ದೇವಸ್ಥಾನದ ವಿಚಾರಕ್ಕೆ ಕೊಲೆ: ಬೆಳಗಾವಿ ಉದ್ವಿಗ್ನ, 25 ವಾಹನಗಳಿಗೆ ಬೆಂಕಿ

By Kannadaprabha News  |  First Published Jun 19, 2022, 5:57 AM IST

*  ಬೆಳಗಾವಿ ತಾಲೂಕಿನ ಗೌಂಡವಾಡದಲ್ಲಿ ನಡೆದ ಘಟನೆ
*  15 ಮಂದಿ ಬಂಧನ
*  ಪೊಲೀಸರ ಭಾರೀ ಭದ್ರತೆ
 


ಬೆಳಗಾವಿ(ಜೂ.19): ತಾಲೂಕಿನ ಗೌಂಡವಾಡದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಶನಿವಾರ ತಡರಾತ್ರಿ ಓರ್ವ ವ್ಯಕ್ತಿಯ ಕೊಲೆಯಾಗಿದ್ದು, ಗ್ರಾಮದಲ್ಲಿ ಘರ್ಷಣೆ ಸಂಭವಿಸಿದೆ. 

ಈ ವೇಳೆ ನಡೆದ ಹಿಂಸಾಚಾರದಲ್ಲಿ 25ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಲಾಗಿದೆ. ಸತೀಶ್‌ ಪಾಟೀಲ ಹತ್ಯೆಯಾದ ವ್ಯಕ್ತಿ. 

Tap to resize

Latest Videos

ಬೆಳಗಾವಿಗೂ ಕಾಲಿಟ್ಟ 'ಅಗ್ನಿಪಥ್' ಜ್ವಾಲೆ: ಜೂ.20ರಂದು ಗಡಿ ಜಿಲ್ಲೆ ಬಂದ್ ಆಗುತ್ತಾ?

ದೇವಸ್ಥಾನಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆಯಲ್ಲಿ ಇವರನ್ನು ಹತ್ಯೆ ಮಾಡಲಾಗಿದೆ. ನಂತರ ಘರ್ಷಣೆ ಭುಗಿಲೆದ್ದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರನ್ನು ವಶಕ್ಕೆ ಪಡೆಯಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು 4 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.
 

click me!