Mandya: ಪ್ರಾಣವನ್ನೇ ತೆಗೆದ ತುಂಡು ಬೀಡಿ: ಸೇದಿ ಎಸೆದ ಬೀಡಿಯ ಕಿಡಿಯಿಂದ ವೃದ್ಧ ಸಾವು

By Sathish Kumar KH  |  First Published Jan 17, 2023, 1:41 PM IST

ಕುಡಿದ ಅಮಲಿನಲ್ಲಿ ತಾನು ಸೇದಿದ ಬೀಡಿಯನ್ನು ಎಸೆದು, ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ ವೃದ್ಧ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ. 


ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಡ್ಯ (ಜ.17): ಕುಡಿದ ಅಮಲಿನಲ್ಲಿ ತಾನು ಸೇದಿದ ಬೀಡಿಯನ್ನು ಎಸೆದು, ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ ವೃದ್ಧ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ. 

Tap to resize

Latest Videos

ಚಾಮನಹಳ್ಳಿ ಗ್ರಾಮದ 60 ವರ್ಷದ ಕೃಷ್ಣಯ್ಯ ಮೃತ ದುರ್ದೈವಿ ಆಗಿದ್ದಾರೆ. ಸಂಕ್ರಾಂತಿ ಹಬ್ಬದಂದು ಈ ದುರ್ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಾಮನಹಳ್ಳಿ ಗ್ರಾಮದ ಗುಡಿಸಲುವೊಂದರಲ್ಲಿ ಕೃಷ್ಣಯ್ಯ ವಾಸಿಸುತ್ತಿದ್ದರು. ಕೂಲಿ ಕೆಲಸ ಮಾಡುತ್ತ ಬದುಕು ಸಾಗಿಸುತ್ತಿದ್ದ ಕೃಷ್ಣಯ್ಯ ಕುಡಿತದ ಚಟದ ದಾಸನಾಗಿದ್ದರು. ಹೀಗಾಗಿ, ಕುಡಿದ ಮತ್ತಿನಲ್ಲಿಯೇ ಬೀಡಿ ಸೇದಿ ಎಸಸದಿದ್ದು, ಅದರ ಕಿಡಿಯಿಂದ ಬೆಂಕಿ ಹೊತ್ತಿಕೊಂಡು ಅಲ್ಲಿ ಮಲಗಿದ್ದ ಕೃಷ್ಣಯ್ಯನನ್ನೂ ಸುಟ್ಟಿತ್ತು. ನೆರೆ ಹೊರೆಯವರು ವೃದ್ಧನನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. 

ಮದ್ದೂರು: ಅನೈತಿಕ ಸಂಬಂಧದ ಶಂಕೆ: ವಿಧವೆ ಕೊಲೆ, ಮಂಚದ ಸಮೇತ ಶವಕ್ಕೆ ಬೆಂಕಿ

ಘಟನೆಯ ನಡೆದಿದ್ದು ಹೇಗೆ? : ವೃದ್ಧ ಕೃಷ್ಣಯ್ಯ ಜನವರಿ 15ರ ರಾತ್ರಿ‌ ಕೂಡ ಕಂಠಪೂರ್ತಿ ಕುಡಿದು ತನ್ನ‌ ಗುಡಿಸಲಿಗೆ ಬಂದಿದ್ದಾರೆ. ಕುಡಿದ ಅಮಲಿನಲ್ಲೇ ಬೀಡಿ ಸೇದಿದ ಕೃಷ್ಣಯ್ಯ ಬಳಿಕ ಮಲಗಿದ್ದಲ್ಲೇ ಬೀಡಿ ಎಸೆದಿದ್ದಾನೆ. ದುರಾದೃಷ್ಟವಶಾತ್ ತುಂಡು ಬೀಡಿಯಲ್ಲಿದ್ದ ಬೆಂಕಿಯ ಕಿಡಿ ತನ್ನ ಹಾಸಿಗೆಗೆ ತಗುಲಿ ಬೆಂಕಿ ಹೊತ್ತಿಕೊಂಡು ದೊಡ್ಡ ಅನಾಹುತ ಸಂಭವಿಸಿದೆ. ಹಾಸಿಗೆಗೆ ಹೊತ್ತಿಕೊಂಡ ಬೆಂಕಿ ಕ್ರಮೇಣ ಹೆಚ್ಚಾಗಿ ಗುಡಿಸಲಿಗೆ ತಗುಲಿತ್ತು. ಕುಡಿದ ನಶೆಯಲ್ಲಿದ್ದ ಕೃಷ್ಣಯ್ಯ ತಪ್ಪಿಸಿಕೊಳ್ಳಲು ಆಗದಷ್ಟು ಕಂಠಪೂರ್ತಿ ಕುಡಿದು ಮಲಗಿದ್ದ ಬಳಿಕ ಬೆಂಕಿಯ ಕೆನ್ನಾಲಿ ಕೃಷ್ಣಯ್ಯನನ್ನು ಸುಟ್ಟಿತ್ತು. 

ಬೆಂಗಳೂರು: ಪ್ಲೇವುಡ್ ಗೋಡೌನ್‌ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರೀ ದುರಂತ..!

ಎದ್ದು ಹೋಗಲಾಗದಷ್ಟು ಮತ್ತೇರಿಸಿಕೊಂಡಿದ್ದ ವೃದ್ಧ: ತಾನು ಮಲಗಿರುವ ಗುಡಿಸಲಿಗೆ ಬೆಂಕಿ ಹೆಚ್ಚಾಗ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದರೂ ಅದು ಸಾಧ್ಯವಾಗಲಿಲ್ಲ. ಇನ್ನು ಬೆಂಕಿಯ ಕೆನ್ನಾಲಿಗೆ ಹೊತ್ತಿ ಉರಿಯುತ್ತಿದ್ದರೂ ತಾನು ಹಾಸಿಗೆಯಿಂದ ಎದ್ದು ಓಡಿ ಹೋಗಲಾರದಷ್ಟು ನಶೆಯಲ್ಲಿದ್ದನು. ಹೀಗಾಗಿ, ಬೆಂಕಿಯಲ್ಲಿಯೇ ಇದ್ದುದರಿಂದ ತೀವ್ರ ಸುಟ್ಟ ಗಾಯಗಳು ಆಗಿವೆ. ದೇಹದ ಬಹುಭಾಗ ಸುಟ್ಟು ಬಳಲುತ್ತಿದ್ದ ಕೃಷ್ಣಯ್ಯನನ್ನು ಅಕ್ಕಪಕ್ಕದವರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ಬಳಿಕ ‌ಹೆಚ್ಚಿನ ಚಿಕಿತ್ಸೆಗೆ ಕೃಷ್ಣಯ್ಯರನ್ನ ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಕೃಷ್ಣಯ್ಯ ದೇಹ ಬಹುಭಾಗ ಸುಟ್ಟಿದ್ದರಿಂದ ‌ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ  ಕೊನೆಯುಸಿರೆಳೆದರು.

ವೃದ್ಧ ಕೃಷ್ಣಯ್ಯನ ಪುತ್ರ ನೀಡಿರುವ ದೂರಿನ‌ ಮೇರೆಗೆ ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!