ಪಾಂಗಾಳದ ರಾಷ್ಟ್ರೀಯ ಹೆದ್ದಾರಿಯಲ್ಲಿ 2023 ರ ಫೆ. 5 ರಂದು ಸಂಜೆ ಯೋಗಿಶ್ ಆಚಾರ್ಯ ತನ್ನ ತಂಡದೊಂದಿಗೆ ಸೇರಿ ಆಪ್ತ ಸ್ನೇಹಿತನಂತಿದ್ದ ಶರತ್ ಶೆಟ್ಟಿಯನ್ನು ಕೊಲೆಗೈದು 45 ದಿನಗಳು ಉರುಳಿದವು. ಪೋಲಿಸ್ ಇಲಾಖೆ ಪ್ರಕರಣದ ಪ್ರಮುಖ ಆರೋಪಿ ಯೋಗಿಶ್ ಆಚಾರ್ಯನನ್ನು ಬಂಧಿಸಲು ಸಾಧ್ಯವಾಗಿಲ್ಲ. ದಿಕ್ಕು ತೋಚದ ಶರತ್ ಕುಟುಂಬಸ್ಥರು ದೈವದ ಮೊರೆ ಹೋಗಿದ್ದಾರೆ.
ಉಡುಪಿ (ಮಾ.25) : ಪಾಂಗಾಳದ ರಾಷ್ಟ್ರೀಯ ಹೆದ್ದಾರಿಯಲ್ಲಿ 2023 ರ ಫೆ. 5 ರಂದು ಸಂಜೆ ಯೋಗಿಶ್ ಆಚಾರ್ಯ ತನ್ನ ತಂಡದೊಂದಿಗೆ ಸೇರಿ ಆಪ್ತ ಸ್ನೇಹಿತನಂತಿದ್ದ ಶರತ್ ಶೆಟ್ಟಿಯನ್ನು ಕೊಲೆಗೈದು 45 ದಿನಗಳು ಉರುಳಿದವು. ಪೋಲಿಸ್ ಇಲಾಖೆ ಪ್ರಕರಣದ ಪ್ರಮುಖ ಆರೋಪಿ ಯೋಗಿಶ್ ಆಚಾರ್ಯನನ್ನು ಬಂಧಿಸಲು ಸಾಧ್ಯವಾಗಿಲ್ಲ. ದಿಕ್ಕು ತೋಚದ ಶರತ್ ಕುಟುಂಬಸ್ಥರು ದೈವದ ಮೊರೆ ಹೋಗಿದ್ದಾರೆ.
ತುಳುನಾಡು ಧರ್ಮ ದೈವಗಳ ನೆಲೆವೀಡು. ಇಲ್ಲಿನ ಪ್ರತಿ ಕುಟುಂಬವು ಒಂದೊಂದು ದೈವವನ್ನು ಆರಾಧನೆ ಮಾಡಿಕೊಂಡು ಬಂದಿದೆ. ಕಷ್ಟ, ಸುಖ ಎಲ್ಲವನ್ನೂ ದೈವದ ಮಡಿಲಿಗೆ ಸಮರ್ಪಿಸುತ್ತಾರೆ. ಗುರುವಾರ ರಾತ್ರಿ ಪಾಂಗಳದ ಶರತ್ ಶೆಟ್ಟಿ ಮನೆಯಲ್ಲಿ ನಡೆದ ನೇಮೋತ್ಸವದಲ್ಲಿ ಕುಟುಂಬಿಕರು, ನಮ್ಮ ಕುಟುಂಬದ ಮಗುವನ್ನು ಕಳೆದುಕೊಂಡಿದ್ದೇವೆ. ಯಾರ ಬಳಿ ನ್ಯಾಯ ಕೇಳಬೇಕು ಎಂದು ದೈವದ ಮುಂದೆ ಅಳಲನ್ನು ತೋಡಿಕೊಂಡಿದ್ದಾರೆ.
undefined
Udupi: ಗಾಂಜಾ ಸೇವನೆ ಮಾರಾಟ ವಿರುದ್ಧ ಆಪರೇಶನ್ ಸೂರ್ಯಾಸ್ತ, ಮೂವರ ಬಂಧನ
ದೈವವು ಕುಟುಂಬಿಕರ ಪ್ರಾರ್ಥನೆಯನ್ನು ನೆರವೇರಿಸುವುದಾಗಿ ಅಭಯ ನೀಡಿದೆ. ಶರತ್ ಶೆಟ್ಟಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇದುವರೆಗೆ 6 ಜನರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಯೋಗಿಶ್ ಆಚಾರ್ಯ ತಲೆಮರೆಸಿಕೊಂಡಿದ್ದಾನೆ.
ಯೋಗಿಶ್ ಆಚಾರ್ಯನೊಂದಿಗೆ ಹತ್ಯೆಯಲ್ಲಿ ಭಾಗಿಯಾದ ಹುಡುಗರು ಮತ್ತು ತಲ್ವಾರ್ ಒದಗಿಸಿದವರು ಮಂಗಳೂರಿನ ಕಾರಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಓರ್ವ ಹಿರಿಯಡ್ಕದ ಕಾರಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.