ಖ್ಯಾತ ಟಿವಿ ನಿರೂಪಕಿ ಅನುಮಾನಾಸ್ಪದ ಸಾವು: ಅಡುಗೆ ಮನೆಯಲ್ಲಿ ಶವ ಪತ್ತೆ

By Suvarna News  |  First Published Dec 24, 2019, 7:08 PM IST

ಟಿವಿ ನಿರೂಪಕಿ, ಸಿಂಗರ್​, ಒಳ್ಳೆಯ ವಾಗ್ಮಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು, ಅವರ ಮೃತದೇಹ  ಮನೆಯ ಅಡುಗೆಕೋಟಣೆಯಲ್ಲಿ ಪತ್ತೆಯಾಗಿದೆ. ಯಾರು ಆ ನಿರೂಪಕಿ? ಈ ಕೆಳಗಿನಂತಿದೆ ಡಿಟೇಲ್ಸ್.
 


ತಿರುವನಂತಪುರ, [ಡಿ.24]: ಪ್ರಖ್ಯಾತ ಟಿವಿ ನಿರೂಪಕಿ ಹಾಗೂ ಸೆಲಬ್ರಿಟಿ ಶೆಫ್ ಜಾಗೀ ಜಾನ್ ಶವ ಮನೆಯ ಅಡುಗೆಕೋಣೆಯಲ್ಲಿ ಪತ್ತೆಯಾಗಿದೆ.

ಕೊರವನಕೋಣಂನಲ್ಲಿರುವ ಮನೆಯಲ್ಲಿ ಜಾಗೀ ಜಾನ್ ತಮ್ಮ ತಾಯಿಯ ಜೊತೆ ವಾಸವಿದ್ದರು. ಇದುವರೆಗೂ ಸಾವಿಗೆ ಕಾರಣ ಏನು ಎಂಬುದು ತಿಳಿದಿಲ್ಲ, ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tap to resize

Latest Videos

ಬೆಂಗಳೂರು: ಕಂಡಕ್ಟರ್ ಮೇಲಿನ ಆ್ಯಸಿಡ್ ದಾಳಿ‌ ಹಿಂದೆ ಮೈದುನ -ಅತ್ತಿಗೆಯ ಪ್ರೇಮ್ ಕಹಾನಿ

38 ವರ್ಷದ ಜಾಗೀ ಜಾನ್, ಫ್ಯಾಷನ್, ಮ್ಯೂಸಿಕ್ ಮತ್ತು ಫಿಟ್ ನೆಸ್ ಫೀಲ್ಡ್ ನಲ್ಲಿ ಹೆಸರು ಮಾಡಿದ್ದರು, ಜೊತೆಗೆ ಅಡುಗೆ ಶೋ ನಲ್ಲೂ ಪ್ರಸಿದ್ಧಿ ಪಡೆದಿದ್ದರು. ನಿರೂಪಕಿಯ ಶವ ಅಡುಗೆ ಕೋಣೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರ ಹೇಳಿದ್ದಾರೆ. 

ಆಕೆ ಮೆಮರಿ ಲಾಸ್ ನಿಂದ ಬಳಲುತ್ತಿದ್ದಳು ಎಂದು ಜಾಗೀಯ ತಾಯಿ ಹೇಳಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ.  ಸದ್ಯಕ್ಕೆ ಜಗೀ ಅವರ ಸಾವಿನ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದಾರೆ. 

click me!