
ಬೆಳಗಾವಿ (ಫೆ.12) : ಗೋಕಾಕ ನಗರದ ಉದ್ಯಮಿ ರಾಜು ಜವಾರ್ (53) ಕಳೆದ ಶುಕ್ರವಾರದಿಂದ ನಾಪತ್ತೆಯಾಗಿದ್ದಾರೆ. ಅಪಹರಣದ ಶಂಕೆ ವ್ಯಕ್ತವಾಗಿದೆ.
ಗೋಕಾಕ(Gokak) ನಗರದ ಬ್ಯಾಳಿಕಾಟಾ ಬಳಿ ಇರುವ ಖಾಸಗಿ ಆಸ್ಪತ್ರೆ ಎದುರು ಕಾರು ಪಾರ್ಕಿಂಗ್ ಮಾಡಲಾಗಿತ್ತು. ಬಳಿಕ ನಾಪತ್ತೆ ಆಗಿದ್ದ ಉದ್ಯಮಿ. ಮೊಬೈಲ್ ಸ್ವಿಚ್ ಆಫ್ ಆಗಿದ್ದ ರಾಜು ಮೊಬೈಲ್. ಅವರು ಎಲ್ಲಿ ಹೋದರೆಂಬುದು ನಿಗೂಢವಾಗಿತ್ತು. ಎಲ್ಲ ಕಡೆ ಹುಡುಕಿದರೂ ಸುಳಿವೇ ಸಿಕ್ಕಿಲ್ಲ. ಗೋಕಾಕ ಶಹರ ಠಾಣೆ (Gokak police station)ಯಲ್ಲಿ ರಾಜು ನಾಪತ್ತೆಯಾಗಿರುವ ಬಗ್ಗೆ ಉದ್ಯಮಿಯ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ. ಉದ್ಯಮಿಯನ್ನು ಅಪಹರಣ ಮಾಡಿರಬಹುದು ಎಂಬ ಶಂಕೆಯಿಂದ ಗೋಕಾಕ ಡಿವೈಎಸ್‌ಪಿ ನೇತೃತ್ವದಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
Turkey Earthquake ವೇಳೆ ನಾಪತ್ತೆಯಾಗಿದ್ದ ಬೆಂಗಳೂರಿನ ಎಂಜಿನೀಯರ್ ಶವವಾಗಿ ಪತ್ತೆ!
ನಾಪತ್ತೆಯಾಗಿದ್ದ ಇನ್‌ಸ್ಪೆಕ್ಟರ್ ಮೃತದೇಹ ಹಳಿ ಮೇಲೆ ಪತ್ತೆ
ಬೆಂಗಳೂರು : ಇತ್ತೀಚೆಗೆ ನಗರದ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಸಮೀಪದ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದ ಅಪರಿಚಿತ ಮೃತದೇಹ ಕೇಂದ್ರ ಆದಾಯ ತೆರಿಗೆ ಇಲಾಖೆ ಇನ್‌ಸ್ಪೆಕ್ಟರೊಬ್ಬರದು ಎಂಬುದು ಗೊತ್ತಾಗಿದೆ.
ಉತ್ತರಪ್ರದೇಶದ ಮೂಲದ ದೇವೇಂದ್ರ ದುಬೆ(40) ಮೃತ ಐಟಿ ಇನ್‌ಸ್ಪೆಕ್ಟರ್. ಯಶವಂತಪುರದ ಎಚ್.ಗುರುಮೂರ್ತಿ ಕಾಲೋನಿಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು. ಜ.20ರಂದು ಪತ್ನಿಯ ಜತೆಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಹೋಗಿದ್ದರು. ದೇವೇಂದ್ರ ದುಬೆ ಅವರು ಜ.20ರಂದು ಕೌಟುಂಬಿಕ ಕಾರಣಗಳಿಗೆ ಪತ್ನಿಯ ಜತೆಗೆ ಗಲಾಟೆ ಮಾಡಿಕೊಂಡು ಬೆಳಗ್ಗೆ 11ಕ್ಕೆ ಕಚೇರಿಗೆ ತೆರಳಿದ್ದರು. ಸಂಜೆ ಮನೆಗೆ ಬಂದಿರಲಿಲ್ಲ. ಜ.22ರಂದು ದುಬೆ ಉತ್ತರಪ್ರದೇಶದಲ್ಲಿರುವ ಅತ್ತೆ-ಮಾವನಿಗೆ ಕರೆ ಮಾಡಿ ಪತ್ನಿಯ ಜತೆ ನಡೆದ ಜಗಳ ಬಗ್ಗೆ ತಿಳಿಸಿದ್ದರು. ಅಂದೇ ಸಂಜೆ 7.45ರ ಸುಮಾರಿಗೆ ಪತ್ನಿಯ ಮೊಬೈಲ್‌ನ ವಾಟ್ಸಾಪ್‌ಗೆ ಜೀವ ವಿಮೆ ಪಾಲಿಸಿಗಳ ಬಗ್ಗೆ ಸಂದೇಶ ಕಳುಹಿಸಿ ಮಾಹಿತಿ ನೀಡಿದ್ದರು.
ಹೊಸ ವರ್ಷದಂದು ನಾಪತ್ತೆಯಾಗಿದ್ದ ಬೆಂಗಳೂರು ಟೆಕ್ಕಿ ತಿಂಗಳ ಬಳಿಕ ಶವವಾಗಿ ಪತ್ತೆ
ಬಳಿಕ ‘ನನ್ನ ಸಾವಿಗೆ ನಾನೇ ಕಾರಣ. ನನ್ನ ಮೃತದೇಹವನ್ನು ಮಕ್ಕಳಿಗೆ ತೋರಿಸಬೇಡ’ ಎಂದು ಪತ್ನಿಗೆ ಸಂದೇಶ ಕಳುಹಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು ಎಂಬುದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ