್; ಹಿರಿ ಮಗನಿಂದಲೇ ಕುಟುಂಬದ ಕೊಲೆಗೆ ಸುಪಾರಿ!

ಬಾಲಕಿಯ ತಂದೆ ಬೈದಿದ್ದಕ್ಕೆ ಕುಪಿತಗೊಂಡಿದ್ದ ಆರೋಪಿ ಬಾಲಕಿಯ ತಾಯಿ ಕೆಲಸಕ್ಕೆ ಹೋಗಿದ್ರು, ತಂದೆ ಹಾಲು ತರಲು ಹೋಗಿದ್ದರು. ಈ ಸಮಯವನ್ನೇ ದುರ್ಬಳಕ್ಕೆ ಮಾಡಿಕೊಂಡ ಆರೋಪಿ ಮಗುವಿನ ಜೊತೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಬಾಲಕಿಯ ತಂದೆ ಮನೆಗೆ ವಾಪಸ್ ಬಂದಾಗ ಮಗು ಅಳುವುದು, ಕಿರುಚಾಡುವುದು ಕೇಳಿಸಿದೆ. ನೋಡಿದಾಗ ಮಗುವಿನ ಮೇಲೆ ಆರೋಪಿ  ಮಲಗಿದ್ದ. ತಕ್ಷಣ ಮಗುವಿನ ತಂದೆ ಪೊಲೀಸರಿಗೆ ಮಾಹಿತಿ ನೀಡಿದರು.

Bengaluru: ಕುಖ್ಯಾತ ರೌಡಿ ಕುಣಿಗಲ್ ಗಿರಿ ಕೊಲೆ ಸಂಚು, ತಿಪ್ಪಸಂದ್ರ ರೌಡಿಶೀಟರ್ ಜೋಶ್ವಾ ಅಟ್ಟಾಡಿಸಿದ ಗ್ಯಾಂಗ್!

ತಂದೆಯ ದೂರಿನ್ವಯ  ಫೋಕ್ಸೋ ಅಡಿ ಎಫ್ ಐಆರ್ ದಾಖಲಿಸಿಕೊಂಡ ಕೆ.ಪುರಂ ಠಾಣೆ ಪೊಲೀಸರು  ಸಿಸಿಟಿವಿಯಲ್ಲಿ ಆರೋಪಿ ಚಹರೆ ಪತ್ತೆ ಹಚ್ಚಿ ಬಂಧಿಸಿದರು. ಬಂಧಿತ ಆರೋಪಿ ಕೂಡ ಕಟ್ಟಡ ಕಾರ್ಮಿಕನಾಗಿದ್ದು, ಈತ ಪಶ್ಚಿಮ ಬಂಗಾಳದವನು ಎಂದು ತಿಳಿದುಬಂದಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!