
ಲೈಂಗಿಕ ಕಿರುಕುಳ, ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳ, ಖಾಸಗಿ ಅಂಗ ತೋರಿಸಿ ಹಸ್ತಮೈಥುನ ಸೇರಿದಂತೆ ಹಲವು ಘಟನೆಗಳು ವರದಿಯಾಗಿದೆ. ಕಾಲ ಕೆಟ್ಟು ಹೋಗಿದೆ. ಯಾರು ಕೂಡ ಸೇಫ್ ಅಲ್ಲ. ಮಹಿಳೆಯರು, ಹೆಣ್ಣು ಮಕ್ಕಳು, ಹಸುಗೂಸು, ನಾಯಿ ಸೇರಿದಂತೆ ಪ್ರಾಣಿಗಳು ಕೂಡ ಲೈಂಗಿಕ ಕಿರುಕುಳಕ್ಕೆ ಒಳಗಾಗಿದೆ. ಪ್ರತಿ ದಿನ ಈ ರೀತಿಯ ಘಟನೆಗಳು ನಡೆಯುತ್ತಿದೆ. ಇದೀಗ ಇಷ್ಟರ ಬಗ್ಗೆ ಗಮನಹರಿಸಿದರೆ ಸಾಲದು, ಕಾರು, ಕಾರಿನ ಸೈಲೆನ್ಸರ್ ಕೂಡ ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆ ನಡೆದಿದೆ. ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಕಾರಿನ ಬಳಿ ಬಂದ ವ್ಯಕ್ತಿಯೊಬ್ಬ, ಖಾಸಗಿ ಅಂಗವನ್ನು ಕಾರಿನ ಎಕ್ಸ್‌ಹಾಸ್ಟ್‌ಗೆ ತುರುಕಿ ಲೈಂಗಿಕ ಕ್ರಿಯೆ ನಡೆಸಿದ ವಿಡಿಯೋ ವೈರಲ್ ಆಗಿದೆ.
ಎಲ್ಲಿಗೆ ಬಂತು ಕಾಲ, ಜನ ಇಷ್ಟು ಕೆಟ್ಟು ಹೋಗಿದ್ದಾರಾ ಅನ್ನೋ ಪ್ರಶ್ನೆಗಳು ಪದೇ ಪದೇ ಕೇಳಿಬರುತ್ತಿದೆ. ಇಂತಹ ಹಲವು ಆಘಾತಕ್ಕೆ ಈ ವಿಡಿಯೋ ಉತ್ತರ ನೀಡುತ್ತಿದೆ. ಈ ವ್ಯಕ್ತಿಯ ವಯಸ್ಸು ನೋಡಿದರೆ 50 ದಾಟಿದೆ.ಗಡ್ಡ ಬಿಳಿಯಾಗಿದೆ. ನೋಡಲು ನಿರ್ಗತಿಕನ ರೀತಿಯಲ್ಲಿ ಕಾಣಿಸುತ್ತಿದ್ದಾನೆ. ಆದರೆ ಈತನ ನಡೆ ಮಾತ್ರ ಅಚ್ಚರಿ ತಂದಿದೆ.
ಇದೆಂತಾ ಕೌರ್ಯದ ವಿಡಿಯೋ? ಮಲಗಿದ್ದ ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧ!
ರಸ್ತೆ ಬದಿಯಲ್ಲಿ ಸಾಲಾಗಿ ಕಾರುಗಳನ್ನು ಪಾರ್ಕ್ ಮಾಡಲಾಗಿದೆ. ಈ ಪೈಕಿ ಹಿಂಭಾಗದಲ್ಲಿ ನೀಲಿ ಬಣ್ಣದ ಕಾರಿದ್ದರೆ, ಮುಂಭಾಗದಲ್ಲಿ ಸಿಲ್ವರ್ ಬಣ್ಣದ ಕಾರು ಪಾರ್ಕ್ ಮಾಡಲಾಗಿತ್ತು. ನೀಲಿ ಬಣ್ಣದ ಕಾರು ಪ್ರೀಮಿಯಂ ಕಾರು, ಇದರ ಎಕ್ಸ್‌ಹಾಸ್ಟ್ ಕೊಂಚ ವಿಭಿನ್ನ. ಹೀಗಾಗಿ ಈ ವ್ಯಕ್ತಿ ಈ ಸಿಲ್ವರ್ ಕಾರಿನ ಪಕ್ಕ ಬಂದಿದ್ದಾನೆ. ಸುತ್ತು ಮುತ್ತ ನೋಡಿದ್ದಾನೆ. ಯಾರು ಇಲ್ಲ ಅನ್ನೋದು ಖಾತ್ರಿಪಡಿಸಿದ್ದಾರೆ. ಆದರೆ ಕ್ಯಾಮೆರಾ ಕಣ್ಣೊಂದು ಈತನ ವಿಕೃತಿಯನ್ನು ಸೆರೆ ಹಿಡಿದಿದೆ.
ಸಿಲ್ವರ್ ಕಾರಿನ ಹಿಂಭಾಗದಲ್ಲಿದ್ದ ಈ ವ್ಯಕ್ತಿ ನಿಧಾನವಾಗಿ ಕುಳಿತುಕೊಂಡಿದ್ದಾನೆ. ಬಳಿಕ ಖಾಸಗಿ ಅಂಗವನ್ನು ಕಾರಿನ ಎಕ್ಸ್‌ಹಾಸ್ಟ್‌ಗೆ ತುರುಕಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಅದೃಷ್ಚವಶಾತ್ ಈ ಕಾರು ನಿಲ್ಲಿಸಿ ಹಲವು ಹೊತ್ತಾಗಿದೆ. ಹೀಗಾಗಿ ಎಕ್ಸ್‌ಹಾಸ್ಟ್ ಬಿಸಿ ತಣ್ಣಗಾಗಿದೆ. ತನ್ನ ಕ್ರಿಯೆ ಮುಗಿಸಿ ಮೆಲ್ಲನೆ ಎದ್ದು ಸ್ಥಳದಿಂದ ಪರಾರಿಯಾದ ಘಟನೆ ವಿಡಿಯೋದಲ್ಲಿ ದಾಖಲಾಗಿದೆ.
ಈ ಘಟನೆ ಎಲ್ಲಿ ನಡೆದಿರುವ ಕುರಿತು ಮಾಹಿತಿ ಸ್ಪಷ್ಟವಿಲ್ಲ. ಆದರೆ ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಕಾರಿನ ಎಕ್ಸ್‌ಹಾಸ್ಟ್ ಕೂಡ ಸುರಕ್ಷಿತವಲ್ಲ. ಕಾರು ಮಾಲೀಕರೇ ಪಾರ್ಕ್ ಮಾಡುವಾಗ ಎಚ್ಚರ ಎಂದು ಸೂಚಿಸಿದ್ದಾರೆ. ಈ ಕಾರು ಶೀಘ್ರದಲ್ಲೇ ಗರ್ಭಿಣಿಯಾಗಲಿದೆ. ಮಾಲೀಕನಿಗೆ ಪುಟ್ಟ ಕಾರೊಂದು ನೀಡಲಿದೆ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ. ಈ ವಿಡಿಯೋ ಬಳಿಕ ಕಾರು ಹೆಣ್ಣು ಅನ್ನೋದು ಗೊತ್ತಾಯಿತು ಎಂದಿದ್ದಾರೆ.ನಾನು ಎಲೆಕ್ಟ್ರಿಕ್ ಕಾರಿನ ಮಾಲೀಕ, ಹೀಗಾಗಿ ನನ್ನ ಕಾರು ಸುರಕ್ಷಿತ ಎಂದು ಭಾವಿಸಿದ್ದೇನೆ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.
ನಾಯಿಗಳನ್ನು ಅತ್ಯಾಚಾರಗೈದು, ಕೊಂದಿದ್ದ ಪ್ರಾಣಿಶಾಸ್ತ್ರಜ್ಞನಿಗೆ 249 ವರ್ಷ ಜೈಲು ಶಿಕ್ಷೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ