ಅಪಾರ್ಟ್‌ಮೆಂಟ್‌ ಬೆಡ್ ಮೇಲೆ ಆಂಕರ್ ಕಂ ನಟಿಯ ಮೃತದೇಹ!

By Suvarna News  |  First Published Apr 10, 2020, 10:07 PM IST

ಅನುಮಾನಾಸ್ಪದ ರೀತಿಯಲ್ಲಿ ನಟಿ ಶವ ಪತ್ತೆ/ ಅತಿಯಾದ ಮಸ್ಯ ಸೇವನೆ ಮಾಡಿದ್ದ ಕಿರುತೆರೆ ಕಲಾವಿದೆ/ ತೆಲುಗು ನಟಿಯ ಶವ ಅಪಾರ್ಟ್ ಮೆಂಟ್ ನಲ್ಲಿ ಪತ್ತೆ


ಹೈದರಾಬಾದ್(ಏ. 10) ಅನುಮಾನಾಸ್ಪದ ರೀತಿಯಲ್ಲಿ ಧಾರಾವಾಹಿ ನಟಿಯ ಶವ ಗುರುವಾರ ಪತ್ತೆಯಾಗಿದೆ.   32 ವರ್ಷದ ಧಾರಾವಾಹಿ ನಟಿಯ ಶವ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ. 

ವಿ. ಶಾಂತಿ ಎಂಬುವರ ಶವ ಅವರ ಅಪಾರ್ಟ್ ಮೆಂಟ್ ನ ಫ್ಲಾಟ್ ನ ಬೆಡ್ ಮೇಲೆ ಪತ್ತೆಯಾಗಿದೆ. ನೆರೆಮನೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ನಂತರ ಸಮಗ್ರ ತನಿಖೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.  ನಟಿಯ ಪೋಷಕರು ವಿಶಾಖಪಟ್ಟಣದಲ್ಲಿದ್ದು, ಅವರಿಗೆ ಮಾಹಿತಿ ತಿಳಿಸಲಾಗಿದೆ. 

Tap to resize

Latest Videos

undefined

ನೇಣು ಬಿಗಿದುಕೊಂಡ ರೈತನ ಶವದೆದುರು ಶಿರಾ ಎಂಎಲ್ ಎ ಸೆಲ್ಫಿ

ಶಾಂತಿ ಟಿವಿ ಸಿರೀಯಲ್ ನಲ್ಲಿ ನಟನೆ ಮಾಡುವುದು ಮಾತ್ರವಲ್ಲದೇ ಆಂಕರ್ ಆಗಿಯೂ ಕೆಲಸ ಮಾಡುತ್ತಿದ್ದರು.  ನಟಿ ಅತಿಯಾಗಿ ಮದ್ಯ ಸೇವನೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಪಾರ್ಟ್ ಮೆಂಟ್ ನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿದ್ದು ನಟಿ ಫ್ಲಾಟ್ ಗೆ ಯಾರು ಬಂದು ಹೋಗಿದ್ದಾರೆ ಎಂಬುದನ್ನು ತನಿಖೆ ಮಾಡಲಾಗುತ್ತಿದೆ. 

click me!