Chikkaballapur: ವಿಷ ಬೆರೆಸಿಕೊಟ್ಟ ಸಿಹಿ ತಿಂದು ವಧು ಅಸ್ವಸ್ಥ: ಆಸ್ಪತ್ರೆ ದಾಖಲು

By Kannadaprabha News  |  First Published Nov 22, 2022, 9:48 PM IST
  • ವಿಷ ಬೆರೆಸಿ ಕೊಟ್ಟ ಸಿಹಿ ತಿಂದು ವಧು ಅಸ್ವಸ್ಥ
  • ಚಿಂತಾಮಣಿ ಬಳಿ ಚಿನ್ನದಸಂದ್ರದ ಕಲ್ಯಾಣ ಮಂಟಪದಲ್ಲಿ ಘಟನೆ

ಚಿಕ್ಕಬಳಾಪುರ (ನ.22) : ಮದುವೆ ಸಂಭ್ರಮದಲ್ಲಿದ್ದ ವಧುವಿಗೆ ಮಹಿಳೆಯೊಬ್ಬರು ಯಾರಿಗೂ ಗೊತ್ತಾಗದಂತೆ ಸಿಹಿ ಜೊತೆಯಲ್ಲಿ ವಿಷ ಬೆರೆಸಿ ಕೊಟ್ಟಿದ್ದು ಅದನ್ನು ತಿಂದ ವಧು ಕೆಲ ಸಮಯದ ಬಳಿಕ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ. ವಿಷದ ಸಿಹಿ ಹಾಗೂ ಜ್ಯೂಸ್‌ ಕುಡಿದು ಅಸ್ವಸ್ಥಳಾದ ವಧುವನ್ನು ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ ಫಿಜಾಕಾನಂ ಕೋಂ ಜಭೀವುಲ್ಲಾ (20) ಎಂದು ಗುರುತಿಸಲಾಗಿದೆ.

ನೆರೆಯ ಮದನಪಲ್ಲಿ ಇಂದಿರಾನಗರ ವಾಸಿ ನೂರ್‌ ಬಾಷ ಜತೆ ಮದುವೆ ಮಾಡಲು ಭಾನುವಾರ ಚಿಂತಾಮಣಿಯ ಬೆಂಗಳೂರು ರಸ್ತೆಯಲ್ಲಿರುವ ರಾಯಲ್‌ ಪ್ಯಾಮಿಲಿ ಫಂಕ್ಷನ್‌ ಹಾಲ್‌ನಲ್ಲಿ ಮದುವೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಜೆ 4 ಗಂಟೆಯಲ್ಲಿ ವಧು ಫಿಜಾಖಾನಂ ತಮ್ಮ ಸಂಬಂಧಿಕರ ಜೊತೆಗೆ ಪ್ರತ್ಯೇಕ ರೂಂನಲ್ಲಿದ್ದಾಗ ಬಂದ ಮಹಿಳೆಯೊಬ್ಬರು ತಾನು ವರನ ಕಡೆಯವಳು ನನ್ನ ಗಂಡ ಸೌದಿಯಲ್ಲಿದ್ದಾರೆ, ನಿಮಗೆ ಒಳ್ಳೆಯ ಸ್ವೀಟ್‌ ಮಾಡಿಕೊಂಡು ಬಂದಿದ್ದೇನೆಂದು ಸೋಂಪಾಪುಡಿ ತರದ ಸ್ವೀಟ್‌ ತಿನ್ನಿಸಿದ್ದಾಳೆ. ನಂತರ ಜ್ಯೂಸ್‌ ಕೊಟ್ಟು ಕುಡಿಯಿರಿ ಎಂದು ಹೇಳಿ ಹೊರ ಹೋಗಿದ್ದಾಳೆ.

Tap to resize

Latest Videos

ವೈದ್ಯೆಯ ಬಲಿ ಪಡೆದ ಡೋಕ್ಲಾ, ಸಪ್ತಪದಿಗೂ ಕೆಲ ಕ್ಷಣಗಳ ಮೊದಲು ವಧು ಸಾವು, ವರನ ಗೋಳಾಟ!

ಸಿಹಿ ತಿಂದು ಜ್ಯೂಸ್‌ ಕುಡಿದ್ದ ಫಿಜಾಖಾನಂಗೆ ಕೆಲ ಸಮಯ ಬಳಿಕ ತಲೆ ಸುತ್ತಿದಂತೆ ಆಗಿ ನಿಶಕ್ತಿಯಿಂದ ಪ್ರಜ್ಞೆ ಕಳೆದುಕೊಂಡು ನೆಲಕ್ಕುರುಳಿ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಪೋಷಕರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೆ.ಆರ್‌.ಪುರದ ತಸ್ಲಿಮಾ ಆಲಂ ಕೋಂ ತನ್ವೀರ್‌ ಎಂಬುವಳ ವಿರುದ್ಧ ದೂರು ದಾಖಲಾಗಿದೆ.
ಮದುವೆ ಮಹೂರ್ತಕ್ಕೂ ಮುನ್ನವೇ ಕುಸಿದು ಬಿದ್ದು ವಧು ಸಾವು, ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದ್ದೇ ಬೇರೆ!

click me!