ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಮೊದಲು ಅರೆಸ್ಟ್ ಆಗ್ತಿದ್ದವರು ಪಟ್ಟಣಗೆರೆ ಶೆಡ್ ಮಾಲೀಕ ವಿನಯ್!

By Sathish Kumar KH  |  First Published Jul 21, 2024, 9:00 PM IST

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್‌ ಗ್ಯಾಂಗ್‌ನ 3 ಜನ ಆರೋಪಿಗಳು ಸರೆಂಡರ್ ಆಗುವ ಮುನ್ನವೇ ಸಾಕ್ಷಿ ಸಂಗ್ರಹಿಸಿದ್ದ ಪೊಲೀಸರು ಮೊದಲು ಪಟ್ಟಣಗೆರೆ ಶೆಡ್ ಮಾಲೀಕ ವಿನಯ್ ಅರೆಸ್ಟ್ ಮಾಡಲು ಪೊಲೀಸರು ಮುಂದಾಗಿದ್ದರು.


ಬೆಂಗಳೂರು (ಜು.21): ನಟಿ ಪವಿತ್ರಾಗೌಡಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆಂಬ ಹಿನ್ನೆಲೆಯಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ಬಂದು ಕೊಲೆ ಮಾಡಿದ್ದ ನಟ ದರ್ಶನ್ ತೂಗುದೀಪ ಅಂಡ್ ಗ್ಯಾಂಗ್‌ನ ಮೂವರು ಆರೋಪಿಗಳು ಸರೆಂಡರ್ ಆಗುವುದಕ್ಕೂ ಮುನ್ನವೇ ಬೆಂಗಳೂರು ಪೊಲೀಸರು ರೇಣುಕಾಸ್ವಾಮಿ ಮೃಹದೇಹ ಎಸೆದುಹೋದ ಬಗ್ಗೆ ಕೆಲವು ಮಹತ್ವದ ಸಾಕ್ಷಿಗಳನ್ನು ಸಂಗ್ರಹ ಮಾಡಿದ್ದರು. ಅದರಲ್ಲಿ ಪಟ್ಟಣಗೆರೆ ಶೆಡ್‌ನ ವಿನಯ್‌ನನ್ನು ಮೊದಲು ಅರೆಸ್ಟ್ ಮಾಡಲು ಪೊಲೀಸರು ಯೋಜನೆ ರೂಪಿಸಿದ್ದರು.

ಸ್ಯಾಂಡಲ್‌ವುಡ್ ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ಪೊಲೀಸ್ ಠಾಣೆಗೆ ಬಂದು ಸರೆಂಡರ್ ಆಗುವ ಮುಂಚಿತವಾಗಿಯೇ, ಪೊಲೀಸರು ಕೆಲವು ಆರೋಪಿಗಳ ಸುಳಿವು ಪತ್ತೆ ಮಾಡಿದ್ದರು. ಇನ್ನು ಪೊಲೀಸರು ತಮ್ಮನ್ನು ಬಂದು ಬಂಧಿಸುವ ಮುನ್ನವೇ ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ದೊಡ್ಡದೊಂದು ಪ್ಲ್ಯಾನ್ ಅನ್ನೇ ಮಾಡಿದ್ದರು. ಅವರ ಯೋಜನೆಯಂತೆ ರೇಣುಕಾಸ್ವಾಮಿಯನ್ನು ಹಣದ ವಿಚಾರಕ್ಕಾಗಿ ತಾವೇ ಕೊಲೆ ಮಾಡಿರುವುದಾಗಿ ಹೇಳಿಕೊಂಡು ಕಾರ್ತಿಕ್ @ ಕಪ್ಪೆ, ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಹಾಗೂ ನಿಖಿಲ್ ಕಾಮಕ್ಷಿಪಾಳ್ಯ ಠಾಣೆಗೆ ಹೋಗಿ ಪೊಲೀಸರುಗೆ ಸರೆಂಡರ್ ಆಗಿದ್ದರು.

Tap to resize

Latest Videos

ಜೈಲಿನಲ್ಲಿರೋ ದರ್ಶನ್‌ಗೆ ಕಾಟೇರ ನಮಸ್ಕಾರ; ಮದುವೆಗೆ ಆಶೀರ್ವಾದ ಪಡೆದ ನಿರ್ದೇಶಕ ತರುಣ್ ಸುಧೀರ

ಆದರೆ, ಇದಕ್ಕೂ ಮೊದಲೇ ಇನ್ಸ್‌ಪೆಕ್ಟರ್ ಗಿರೀಶ್ ನೇತೃತ್ವದ ಪೊಲೀಸರ ತಂಡವು ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪಿಗಳ ಸುಳಿವನ್ನು ಪತ್ತೆ ಮಾಡಿದ್ದರು. ಒಂದು ವೇಳೆ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪಿಗಳು ಪೊಲೀಸ್ ಠಾಣೆಗೆ ಬಂದು ಸರೆಂಡರ್ ಆಗದಿದ್ದರೆ, ಪೊಲೀಸರು ಕೊಲೆ ಕೇಸಿನಲ್ಲಿ ಮೊದಲನೆಯ ಆರೋಪಿಯನ್ನಾಗಿ ಪಟ್ಟಣಗೆರೆ ಶೆಡ್ ಮಾಲೀಕ ವಿನಯ್ ಅವರನ್ನು ಅರೆಸ್ಟ್ ಮಾಡಿ ತಮ್ಮದೇ ಸ್ಟೈಲ್‌ನಲ್ಲಿ ವಿಚಾರಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ, ಅಲ್ಲಿಂದ ಸೀದಾ ಸುಮನಹಳ್ಳಿ ಮೇಲ್ಸೇತುವೆ ಬಳಿಯ ಮೋರಿಯ ಬಳಿ ಶವ ಎಸೆದು ಹೋಗಿದ್ದ ವಾಹನದ ಆಧಾರದಲ್ಲಿ ಸಿಸಿಟಿವಿ ಟವರ್ ಡಂಪ್ ಮೂಲಕ ಸಾಕಷ್ಟು ಮಾಹಿತಿಯನ್ನೂ ಕಲೆ ಹಾಕಿದ್ದರು. 

ಸಿಸಿಟಿವಿಯಲ್ಲಿ ಪತ್ತೆಯಾದ ರೆಡ್ ಕಲರ್ ಜೀಪಿನ ಜಾಡು ಹತ್ತಿದ ಪೊಲೀಸರು, ಅದರ ಮಾಲೀಕ ಯಾರು? ಯಾವ ಏರಿಯಾ ಕಾರು ಅನ್ನೋದನ್ನ ಪತ್ತೆ ಮಾಡಿದ್ದರು. ಇನ್ನೇನು ಪಟ್ಟಣಗೆರೆ ಶೆಡ್ ಮಾಲೀಕ ವಿನಯ್‌ನಲ್ಲಿ ಹೋಗಿ ವಶಕ್ಕೆ ಪಡೆಯಬೇಕು ಎನ್ನುವಷ್ಟರಲ್ಲಿ, ಕಾರ್ತಿಕ್, ರಾಘವೇಂದ್ರ ಹಾಗೂ ನಿಖಿಲ್ ಮೂವರು ಆರೋಪಿಗಳು ಠಾಣೆಗೆ ಬಂದು ಶರಣಾಗಿದ್ದರು. ಹೀಗಾಗಿ, ವಿನಯ್‌ನನ್ನು ವಶಕ್ಕೆ ಪಡೆಯಲು ಹೋಗಿದ್ದ ೊಲೀಸರ ತಂಡವು ವಾಪಸ್ ಬಂದಿತ್ತು. ನಂತರ, ಠಾಣೆಗೆ ಬಂದು ಶರಣಾದ ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರು, ಮುಂದಿನ ತನಿಖೆಯನ್ನು ನಡೆಸಿ ಒಬ್ಬೊಬ್ಬರನ್ನು ಸೇರಿಸಿ ಒಟ್ಟು 17 ಜನರನ್ನು ಬಂಧಿಸಿದ್ದಾರೆ.

click me!