ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಇಬ್ಬರು ಮಕ್ಕಳನ್ನು ತಂದೆಯೇ ಕತ್ತು ಹಿಸುಕಿ ಕೊಂದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಕ್ಕಲದೊಡ್ಡಿ ಗ್ರಾಮದಲ್ಲಿ ನಡೆದಿದೆ.
ರಾಯಚೂರು (ಫೆ.12) : ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಇಬ್ಬರು ಮಕ್ಕಳನ್ನು ತಂದೆಯೇ ಕತ್ತು ಹಿಸುಕಿ ಕೊಂದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಕ್ಕಲದೊಡ್ಡಿ ಗ್ರಾಮದಲ್ಲಿ ನಡೆದಿದೆ.
5ವರ್ಷದ ಶಿವರಾಜ್ ಮತ್ತು 3ವರ್ಷದ ರಾಘವೇಂದ್ರ ತಂದೆಯಿಂದಲೇ ಹತ್ಯೆಯಾದ ದುರ್ದೈವಿ ಮಕ್ಕಳು. ಪತ್ನಿ ಪರಪುರಷನೊಂದಿಗೆ ಅನೈತಿಕ ಸಂಬಂಧ(Illicit Relationship) ಇಟ್ಟುಕೊಂಡಿದ್ದು ತಿಳಿದು ಬೇಸತ್ತಿದ್ದ ಆರೋಪಿ ಲಿಂಗಣ್ಣ(Linganna). ಇದೇ ಕಾರಣಕ್ಕೆ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಆದರೂ ಪತ್ನಿಯ ಅನೈತಿಕ ಸಂಬಂಧ ಮುಂದುವರಿದಿತ್ತು ಎಂಬ ಶಂಕೆ ಲಿಂಗಣ್ಣನಿಗೆ ಮತ್ತಷ್ಟು ಕೋಪ ತರಿಸಿತ್ತು. ಇದರಿಂದ ತೀವ್ರ ಕುಪಿತಗೊಂಡಿದ್ದ. ಪತ್ನಿ ಮೇಲಿನ ಕೋಪಕ್ಕೆ ಮಕ್ಕಳ ಕತ್ತು ಹಿಸುಕಿ ಕೊಂದಿರುವ ಪಾಪಿ ತಂದೆ.
undefined
ಗಂಡ ಹೆಂಡತಿ ನಡುವೆ ಅನೈತಿಕ ಸಂಬಂಧಕ್ಕೆ ಗಲಾಟೆ: ಮನೆ ಬಳಿ ಹೋಗಿ ಎರಡನೇ ಹೆಂಡತಿ ಸೀಮಂತ ವೇಳೆ ಹೊಡೆದಾಟ
ತವರು ಮನೆ ಸೇರಿದ್ದ ಪತ್ನಿ:
ಅನೈತಿಕ ಸಂಬಂಧ ಹಿನ್ನೆಲೆ ಪತ್ನಿಯೊಂದಿಗೆ ಜಗವಾಗುತ್ತಿತ್ತು. ಹೀಗಾಗಿ ಪತ್ನಿ ಪ್ರತ್ಯೇಕವಾಗಿ ವಾಸವಿದ್ದರು. ಇತ್ತೀಚೆಗೆ ತವರು ಮನೆ ಸೇರಿಕೊಂಡಿದ್ದ ಪತ್ನಿ. ಪತ್ನಿಯ ಊರಿಗೆ ಹೋಗಿ ಮಕ್ಕಳನ್ನ ಕರೆದುಕೊಂಡು ಬಂದಿದ್ದ ಆರೋಪಿ ಲಿಂಗಣ್ಣ. ಊರಿಗೆ ಕರೆದುಕೊಂಡು ಮನೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವ ಪಾಪಿ.
ಮಕ್ಕಳನ್ನು ಕೊಂದ ಬಗ್ಗೆ ಅಕ್ಕಪಕ್ಕದವರಿಗೆ ಅನುಮಾನ ಬಂದ ಹಿನ್ನೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಬರುವವರೆಗೆ ಆರೋಪಿ ಲಿಂಗಣ್ಣನನ್ನು ಹಿಡಿದಿಟ್ಟಿದ್ದ ಗ್ರಾಮಸ್ಥರು. ಬಳಿಕ ಪೊಲಿಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ನಿ ಅನೈತಿಕ ಸಂಬಂಧ ಅನುಮಾನ: ಡಂಬಲ್ಸ್‌ನಿಂದ ಹೊಡೆದು ಕೊಲೆ
ಸದ್ಯ ಆರೋಪಿ ಲಿಂಗಣ್ಣನನ್ನ ವಶಕ್ಕೆ ಪಡೆದಿರುವ ಪೊಲೀಸರು. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ದೇವದುರ್ಗ ಪೊಲೀಸ್ ಠಾಣೆ(Devadurga police station)ಯಲ್ಲಿ ಪ್ರಕರಣ ದಾಖಲು