ಬೆಣಕಲ್ ಗ್ರಾಮದ ಬಳಿ ಭೀಕರ ಅಪಘಾತ: ಲಾರಿ ಹರಿದು 30ಕ್ಕೂ ಹೆಚ್ಚು ಕುರಿಗಳು ಸಾವು!

By Kannadaprabha News  |  First Published Apr 13, 2023, 2:02 PM IST

ಕುರಿಗಳ ಮೇಲೆ ಲಾರಿ ಹರಿದು 30 ಕುರಿಗಳು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಕುರಿಗಳ ಕಾಲು ಮುರಿದಿರುವಂತ ಘಟನೆ ತಾಲೂಕಿನ ಗುಂಡೂರು ಕ್ರಾಸ್‌ ಮಂಗಳವಾರ ನಡೆದಿದೆ.


ಕಾರಟಗಿ (ಏ.13) : ಕುರಿಗಳ ಮೇಲೆ ಲಾರಿ ಹರಿದು 30 ಕುರಿಗಳು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಕುರಿಗಳ ಕಾಲು ಮುರಿದಿರುವಂತ ಘಟನೆ ತಾಲೂಕಿನ ಗುಂಡೂರು ಕ್ರಾಸ್‌ ಮಂಗಳವಾರ ನಡೆದಿದೆ.

ಘಟನೆಯಲ್ಲಿ 42 ಕುರಿಗಳು ಸಾವನ್ನಪ್ಪಿದ್ದು, 26 ಕುರಿಗಳು ತೀವ್ರ ಗಾಯಗೊಂಡಿದ್ದು ಮತ್ತಷ್ಟುಸಾವನ್ನಪ್ಪಬಹುದು ಎಂದು ಕುರಿ ಮಾಲೀಕರು ತಿಳಿಸಿದ್ದಾರೆ. ಬೇಸಿಗೆ ಬಿಸಿಲು ಹೆಚ್ಚಾಗಿ ಇರುವುದರಿಂದ ಕುರಿಗಳಿಗೆ ತೊಂದರೆಯಾಗುತ್ತದೆ ಎಂದು ಬೆಳ್ಳಂಬೆಳಿಗ್ಗೆ ಆರ್‌ಜಿ ಮುಖ್ಯ ರಸ್ತೆ ಮೂಲಕ ಸ್ವಂತ ಗ್ರಾಮ ಚಿಕ್ಕ ಬೆಣಕಲ್‌(Benakal road) ಕಡೆಗೆ ಪ್ರಯಾಣ ಬೆಳೆಸಿದ್ದಾರೆ.ಆದರೆ, ದುರದೃಷ್ಟವಶಾತ್‌ ವೇಗವಾಗಿ ಬಂದ ಲಾರಿ ಏಕಾಏಕಿ ಕುರಿಗಳ ಮೇಲೆ ಹರಿದಿದೆ.ಇದರಿಂದ ಗಾಬರಿಗೊಂಡ ಕುರಿಗಾಹಿಗಳು ಕುರಿಗಳನ್ನು ಬಿಟ್ಟು ಪಕ್ಕಕ್ಕೆ ಸರಿದು ಪ್ರಾಣ ಉಳಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

Tap to resize

Latest Videos

undefined

ವಾಹನದ ಮಾಲೀಕ ಯಾರೆಂಬುದು ತಿಳಿದು ಬಂದಿಲ್ಲ.ಇನ್ನು ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್‌ ಗ್ರಾಮದ ನಿವಾಸಿ ಅಯ್ಯಪ್ಪ ಎಂಬುವವರಿಗೆ ಸೇರಿದ ಕುರಿಗಳಾಗಿವೆ ಎಂದು ತಿಳಿದು ಬಂದಿದ್ದು,

ಬೆಂಗಳೂರಿನಲ್ಲಿ KD ಚಿತ್ರದ ಶೂಟಿಂಗ್​ ವೇಳೆ ಬಾಂಬ್​ಬ್ಲಾಸ್ಟ್​: ಸಂಜಯ್​ ದತ್​ಗೆ ಹೇಗಾಯ್ತು ಪೆಟ್ಟು?

ಗ್ಯಾಸ್‌ ಗೀಜರ್‌ನಲ್ಲಿ ಆಕಸ್ಮಿಕ ಬೆಂಕಿ: ವ್ಯಕ್ತಿ ಸಾವು

ಕಾರ್ಕಳ : ಬಿಸಿ ನೀರಿಗೆ ಅಳವಡಿಸಿದ ಗ್ಯಾಸ್‌ ಗೀಜರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ವ್ಯಕ್ತಿವೋರ್ವರು ಸಾವಿಗೀಡಾದ ಘಟನೆ ಕಾರ್ಕಳ ಕಸಬದ ವೆಂಕಟರಮಣ ದೇವಸ್ಥಾನ ಬಳಿ ಎ.8 ರಂದು ನಡೆದಿದೆ. ಪ್ರಕಾಶ್‌ ಮಲ್ಯ (74) ಮೃತರಾದರು.

ಏ. 8ರಂದು ಮುಂಜಾನೆ ಸ್ನಾನ ಮಾಡುತ್ತಿರುವಾಗ ಬಿಸಿ ನೀರಿಗೆ ಅಳವಡಿಸಿದ ಗ್ಯಾಸ್‌ ಗೀಜರ್‌ ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಪ್ರಕಾಶ್‌ ಅವರ ಮೈಗೆ ಬೆಂಕಿ ತಗುಲಿದ್ದು, ತೀವ್ರ ಸ್ವರೂಪದ ಸುಟ್ಟಗಾಯವಾಗಿ ಚಿಕಿತ್ಸೆಗಾಗಿ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಏ. 12ರಂದು ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್‌ ಮಲ್ಯ ಅವರು ಮೃತಪಟ್ಟಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಳವಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಸಾವು, 10 ಜನರಿಗೆ ಗಂಭೀರ ಗಾಯ

ಬಸ್‌-ಕಾರು ಮುಖಾಮುಖಿ ಡಿಕ್ಕಿ: ವ್ಯಕ್ತಿ ಸಾವು

ಹೊನ್ನಾಳಿ:  ಹೊನ್ನಾಳಿ -ಶಿವಮೊಗ್ಗ ರಾಜ್ಯ ಹೆದ್ದಾರಿ ಮಾರ್ಗದಲ್ಲಿ ದಿಡಗೂರು- ಹರಳಹಳ್ಳಿ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಇನೋವಾ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ರಾಜೂಗೌಡ (54) ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಅವರ ಕಿರಿಯ ಪುತ್ರ ರಾಜೇಶ್‌ಗೌಡ (23)ಗೆ ಗಂಭೀರ ಗಾಯಗಳಾಗಿದ್ದು, ಅವರ ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಲಾಗಿದೆ. ರಾಜೂಗೌಡ ಪತ್ನಿ ಗೌರಮ್ಮ (45), ಹಿರಿಯ ಪುತ್ರ ತೇಜಸ್‌ಗೌಡ (25)ಗೆ ಸಣ್ಣಪುಟ್ಟಗಾಯಗಳಾಗಿದ್ದು ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಪಿಐ ಸಿದ್ದೇಗೌಡ ತಿಳಿಸಿದರು. ರಾಜೂಗೌಡ ಕೆ.ಆರ್‌.ಪೇಟೆ ತಾಲೂಕಿನ ಕೈಗೇನಹಳ್ಳಿ ಗ್ರಾಮದವರು. ಮುಂಬೈಯಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಅವರು, ತಮ್ಮ ಗ್ರಾಮ ಕೈಗೇನಹಳ್ಳಿಯಲ್ಲಿ ಜಾತ್ರೆ ಪ್ರಯುಕ್ತ ಊರಿಗೆ ತೆರಳುವಾಗ ದುರ್ಘಟನೆ ಸಂಭವಿಸಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಪ್ರಕರಣ ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು ಸಿಪಿಐ ಸಿದ್ದೇಗೌಡ ಪತ್ರಿಕೆಗೆ ತಿಳಿಸಿದ್ದಾರೆ.

click me!