ನರ್ಸಿಂಗ್‌ ವಿದ್ಯಾರ್ಥಿಯ ಕೊಲೆ ಮಾಡಿ ಕಣ್ಣು ಕಿತ್ತ ಸೋದರ ಮಾವ?

Published : Jun 12, 2023, 11:06 PM IST
ನರ್ಸಿಂಗ್‌ ವಿದ್ಯಾರ್ಥಿಯ ಕೊಲೆ ಮಾಡಿ ಕಣ್ಣು ಕಿತ್ತ ಸೋದರ ಮಾವ?

ಸಾರಾಂಶ

ಸಂತ್ರಸ್ತೆಯ ಮೃತ ದೇಹವು ಜೂನ್ 11 ರ ಭಾನುವಾರದಂದು ಆಕೆಯ ನಿವಾಸದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಜೌಗು ಪ್ರದೇಶದಲ್ಲಿ ಪತ್ತೆಯಾಗಿದೆ.  

ಹೈದರಾಬಾದ್‌ (ಜೂ. 12): ದೇಶದಲ್ಲಿ ವಿಕೃತ ಕೊಲೆಗಳ ಸುದ್ದಿಗೆ ಕೊನೆಯೇ ಇಲ್ಲದಂತಾಗಿದೆ. ಮುಂಬೈನಲ್ಲಿ ನಡೆದ ಕೊಲೆಯ ಬಳಿಕ ಹೈದರಾಬಾದ್‌ನಲ್ಲಿ ಪೂಜಾರಿಯೊಬ್ಬ ತನ್ನ ಭಕ್ತೆಯನ್ನು ವಿಕೃತವಾಗಿ ಕೊಲೆ ಮಾಡಿದ್ದು ಸುದ್ದಿಯಾಗಿತ್ತು. ಈಗ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಪರಿಗಿ ಮಂಡಲದ ಕಡ್ಲಾಪುರ ಗ್ರಾಮದಲ್ಲಿ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯನ್ನು ಕಾಲೇಜು ಮುಗಿಸಿ ಮನೆಗೆ ಮರಳುವ ಹಾದಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಕೆಯ ಸೋದರ ಮಾವ ಅನಿಲ್ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಂತ್ರಸ್ತೆಯ ನಿರ್ಜೀವ ದೇಹವು ಜೂನ್ 11 ರ ಭಾನುವಾರದಂದು ಆಕೆಯ ನಿವಾಸದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಜೌಗು ಪ್ರದೇಶದಲ್ಲಿ ಪತ್ತೆಯಾಗಿದೆ. ದೇಹದ ಮೇಲೆ ವಿವಿಧ ಮೂಗೇಟುಗಳು ಪತ್ತೆಯಾಗಿದ್ದು ಗಾಯಗಳೂ ಆಗಿವೆ. ಆಕೆಯ ಕಣ್ಣುಗಳನ್ನು ಕೀಳಲಾಗಿದೆ ಎಂದು ಹೇಳಲಾಗಿದೆ. ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಸಂತ್ರಸ್ತೆಯ ಕುಟುಂಬ ಸದಸ್ಯರು ಆಕೆಯ ಸೋದರ ಮಾವನ ಮೇಲೆ ಆರೋಪ ಮಾಡಿದ್ದಾರೆ. ಕೊಲೆಯಲ್ಲಿ ಅವನ ಕೈವಾಡವಿದೆ ಎಂದು ಆರೋಪಿಸಿದರು. ಸಂತ್ರಸ್ತೆಯ ಸಹೋದರಿ ಲಲಿತಾ, ಪತಿಯೇ ಹೊಣೆಗಾರ ಎಂದು ಹೇಳಿಕೆ ನೀಡಿದ್ದು, ಪೊಲೀಸರು ಪ್ರಸ್ತುತ ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ.

ಪ್ರಸ್ತುತ ತನಿಖೆಯ ಕುರಿತು ಪ್ರತಿಕ್ರಿಯಿಸಿದ ಪರಿಗಿ ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟರಾಮಯ್ಯ, ''ಪ್ರಸ್ತುತ ಸಂತ್ರಸ್ತೆಯ ಸೋದರ ಮಾವನವರನ್ನು ವಶಕ್ಕೆ ಪಡೆದು ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದಿದ್ದಾಋಏ. ಸ್ಥಳೀಯ ವರದಿಗಳ ಪ್ರಕಾರ, ಸಂತ್ರಸ್ಥ ಹುಡುಗಿ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ತನ್ನ ಮನೆಯಿಂದ ಹೊರಬಂದಾಗ ಕುಟುಂಬ ಸದಸ್ಯರಲ್ಲಿ ಕಳವಳ ಹೆಚ್ಚಾಗಿತ್ತು. ಬಳಿಕ ಆಕೆ ಹಿಂತಿರುಗಲಿಲ್ಲ ಎನ್ನಲಾಗಿದೆ. ಭಾನುವಾರ ಮಧ್ಯಾಹ್ನ ಗ್ರಾಮದ ಹೊರವಲಯದ ಕೊಳದ ಬಳಿ ಸಂತ್ರಸ್ತೆಯ ಶವ ಪತ್ತೆಯಾಗಿದೆ. ಗ್ರಾಮದ ನಿವಾಸಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಕಾರಾಬಾದ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಕರುಣಾ ಸಾಗರ್ ರೆಡ್ಡಿ ಅವರು ಅಪರಾಧ ಸ್ಥಳದ ಪರಿಶೀಲನೆ ನಡೆಸಿದರು. ಪೊಲೀಸರು ಅನಿಲ್‌ನನ್ನು ವಶಕ್ಕೆ ಪಡೆದಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಆಕೆಯ ಸಹೋದರ ಶ್ರೀಕಾಂತ್‌ಗೆ ಹಸ್ತಾಂತರಿಸಲಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಎಣ್ಣೆ ಏಟಲ್ಲಿ ದಾರಿಯಲ್ಲಿ ಹೋಗೋನಿಗೆ ಸ್ವಂತ ಕಾರು ಕೊಟ್ಟು ಮೆಟ್ರೋ ಏರಿದ, ಇದರಲ್ಲಿದೆ ಟ್ವಿಸ್ಟು!

ಈ ನಡುವೆ ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು, ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದಾರೆ. ಆದರೆ, ಕಣ್ಣುಗಳು ಇಲ್ಲದೇ ಇರೋದಕ್ಕೆ ಕಾರಣವನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ.ಆಕೆಯನ್ನು ಬೇರೆಡೆ ಕೊಲೆ ಮಾಡಿ ಪರಿಗಿ ಗ್ರಾಮದ ಹೊರವಲಯದಲ್ಲಿರುವ ಕೆರೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದ್ದು, ಆಕೆಯ ಮೇಲೂ ಲೈಂಗಿಕ ದೌರ್ಜನ್ಯ ನಡೆದಿವೆಯೇ ಎನ್ನುವ ಅನುಮಾನಗಳಿದ್ದವು. ಆದರೆ, ಪೊಲೀಸರು ಈಗ ಈ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

ಸೊಸೆ ತಂದ ಸೌಭಾಗ್ಯ, ಗಂಡನ ಇಡೀ ಕುಟುಂಬಕ್ಕೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್‌!

ಶನಿವಾರ ರಾತ್ರಿ ಕುಟುಂಬ ಸದಸ್ಯರೊಂದಿಗೆ ತೀವ್ರ ಜಗಳವಾಡಿದ ನಂತರ ಮನೆಯಿಂದ ಹೊರಬಂದಿದ್ದು, ಭಾನುವಾರ ಮಧ್ಯಾಹ್ನ ಆಕೆಯ ದೇಹವು ಪತ್ತೆಯಾಗಿದೆ. ಅವಳ ಕಾಲುಗಳು ಮತ್ತು ಕೈಗಳ ಮೇಲೆ ಅನೇಕ ಮೂಗೇಟುಗಳು ಇವೆ. “ಸಾವಿಗೆ ಕಾರಣ ತಿಳಿದುಬಂದಿಲ್ಲ. ಇತರ ಗಾಯಗಳಲ್ಲದೆ, ಮೂಗಿನ ಪಕ್ಕದಲ್ಲಿ ಮತ್ತು ತುಟಿಗಳ ಕೆಳಗೆ ಅರ್ಧ ಇಂಚು ಆಳವಾದ ಗಾಯವಿದೆ. ಮರಣೋತ್ತರ ಪರೀಕ್ಷೆಯ ವರದಿ ಲಭ್ಯವಾಗುವವರೆಗೆ ನಾವು ಲೈಂಗಿಕ ದೌರ್ಜನ್ಯವನ್ನು ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ. ಮಾದರಿಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ಪರಿಗಿಯ ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು