ಆನ್‌ಲೈನ್ ವಿಡಿಯೋ, ಟೀವಿ ಸೀರಿಯಲ್ ನೋಡಿ 5 ಲಕ್ಷ ರೂ ಕೊಳ್ಳೆ ಹೊಡೆದ!

By Suvarna NewsFirst Published Dec 24, 2019, 3:28 PM IST
Highlights

ಟೈಂ ಪಾಸ್‌ಗಾಗಿ ಕೆಲವರು ಟಿವಿ ಸೀರಿಯಲ್‌ಗಳನ್ನು ನೋಡುತ್ತಾರೆ. ಇನ್ನು ಕೆಲವರು ಇಷ್ಟಪಟ್ಟು ನೋಡುತ್ತಾರೆ. ಇಲ್ಲೊಬ್ಬ ಭೂಪ ಕದಿಯುವುದು ಹೇಗೆ ಎಂದು ತಿಳಿದುಕೊಳ್ಳಲು ಕ್ರೈಂ ಸೀರಿಯಲ್‌ಗಳನ್ನು ನೋಡುತ್ತಿದ್ದನಂತೆ! 

ಹಲವರು ತಮ್ಮ ಬೇಸರ ನೀಗಿಸಿಕೊಳ್ಳಲು ಆನ್‌ಲೈನ್ ವಿಡಿಯೋ ಹಾಗೂ ಟೀವಿ ಸೀರಿಯಲ್‌ಗಳನ್ನು ನೋಡು ತ್ತಾರೆ ಎಂಬ ಭಾವನೆಯಿದೆ. ಆದರೆ, ಮಹಾರಾಷ್ಟ್ರದ ನಾಗ್ಪುರದಲ್ಲಿ ಕಳವು ಮಾಡುವ ತರಬೇತಿಗಾಗಿ ಇಂಥ ವಿಡಿಯೋಗಳನ್ನು ವ್ಯಕ್ತಿಯೊಬ್ಬ ನೋಡುತ್ತಿದ್ದ ಎಂದರೆ, ನಂಬಲು ಸಾಧ್ಯವೇ?

ಉದ್ಧವ್ ಟೀಕಿಸಿದ ವ್ಯಕ್ತಿಯ ತಲೆ ಬೋಳಿಸಿದ ಶಿವಸೇನೆ ಕಾರ್ಯಕರ್ತರು!

ಹೌದು, ದರೋಡೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿ, ಆನ್‌ಲೈನ್ ಹಾಗೂ ಟೀವಿ ಸೀರಿಯಲ್‌ಗಳನ್ನು ನೋಡಿಯೇ ೨ ತಿಂಗಳಲ್ಲಿ ೭ ದರೋಡೆ ಕೃತ್ಯ ಎಸಗಿದ್ದು, ಆತನ ಬಳಿಯಿಂದ ೫ ಲಕ್ಷ ರು., ಬೈಕ್ ಹಾಗೂ ಚೂಪಾದ ಆಯುಧವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಬಂಧಿತ ಆರೋಪಿ ರಾವತ್ ಪೊಲೀಸರ ಮುಂದೆ,  ನಾನು ಹೆಚ್ಚಾಗಿ ಕ್ರೈಮ್ ಸೀರಿಯಲ್‌ಗಳನ್ನು, ವಿಡಿಯೋಗಳನ್ನು ನೋಡುತ್ತಿದ್ದೆ.  ಇಂತಹ ವಿಡಿಯೋಗಳನ್ನು ನೋಡಿ ನೋಡಿಯೇ ರಾಬರಿ ಐಡಿಯಾಗಳು ಬರುತ್ತಿದ್ದವು ಎಂದು ಅವರೇ ಒಪ್ಪಿಕೊಂಡಿದ್ದಾರೆ. 

ಕಾಶ್ಮೀರ ವಿಚಾರದಲ್ಲಿ ರಾಜಿ ಇಲ್ಲ: ಪಾಕ್ ಸೇನಾಧ್ಯಕ್ಷ!

ದರೋಡೆ ಮಾಡಲು ಹೋಗಿ ಸಿಕ್ಕಿ ಹಾಕಿಕೊಳ್ಳಬಾರದೆಂದು ಟಾರ್ಗೆಟ್ ಮಾಡಿದ ಸ್ಥಳದ ಸಿಸಿ ಕ್ಯಾಮೆರಾಗಳಿಂದ ವಿಡಿಯೋ ರೆಕಾರ್ಡರ್‌ಗಳನ್ನು ತೆಗೆಯುತ್ತಿದ್ದೆವು ಎಂದೂ ಒಪ್ಪಿಕೊಂಡಿದ್ದಾರೆ. 

 

click me!