ಮಹಿಳೆಯ ನಿಗೂಢ ಕೊಲೆ: ಅಪರಾಧಿಯನ್ನು ಹಿಡಿದುಕೊಟ್ಟ ಆಮ್ಲೆಟ್​ ಪೀಸ್​: ಪ್ರೇಮಿಗಾಗಿ ಬಂದಾಕೆಯ ದುರಂತ ಅಂತ್ಯ

Published : Sep 02, 2026, 05:14 PM IST
Woman Murder Case

ಸಾರಾಂಶ

ಡಿಸೆಂಬರ್ 29 ರಂದು ಗ್ವಾಲಿಯರ್‌ನ ಅರಣ್ಯ ಪ್ರದೇಶದಲ್ಲಿ ಗುರುತು ಪತ್ತೆಯಾಗದ ಮಹಿಳೆಯ ಶವ ಪತ್ತೆಯಾಗಿತ್ತು. ದೇಹದ ಮೇಲಿದ್ದ ಸಣ್ಣ ಆಮ್ಲೆಟ್ ತುಂಡಿನ ಸುಳಿವಿನ ಜಾಡು ಹಿಡಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಮತ್ತು ಆನ್‌ಲೈನ್ ಪಾವತಿ ವಿವರಗಳ ಸಹಾಯದಿಂದ ಆರೋಪಿ ಸಚಿನ್ ಸೇನ್‌ನನ್ನು ಬಂಧಿಸಿದರು. ಅನೈತಿಕ ಸಂಬಂಧದ ಶಂಕೆಯಿಂದ ಈ ಕೊಲೆ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.

ಗ್ವಾಲಿಯರ್ (ಮಧ್ಯಪ್ರದೇಶ): ಕಳೆದ ಡಿಸೆಂಬರ್ 29 ರಂದು ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಗೋಲಾ ಕಾ ಮಂದಿರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾಗಿದೆ. ಮಹಿಳೆಯ ಮುಖಕ್ಕೆ ಭಾರವಾದ ಕಲ್ಲಿನಿಂದ ಹೊಡೆದಿದ್ದು, ಆಕೆಯ ಗುರುತು ಪತ್ತೆ ಕಷ್ಟಕರವಾಗಿತ್ತು. ಮಹಿಳೆಯ ಶವ ಗುರುತಿಸುವುದು ಸವಾಲಿನ ಪ್ರಕರಣವಾಗಿತ್ತು. ಇದು ಬಗೆಹರಿಯದ ಪ್ರಕರಣವಾಗಿದ್ದು, ಮಹಿಳೆಯ ಗುರುತನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ. ಇದನ್ನು ನೋಡಿದರೆ ಯಾರೋ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವುದು ತಿಳಿದುಬಂದಿತ್ತು. ಆದರೆ, ಕೊಲೆ ಯಾರು ಮಾಡಿರಬಹುದು ಎನ್ನುವ ಬಗ್ಗೆ ಅಕ್ಕ-ಪಕ್ಕ ಯಾವುದೂ ಸುಳಿವು ಸಿಕ್ಕಿರಲಿಲ್ಲ. ಇದು ಪೊಲೀಸರಿಗೆ ಅತ್ಯಂತ ಸವಾಲಿನ ಕೆಲಸವಾಗಿತ್ತು.

ಕೊನೆಗೆ ಕೃತಕ ಬುದ್ಧಿಮತ್ತೆಯನ್ನು ಬಳಸಿ ಮಹಿಳೆಯ ಮುಖ ಹೀಗೆಯೇ ಇರಬಹುದು ಎಂದು ಪತ್ತೆ ಹಚ್ಚಲಾಯಿತು. ಆಕೆಯ ಇತರ ಅಂಗಾಂಗಗಳ ಮೂಲಕ ಮಹಿಳೆಯ ಗುರುತು ಈ ರೀತಿ ಇದ್ದಿರಬಹುದು ಎಂದು ಊಹಿಸಲಾಯಿತಾದರೂ, ಕೊಲೆ ಮಾಡಿದ್ದು ಯಾರು ಎನ್ನುವ ಬಗ್ಗೆ ಮಾತ್ರ ಕಿಂಚಿತ್​ ತಿಳಿಯಲಿಲ್ಲ. ಪೊಲೀಸರು ಇದರ ತನಿಖೆಯನ್ನು ಇನ್ನಷ್ಟು ಆಳವಾಗಿಸಿದರು. ಅಪರಾಧಿ ಒಂದಿಲ್ಲೊಂದು ಚಿಕ್ಕ ಕುರುಹು ಬಿಟ್ಟು ಹೋಗಿಯೇ ಇರುತ್ತಾರೆ, ಆತ ಎಷ್ಟೇ ದೊಡ್ಡ ಅಪರಾಧಿಯಾಗಿದ್ದರೂ, ಅದೇ ಅವನ ಕೆಲಸವಾಗಿದ್ದರೂ ಬಹುತೇಕ ಪ್ರಕರಣಗಳಲ್ಲಿ ಸಿಗುವ ಚಿಕ್ಕ ಕುರುಹುವಿನಿಂದಲೇ ಪೊಲೀಸರು ನಿಪುಣರಾಗಿದ್ದರೆ, ಕೊಲೆ ಕೇಸನ್ನು ಬೇಧಿಸುವುದು ಇದೆ.

ಆಮ್ಲೆಟ್​ ಕುರುಹು

ಅದೇ ರೀತಿ, ಮಹಿಳೆಯ ಶವವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಆ ದೇಹದ ಮೇಲೆ ಚಿಕ್ಕದೊಂದು ಆಮ್ಲೆಟ್​ ತುಂಡು ಕಂಡುಬಂದಿತು. ಇಂಥ ಸಂದರ್ಭಗಳಲ್ಲಿ ಸಿಗುವ ಚಿಕ್ಕಪುಟ್ಟ ಕುರುಹು ಕೂಡ ಪೊಲೀಸರಿಗೆ ತನಿಖೆ ವೇಳೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಡುವುದು ಇದೆ. ಯಾವುದೇ ಕುರುಹವನ್ನೂ ಅವರು ಬಿಡುವಂತಿಲ್ಲ. ಅದೇ ರೀತಿ ಈ ಚಿಕ್ಕ ಆಮ್ಲೇಟ್​ ಪೀಸ್​ ಹಿಡಿದು, ಕೊಲೆಗಾರನ ಜಾಡು ಹಿಡಿದು ಹೊರಟರು ಪೊಲೀಸರು. ಇದರ ಆಧಾರದ ಮೇಲೆ, 200 ಮೀಟರ್ ವ್ಯಾಪ್ತಿಯೊಳಗಿನ ಆಹಾರ ಮಳಿಗೆಗಳಲ್ಲಿ ವಿಚಾರಣೆ ನಡೆಸಲಾಯಿತು. ಆಗ ಅವರಿಗೆ ಅಂಗಡಿಯೊಂದರಲ್ಲಿ ಒಬ್ಬ ಮಹಿಳೆ ಇಬ್ಬರು ಪುರುಷರೊಂದಿಗೆ ಆಮ್ಲೆಟ್ ತಿಂದಿರುವುದು ಪತ್ತೆಯಾಗಿತು.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಧರ್ಮವೀರ್ ಸಿಂಗ್ ನೇತೃತ್ವದಲ್ಲಿ ಇದರ ತನಿಖೆ ಚುರುಕುಗೊಂಡಿತು. ಇದರ ನಂತರ, ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಯಿತು, ಇದರಲ್ಲಿ ಇಬ್ಬರು ಪುರುಷರು ಕಾಣಿಸಿಕೊಂಡಿದ್ದಾರೆ. ಅವರು ಆನ್‌ಲೈನ್‌ನಲ್ಲಿ ಆಮ್ಲೆಟ್‌ಗೆ ಹಣ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಣ್ಣ ಪುರಾವೆಯ ಆಧಾರದ ಮೇಲೆ, ಪೊಲೀಸರು ತನಿಖೆ ನಡೆಸಿ ಗ್ವಾಲಿಯರ್ ನಿವಾಸಿ ಸಚಿನ್ ಸೇನ್ ಎಂಬ ಆರೋಪಿಯನ್ನು ಬಂಧಿಸಲು ಸಹಕಾರಿಯಾಯಿತು!

ಕೊನೆಗೂ ಸಿಕ್ಕ ಕೊಲೆಗಾರ

ಮಹಿಳೆ ಟಿಕಮ್‌ಗಢದವರಾಗಿದ್ದು, ಕೆಲವು ಸಮಯದಿಂದ ತನ್ನ ಪತಿಯೊಂದಿಗೆ ಇಲ್ಲಿ ವಾಸಿಸುತ್ತಿದ್ದರು. ಒಂದು ವಾರದ ಹಿಂದೆ, ಅವಳು ಸಚಿನ್ ಸೇನ್ ಜೊತೆ ಸಂಪರ್ಕಕ್ಕೆ ಬಂದು, ಪತಿ ಇದ್ದರೂ ಅವನ ಜೊತೆ ವಾಸಿಸಲು ಪ್ರಾರಂಭಿಸಿದಳು. ಆದರೆ, ಅಲ್ಲಿಯೂ ಅವಳ ಅದೃಷ್ಟ ಕೈಕೊಟ್ಟಿತು. ಅವಳಿಗೆ ಹಲವಾರು ಪುರುಷರೊಂದಿಗೆ ಸಂಬಂಧವಿದೆ ಎಂದು ಸಚಿನ್ ಸೇನ್ ಅನುಮಾನಿಸಿದ. ಇದರಿಂದ ಆಕೆಯನ್ನು ಕೊಲ್ಲಲು ಸಂಚುರೂಪಿಸಿದ. ಅವಳನ್ನು ಮುಖ್ಯ ರಸ್ತೆಯ ಬಳಿಯ ಕಾಡಿಗೆ ಕರೆದೊಯ್ದು, ನಂತರ ಕಲ್ಲಿನಿಂದ ಅವಳ ತಲೆಯನ್ನು ಪುಡಿಮಾಡಿ ಕೊಂದಿದ್ದ.

ಜಾಕೆಟ್ ಮತ್ತು ಇತರ ವಸ್ತುಗಳು ಸೇರಿದಂತೆ ಹಲವಾರು ಪುರಾವೆಗಳನ್ನು ಸ್ಥಳದಿಂದ ಸಂಗ್ರಹಿಸಲಾಯಿತು. ಮಹಿಳೆಯ ರೇಖಾಚಿತ್ರವನ್ನು ರಚಿಸಲು ಕೃತಕ ಬುದ್ಧಿಮತ್ತೆ (AI) ಅನ್ನು ಸಹ ಬಳಸಲಾಯಿತು ಮತ್ತು ಟಿಕಮ್‌ಗಢ ಪೊಲೀಸರೊಂದಿಗೆ ಸಮನ್ವಯವನ್ನು ಸ್ಥಾಪಿಸಲಾಯಿತು. ತರುವಾಯ, ಸಿಸಿಟಿವಿ ದೃಶ್ಯಾವಳಿಗಳು, ಸ್ಥಳದಿಂದ ಸಂಗ್ರಹಿಸಿದ ಮಾಹಿತಿ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳನ್ನು ಬಳಸಿಕೊಂಡು, ಪೊಲೀಸರು ಕೊಲೆಯಾದವಳನ್ನು ಗುರುತಿಸಲು ಮತ್ತು ಆರೋಪಿಯನ್ನು ಬಂಧಿಸಲು ಸಾಧ್ಯವಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೆಹಲಿಯಲ್ಲಿ ಮತ್ತೊಮ್ಮೆ ನಿರ್ಭಯಾ ಕೇಸ್‌: 47 ಕಿ.ಮೀ ನಾನ್‌ ಸ್ಟಾಪ್‌ ಪ್ರಯಾಣಿಸಿದ ಸ್ಲೀಪರ್‌ ಬಸ್‌ನಲ್ಲಿ 16ರ ಬಾಲಕಿಯ ಗ್ಯಾಂಗ್‌ರೇ*
ಆಂಧ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಉದ್ಯಮಿ, 300ಕ್ಕೂ ಹೆಚ್ಚು ವಿಂಟೇಜ್ ಕಾರಿನ ಮಾಲೀಕನ ಬಂಧನ; ಕಾರಣವೇನು?