ಇಲ್ಲಿನ ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪೊಲೀಸ ಪೇದೆ ಶವ ಪತ್ತೆಯಾಗಿದೆ. ಪಟ್ಟಣ ದಲ್ಲಿ ಸೊಪ್ಪುಗುಡ್ಡೆಯಲ್ಲಿರುವ ಮೀನು ಮತ್ತು ಮಾಂಸ ಮಾರಾಟ ಮಾರುಕಟ್ಟೆಯಲ್ಲಿ ಪೊಲೀಸ್ ಸಿಬ್ಬಂದಿ ಪೂರ್ಣೇಶ್ ಶವ ಪತ್ತೆ. ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಂದು ಹಾಕಿದಂತೆ ರಕ್ತಸಿಕ್ತವಾಗಿ ಬಿದ್ದಿರುವ ಮೃತದೇಹ.
ತೀರ್ಥಹಳ್ಳಿ (ಮಾ.25) ಇಲ್ಲಿನ ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪೊಲೀಸ ಪೇದೆ ಶವ ಪತ್ತೆಯಾಗಿದೆ. ಪಟ್ಟಣ ದಲ್ಲಿ ಸೊಪ್ಪುಗುಡ್ಡೆಯಲ್ಲಿರುವ ಮೀನು ಮತ್ತು ಮಾಂಸ ಮಾರಾಟ ಮಾರುಕಟ್ಟೆಯಲ್ಲಿ ಪೊಲೀಸ್ ಸಿಬ್ಬಂದಿ ಪೂರ್ಣೇಶ್(Purnesh murder) ಶವ ಪತ್ತೆ. ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಂದು ಹಾಕಿದಂತೆ ರಕ್ತಸಿಕ್ತವಾಗಿ ಬಿದ್ದಿರುವ ಮೃತದೇಹ.
ಪೊಲೀಸ ಇಲಾಖೆ(Police depertment)ಯಲ್ಲಿ ಪೊಲೀಸ್ ಪೇದೆಯಾಗಿದ್ದ ಪೂರ್ಣೇಶ, ಆಗುಂಬೆ, ತೀರ್ಥಹಳ್ಳಿ ,ಮಾಳೂರು ಕುಂಸಿಯಲ್ಲಿ ಸೇವೆ ಸಲ್ಲಿಸಿದ್ದರು. ಕುಡಿತದ ಚಟ ಅಂಟಿಸಿಕೊಂಡಿದ್ದ ಪೂರ್ಣೇಶ್ ಈಗಾಗಲೇ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಮೂರಕ್ಕೂ ಹೆಚ್ಚು ಬಾರಿ ಅಮಾನತ್ತು ಗೊಂಡಿದ್ದರು. ಇದೀಗ ಸೊಪ್ಪುಗುಡ್ಡೆ ಮೀನು ಮಾರುಕಟ್ಟೆಯಲ್ಲಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಸದ್ಯ ಪೊಲೀಸರು ಮೃತದೇಹ ಪರಿಶೀಲಿಸಿದ್ದು ಈ ಪ್ರಕರಣದ ಬೆನ್ನುಹತ್ತಿದ್ದಾರೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.
ಗೋಕಾಕ್: ಉದ್ಯಮಿ ರಾಜು ಝಂವರ್ ಹತ್ಯೆ ಪ್ರಕರಣ, 6 ದಿನಗಳ ಬಳಿಕ ಶವ ಪತ್ತೆ