
ಯಾರೇ ಕಣ್ಣೆದುರು ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗ್ತಿದ್ರೆ ಮನಸ್ಸು ತಡೆಯೋದಿಲ್ಲ. ಅವರ ರಕ್ಷಣೆಗೆ ಮುಂದಾಗ್ತೇವೆ. ಅದ್ರಲ್ಲೂ ರಕ್ತ ಸಂಬಂಧಿ ತಂಗಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗುತ್ತಿದ್ರೆ ಸುಮ್ಮನಿರೋಕೆ ಸಾಧ್ಯವೇ ಇಲ್ಲ. ಆದ್ರೆ ಇಲ್ಲೊಬ್ಬ ಅಣ್ಣ ತಂಗಿ ಬಚಾವ್ ಮಾಡುವ ಬದಲು ಆಟಿಕೆ ನೀಡಿದ್ದಾನೆ. ಅದಕ್ಕೆ ಆತ ನೀಡಿದ ಕಾರಣ ವಿಚಿತ್ರವಾಗಿದೆ.
ಈ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ. 26 ವರ್ಷದ ಲೋಯಿಕ್ ಡಿ ಮೇರಿ ತನ್ನ ತಂಗಿ ಈಜುಕೊಳದಲ್ಲಿ ಮುಳುಗುತ್ತಿದ್ದಾಗ ನೀರಿಗೆ ಹಾರದೆ, ಆಟಿಕೆಯ ಸಹಾಯದಿಂದ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾನೆ. ನೀರಿಗೆ ಹಾರಿ ತಂಗಿಯನ್ನು ರಕ್ಷಿಸಬಹುದಿತ್ತಲ್ಲ ಎನ್ನುವ ಪ್ರಶ್ನೆಗೆ, ನಾನು ನೀರಿಗೆ ಹಾರಿದ್ರೆ ನನ್ನ ಬಟ್ಟೆ ಒದ್ದೆಯಾಗ್ತಿತ್ತು ಎಂದಿದ್ದಾನೆ ಲೋಯಿಕ್ ಡಿ ಮೇರಿ. ಇದನ್ನು ಕೇಳಿ ಅವರ ಅಮ್ಮ ಕೂಡ ಶಾಕ್ ಆಗಿದ್ದಾರೆ. ಲೋಯಿಕ್ ಮಾನಸಿಕ ರೋಗಿ. ಸುಮಾರು ಮೂರು ವರ್ಷಗಳಿಂದ ಸೈಕೋಪಥಿಯಿಂದ ಬಳಲುತ್ತಿದ್ದಾನೆ.
ಸೈಕೋಪಥ್ ಬಗ್ಗೆ ಲೋಯಿಕ್ ಜನರಿಗೆ ಮಾಹಿತಿ ಕೂಡ ನೀಡಿದ್ದಾನೆ. ಸೀರಿಯಲ್ ಕಿಲ್ಲರ್ ಅಥವಾ ಹಿಂಸಾತ್ಮಕ ಅಪರಾಧಿ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ಇದು ಸರಿಯಲ್ಲ ಎಂದು ಲೋಯಿಕ್ ಹೇಳುತ್ತಾರೆ. ಸೈಕೋಪಥಿ ಹೊಂದಿರುವ ಪ್ರತಿಯೊಬ್ಬರೂ ಅಪರಾಧಿಗಳಾಗಿರುವುದಿಲ್ಲ ಎನ್ನುವುದು ಅವನ ಮಾತು. ಚಿಕ್ಕಂದಿನಿಂದಲೇ ತಾನು ಇತರ ಮಕ್ಕಳಿಗಿಂತ ಭಿನ್ನವಾಗಿದ್ದೇನೆ ಎಂದು ಲೋಯಿಕ್ಗೆ ಅನಿಸುತ್ತಿತ್ತಂತೆ. ತನ್ನ ಭಾವನೆಗಳನ್ನು ಮತ್ತು ಇತರರ ಭಾವನೆಗಳನ್ನು ಸಾಮಾನ್ಯ ಜನರಂತೆ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿತ್ತಂತೆ. ಇದನ್ನು ವಿವರಿಸಲು ಸಂಗೀತದ ಉದಾಹರಣೆ ನೀಡಿದ್ದಾನೆ. ಇತರರು ಸಂಗೀತ ಕೇಳುವಾಗ ಅದರ ಪದಗಳ ಜೊತೆಗೆ ಅದರ ರಾಗ ಮತ್ತು ಭಾವನೆಯನ್ನೂ ಅನುಭವಿಸುತ್ತಾರೆ. ಆದರೆ ತನಗೆ ಸಂಗೀತದ ಪದಗಳು ಮಾತ್ರ ಕೇಳಿಸುತ್ತವೆ, ಅದರ ಭಾವನೆಯನ್ನು ಅದೇ ರೀತಿಯಲ್ಲಿ ಅನುಭವಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾನೆ. ತಂಗಿ ಈಜುಕೊಳದಲ್ಲಿ ಮುಳುಗುತ್ತಿದ್ದ ಘಟನೆ ಕೂಡ ಇದಕ್ಕೆ ಒಂದು ಉದಾಹರಣೆ ಎಂದು ಲೋಯಿಕ್ ಹೇಳಿದ್ದಾರೆ.
ತನ್ನ ಬಾಲ್ಯದಲ್ಲಿ ನಡೆದ ಅನೇಕ ಘಟನೆಗಳನ್ನು ವಿವರಿಸಿದ ಲೋಹಿಕ್, ತನ್ನ ಮಾನಸಿಕ ಸ್ಥಿತಿ ಬಗ್ಗೆ ವಿವರಿಸಿದ್ದಾರೆ. ತಮ್ಮಲ್ಲಿ ಇತರರಂತೆ ಭಾವನಾತ್ಮಕ ಪ್ರತಿಕ್ರಿಯೆಗಳು ಇರುವುದಿಲ್ಲ ಎಂದು ಲೋಯಿಕ್ ಹೇಳುತ್ತಾನೆ. ಕಷ್ಟದ ಸಂದರ್ಭಗಳಲ್ಲಿಯೂ ತಾನು ಹೆಚ್ಚು ಭಾವನೆಗಳಿಗೆ ಒಳಗಾಗದೆ ಶಾಂತವಾಗಿರಲು ಸಾಧ್ಯವಾಗುತ್ತದೆ ಎಂದಿದ್ದಾನೆ. ಇನ್ನು ತಮ್ಮ ಬಾಲ್ಯದ ಕುಟುಂಬದ ವಾತಾವರಣವೂ ತಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿದೆ ಎಂದು ಲೋಯಿಕ್ ಹೇಳಿದ್ದಾನೆ.
ತಂದೆ-ತಾಯಿ ವಿಚ್ಛೇದನ ಪಡೆದಿದ್ದರು. ನಂತರ ಅವರ ತಾಯಿ ಮದ್ಯಪಾನಕ್ಕೆ ಒಳಗಾಗಿದ್ದರು. ಲೋಯಿಕ್ ಸುಮಾರು 8 ವರ್ಷದವರಾಗಿದ್ದಾಗ ಅವರ ತಾಯಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. 8 ರಿಂದ 16 ವರ್ಷದವರೆಗೆ ತಮ್ಮ ತಾಯಿ ಮದ್ಯಪಾನ ಮಾಡುತ್ತಿದ್ದರು. ಕೆಲವೊಮ್ಮೆ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದರು ಮತ್ತು ಮನೆಯಿಂದ ಹೊರಗೆ ಹೋಗಿ ಕಾಣೆಯಾಗುತ್ತಿದ್ದರು.ಈ ಎಲ್ಲ ಘಟನೆಗಳು ತಮ್ಮ ಮೇಲೆ ಪರಿಣಾಮ ಬೀರಿದ್ದವು ಎಂದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ