ರೌಡಿಶೀಟರ್ ಬಚ್ಚಾಖಾನ್ ಗೆ ಲಾಡ್ಜ್‌ನಲ್ಲಿ ಯುವತಿ ಜತೆ ಕಾಲ ಕಳೆಯಲು ಅವಕಾಶ ಕೊಟ್ಟ ಪೋಲಿಸರು..! 

By Ravi NayakFirst Published Aug 21, 2022, 10:45 AM IST
Highlights
  • ಲಾಡ್ಜನಲ್ಲಿ ರಂಗಿನಾಟ ನಡೆಸಲು ಹೋಗಿದ್ದ ಭೂಗತ ಪಾತಕಿ ಬಚ್ಚಾಖಾನ್!
  • ರೌಡಿ ಶೀಟರ್ ಬಚ್ಚಾ ಖಾನ್‌ಗೆ ಐಷಾರಾಮಿ ಹೋಟೆಲ್‌ನಲ್ಲಿ ಯುವತಿ ಜತೆ ಕಾಲ ಕಳೆಯಲು ಪೊಲೀಸರೇ ಅವಕಾಶ ಕೊಡುತ್ತಿದ್ದರಂತೆ!

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್.. 

ಧಾರವಾಡ (ಆ.21) : ಕೊಲೆ ಪ್ರಕರಣದ ವಿಚಾರಣೆಗೆ ಪೊಲೀಸ್ ಭಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಬಂದಿದ್ದ ಆರೋಪಿಯು ಲಾಡ್ಜ್‌ನಲ್ಲಿ ಯುವತಿಯೊಂದಿಗೆ ಖಾಸಗಿ ಸಮಯ ಕಳೆಯುತ್ತಿದ್ದ ಸಂದರ್ಭದಲ್ಲಿ ವಿದ್ಯಾಗಿರಿ ಠಾಣೆ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ. ಇನ್ನು ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರ್ ಲಾಬೂರಾಮ್ ಅವರೆ ಸ್ವತಃ ದಾಳಿ ನಡೆಸಿದ್ದಾರೆ.. ಧಾರವಾಡ ರೌಡಿ ಶಿಟರ್(Dharwad Rowdy Sheeter) ಫ್ರೂಟ್ ಇರ್ಫಾನ್(Fruit Irfan) ಕೊಲೆ ಪ್ರಕರಣ(Murder Case)ದಲ್ಲಿ ಬಂಧಿತನಾಗಿರುವ ಬಚ್ಚಾ ಖಾನ್(Bachha khan) ಎಂಬಾತನನ್ನು ಬಳ್ಳಾರಿ ಕಾರಾಗೃಹದಲ್ಲಿ ಇಡಲಾಗಿತ್ತು. ವಿಚಾರಣೆಗಾಗಿ ಆತನನ್ನು ಧಾರವಾಡ ಜೆ ಎಂ ಎಪ್ ಸಿ  ನ್ಯಾಯಾಲಯ(Dharwad JMFC Court)ಕ್ಕೆ ಶನಿವಾರ ಕರೆತಂದಿದ್ದರು. ಈ ಸಂದರ್ಭದಲ್ಲಿ ಸತ್ತೂರು(Sattooru) ಬಳಿ ಇರುವ AFS  ಲಾಡ್ಜ್‌ ಒಂದರಲ್ಲಿ ಆತನಿಗೆ ಯುವತಿಯೊಂದಿಗೆ ಖಾಸಗಿ ಸಮಯ ಕಳೆಯಲು ಪೊಲೀಸರೇ ವ್ಯವಸ್ಥೆ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ. 

ಹುಬ್ಬಳ್ಳಿ: ಫ್ರೂಟ್‌ ಇರ್ಫಾನ್‌ ಮರ್ಡರ್‌, ಬಚ್ಚಾ ಖಾನ್‌ ವಶಕ್ಕೆ

ಬಚ್ಚಾ ಖಾನ್ ಬರುವ ಮೊದಲೇ ಯುವತಿ ಲಾಡ್ಜ್ ಕೋಣೆಯೊಳಗಿದ್ದಳು. ನಂತರ ಪೊಲೀಸರು ಆತನನ್ನು ಅಲ್ಲಿಗೆ ಕರೆತಂದು ಬಿಟ್ಟರು. ಈ ಖಚಿತ ಮಾಹಿತಿ ಆಧರಿಸಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್‌(Labhooram) ಮತ್ತು ಇತರ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಚ್ಚಾ ಖಾನ್‌ನನ್ನು ವಿದ್ಯಾಗಿರಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಪ್ರತಿ ಬಾರಿ ವಿಚಾರಣೆಗೆ ಬರುವಾಗ ಈತ ನಗರದ ಸುತ್ತಮುತ್ತಲಿನ ಲಾಡ್ಜ್‌ಗಳನ್ನು ಮೊದಲೇ ಕಾಯ್ದಿರಿಸಿ, ಖಾಸಗಿ ಸಮಯ ಕಳೆಯುತ್ತಿದ್ದ ಎಂಬ ಮಾಹಿತಿಯನ್ನೂ ಪೊಲೀಸರು ಕಲೆ ಹಾಕಿದ್ದಾರೆ.

ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು: ರೌಡಿಶೀಟರ್‌ ಫ್ರೂಟ್‌ ಇರ್ಫಾನ್‌ ಮೇಲೆ ಫೈರಿಂಗ್‌

ಇಷ್ಟೆಲ್ಲ ಆದ್ರೂ ಈ ಬಚ್ಚಾಖಾನ್ ಗೆ ಖಾಸಗಿ ಸಮಯ ಕಳೆಯಲೂ ಐಷಾರಾಮಿ ಹೊಟೆಲ್ ಗಳೆ ಬೇಕಾಗುತ್ತಾ , ಅಷ್ಟಕ್ಕೂ ಐಷಾರಾಮಿ ಹೊಟೆಲ್ ಬುಕ್ ಮಾಡಿದ್ದು ಯಾರು, ಯಾರ ಹೇಸರಲ್ಲಿ ಬುಕ್ ಮಾಡಿದ್ರು, ಅನ್ನೋದರ ಬಗ್ಗೆ ಕಮಿಷನರ್ ಲಾಬೂರಾಮ್ ಅವರು ತನಿಖಾ ತಂಡವನ್ನ ರಚಿಸಿ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ..ಇನ್ನು ಇತನಿಗೆ ಖಾಸಗಿ ಸಮಯ ಕಳೆಯಲು ಅವಕಾಶ ಮಾಡಿ ಕೊಟ್ಟಿದ್ದ ಬಳ್ಳಾರಿ ಪೋಲಿಸರು ಯಾರು, ಆ ಪೋಲಿಸರ ಮೇಲೆ ಹಿರಿಯ ಅಧಿಕಾರಿಗಳು ಏನು ಕ್ರಮ ಕೈಗೊಳ್ತಾರಾ, ಅನ್ನೋದು ಅಷ್ಟೆ ಸತ್ಯ ಹೊರಗೆ ಬರಬೇಕಿದೆ..ಇನ್ನು ಪೋಲಿಸರಿಗೆ ಈ ಬಗ್ಗೆ ಗೊತ್ತಿರದೆ ಇಂತಹ ಘಟನೆ ಗಳು ನಡೆಯಲಿಕ್ಕೆ ಸಾಧ್ಯವಿಲ್ಲ ಎಂದು ಸ್ಥಳಯ ಜನರು ಮಾತನಾಡಿಕ್ಕೊಳ್ಳುತ್ತಿದ್ದಾರೆ.

click me!