Koppal News: ಜೂಜುಕೋರರನ್ನು ಬಿಟ್ಟು ಕೋಳಿಗಳನ್ನು ಬಂಧಿಸಿದ ಪೊಲೀಸರು!

By Ravi JanekalFirst Published Jan 17, 2023, 5:09 PM IST
Highlights

 ಸಾಮಾನ್ಯವಾಗಿ ಜೂಜು ಪ್ರಕರಣಗಳಲ್ಲಿ‌ ಜೂಜುಕೋರರನ್ನು ಬಂಧಿಸುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಕೋಳಿಗಳನ್ನು ಬಂಧಿಸಿ ಬಂಧಿಖಾನೆಯಲ್ಲಿ ಇಟ್ಟಿರುವ ಪ್ರಕರಣವೊಂದು ನಡೆದಿದೆ.‌ಅಷ್ಟಕ್ಕೂ ಕೋಳಿಗಳನ್ನು ಬಂಧಿಸಿರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಎಲ್ಲಿ ಅಂತೀರಾ? ಕೆಳಗಿನ ಸುದ್ದಿ ಓದಿ.

ವರದಿ- ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಜ.17) : ಜಿಲ್ಲೆಯ ಕಾರಟಗಿ ಅಂದರೆ ಸಾಕು ನಮಗೆ ನೆನಪಿಗೆ ಬರುವುದು ಇಲ್ಲಿನ ರೈಸ್ ಮಿಲ್‌ಗಳು.‌ ಹೌದು ಕರ್ನಾಟಕ ರಾಜ್ಯದಲ್ಲಿಯೇ ಅತ್ಯಧಿಕ‌ ಸಂಖ್ಯೆಯ ರೈಸ್ ಮಿಲ್‌ಗಳು ಕಾರಟಗಿಯಲ್ಲಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕಾರಟಗಿ ಭಾಗ ಜೂಜುಕೋರರ ಹಾಟಸ್ಪಾಟ್ ಆಗಿ ಪರಿಣಮಿಸುತ್ತಿದೆ.

ಹೌದು ಕೋಳಿ ಕಾಳಗ, ಇಸ್ಪೀಟ್,ಮಟ್ಕಾ ಸೇರಿದಂತೆ ವಿವಿಧ ಜೂಜು ಪ್ರಕರಣಗಳು ಇಲ್ಲಿ ನಡೆಯುತ್ತಿವೆ. ಅದರಂತೆ ಕಾರಟಗಿ ತಾಲೂಕಿನ ಬಸಣ್ಣ ಕ್ಯಾಂಪ್(Basanna camp) ನಲ್ಲಿ ಕೋಳಿ ಕಾಳಗ ನಡೆಯುತ್ತಿತ್ತು. ಈ ವೇಳೆ ಪೊಲೀಸರು ದಾಳಿ ನಡೆಸಿ ಮೂರು ಕೋಳಿಗಳನ್ನು ಬಂಧಿಸಿ ಕಾರಟಗಿ ಪೊಲೀಸ್ ಠಾಣೆಯ ಬಂಧಿಖಾನೆಯಲ್ಲಿ ಬಂಧಿಸಿ ಇಟ್ಟಿದ್ದಾರೆ.

Koppala: ಪ್ರೀತಿ ನೀರಾಕರಿಸಿದ ಮನೆಯವರು, ಕತ್ತು ಕೊಯ್ದುಕೊಂಡು ಪ್ರೇಮಿಗಳ ಆತ್ಮಹತ್ಯೆ

ಏನಿದು ಕೋಳಿಗಳ‌ ಬಂಧನ ಪ್ರಕರಣ:

ಕೋಳಿ ಕಾಳಗದ ಹಿನ್ನಲೆಯಲ್ಲಿ ಮೂರು ಕೋಳಿಗಳನ್ನು ಪೊಲೀಸರು ಬಂಧಿಖಾನೆಯಲ್ಲಿ ಬಂಧಿಸಿಟ್ಟು ಎಡವಟ್ಟು ಮಾಡಿಕೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ  ಕಾರಟಗಿ ಪೊಲೀಸರಿಂದ ಈ ಎಡವಟ್ಟು ಆಗಿದ್ದು, ನಿನ್ನೆ ಕಾರಟಗಿ ತಾಲೂಕಿನ ಬಸಣ್ಣ ಕ್ಯಾಂಪ್ ನಲ್ಲಿ ಕೋಳಿ ಕಾಳಗ ನಡೆಯುತ್ತಿತ್ತು. ಮಧುಕಟ್ಟ ಎನ್ನುವ ವ್ಯಕ್ತಿ ಕೋಳಿ ಕಾಳಗ ನಡೆಸುತ್ತಿದ್ದ. ಈ ಮಾಹಿತಿ ತಿಳಿದ ಪೊಲೀಸರು ಕೋಳಿಕಾಳಗ ಸ್ಥಳಕ್ಕೆ ದಾಳಿ ನಡೆಸಿದ್ದರು. ಇನ್ನೂ ಪೊಲೀಸರ ಕಂಡ ಜೂಜುಕೋರರ ಬೈಕ್ ಗಳನ್ನು ಬಿಟ್ಟು ಪರಾರಿಯಾಗಿದ್ದರು. ದಾಳಿ ವೇಳೆ 9 ಬೈಕ್ ಗಳನ್ನು ಮತ್ತು ಕಾಳಗಕ್ಕೆ ತಂದಿದ್ದ ಮೂರು ಕೋಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ 
ವಶಪಡಿಸಿಕೊಂಡ ಕೋಳಿಗಳನ್ನು ಪೊಲೀಸರು ಪುರುಷರ ಬಂಧಿಖಾನೆಗಲ್ಲಿ ಬಂಧಿಸಿಟ್ಟಿದ್ದಾರೆ.

ಕೋಳಿಗಳ ಬಂಧನದ ಫೋಟೋ ವಿಡಿಯೋ ವೈರಲ್

ಇನ್ನು ಯಾವಾಗ ಕೋಳಿಗಳನ್ನು ಕಾರಟಗಿ ಪೊಲೀಸ್ ಠಾಣೆ(Karatagi police station)ಯಲ್ಲಿ ಬಂಧಿಸಿ ಇಟ್ಟಿರುವ ಕೋಳಿಗಳ ಪೋಟೋ,.ವಿಡಿಯೋಗಳು ವೈರಲ್ ಆಗಿದ್ದು, ಜೂಜುಕೋರರನ್ನು ಕಾಳಗ ನಡೆಸುವವರನ್ನು ಬಂಧಿಸದೇ ಬಿಟ್ಟು, ಕೋಳಿಗಳನ್ನು ಬಂಧಿಸಿ ಬಂಧಿಖಾನೆಗಳಲ್ಲಿ ಎಷ್ಟು ಸರಿ ಎನ್ನುವ ಮಾತುಗಳು ಕೇಳಿಬಂದಿವೆ.

ಪೊಲೀಸರ ಕ್ರಮಕ್ಕೆ ವ್ಯಾಪಕ ವಿರೋಧ

ಇನ್ನು ಪೊಲೀಸರು ಕೋಳಿ ಕಾಳಗ ಆಡಿಸುವ ಜೂಜುಕೊರರನ್ನು ಬಂಧಿಸದೇ ಕೋಳಿಗಳನ್ನು ಮಾತ್ರ ಬಂಧಿಸಿರುವುದು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಜೊತೆಗೆ ಪೊಲೀಸರ ವಿರುದ್ಧವೂ ಸಹ ಸಾಮಾಜಿಕ‌ ಜಾಲತಾಣಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ‌ ಕೂಡಲೇ ಕೋಳಿಗಳನ್ನು ಬಂಧ ಮುಕ್ತ ಮಾಡಬೇಕೆನ್ನುವ ಒತ್ತಾಯ ಕೇಳಿಬಂದಿದೆ. 

Koppal Gavisiddeshwara jatre: ಮಹಾದಾಸೋಹಕ್ಕೆ 6 ಕ್ವಿಂಟಲ್‌ ಬುಂದಿ, 4 ಕ್ವಿಂಟಲ್‌ ಕರದಂಟು ನೀಡಿದ ಭಕ್ತರು!

ಇನ್ನು ಕಾರಟಟಗಿ ಭಾಗದಲ್ಲಿ ಈ ಹಿಂದೆಯೂ ಸಹ ಇಂತಹ ಅನೇಕ ಕೋಳಿ ಕಾಳಗದ ಪ್ರಕರಣಗಳು ನಡೆದಿವೆ. ಆದರೂ ಸಹ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ‌ ಮುಂದಾಗಿಲ್ಲ.‌ ಇಂತಹ ವೇಳೆಯಲ್ಲಿ ಜೂಜುಕೊರರ ಬದಲಾಗಿ ಕೋಳಿಗಳನ್ನು ಬಂಧಿಸಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದ್ದು, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆನ್ನುವ ಆಗ್ರಹ ಕೇಳಿಬಂದಿದೆ.

click me!