ಕೊಲೆಯಾದ ದೇವೇಂದ್ರಪ್ಪ ವೈಷ್ಣೋದೇವಿ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದರು. ದೇವೇಂದ್ರಪ್ಪ ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗಳು
ಹುಬ್ಬಳ್ಳಿ(ಜು.21): ಚಾಕುವಿನಿಂದ ಇರಿದು ದೇವಸ್ಥಾನದ ಪೂಜಾರಿಯ ದುಷ್ಕರ್ಮಿಗಳು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ದೇವೇಂದ್ರಪ್ಪ ಹೊನ್ನಳಿ ಕೊಲೆಯಾದ ಪೂಜಾರಿ.
ಕೊಲೆಯಾದ ದೇವೇಂದ್ರಪ್ಪ ವೈಷ್ಣೋದೇವಿ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದರು. ದೇವೇಂದ್ರಪ್ಪ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳುದು ಬಂದಿದೆ.
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಮೊದಲು ಅರೆಸ್ಟ್ ಆಗ್ತಿದ್ದವರು ಪಟ್ಟಣಗೆರೆ ಶೆಡ್ ಮಾಲೀಕ ವಿನಯ್!
ದೇವೇಂದ್ರಪ್ಪರ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸರ ತನಿಖೆಯಿಂದಷ್ಟೇ ಕಾರಣ ತಿಳಿದು ಬರಬೇಕಿದೆ. ಈ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.