ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯದ ಇಬ್ಬರನ್ನು ಸೋಮವಾರ ಪೊಲೀಸರು ಬಂಧಿಸಿ, ಅವರಿಂದ ದ್ವಿಚಕ್ರ ವಾಹನ ಹಾಗೂ ಗಾಂಜಾ ಸೇರಿದಂತೆ ಒಟ್ಟು₹6ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ (ಜೂ.12) : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯದ ಇಬ್ಬರನ್ನು ಸೋಮವಾರ ಪೊಲೀಸರು ಬಂಧಿಸಿ, ಅವರಿಂದ ದ್ವಿಚಕ್ರ ವಾಹನ ಹಾಗೂ ಗಾಂಜಾ ಸೇರಿದಂತೆ ಒಟ್ಟು₹6ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪಂಢರಪುರ ನಿವಾಸಿ ಪುರುಷೋತ್ತಮ ರಾಮಚಂದ್ರ ಕೌಲಗಿ(purshottama ramachandra koulagi) (42) ಹಾಗೂ ಸಾಂಗೋಲಾ ತಾಲೂಕಿನ ಹಲದೈವಡಿ ಗ್ರಾಮದ ನಿವಾಸಿ ಸಾಹೇಬರಾವ ವಿಶ್ವನಾಥ್ ಪಾಲಿಕೆ(sahebarao vishwanath palike) (50)ಬಂಧಿತರು.
ವೈಯಕ್ತಿಕ ದ್ವೇಷ, ಗಾಂಜಾ ಘಾಟು: ಕಾಡಿನಲ್ಲಿ ಸಿಕ್ತು ಹುಡುಗನ ಶವ
ದ್ವಿಚಕ್ರ ವಾಹನ ಮೇಲೆ ಅಕ್ರಮವಾಗಿ ₹6ಲಕ್ಷ ಮೌಲ್ಯದ 4ಕೀಲೊ 180ಗ್ರಾಂ. ಗಾಂಜಾ ತೆಗೆದುಕೊಂಡು ಬಂದು ಹುಕ್ಕೇರಿ ತಾಲೂಕಿನ ಹತ್ತರಗಿ ಟೂಲ್ ನಾಕಾ ಸಮೀಪದ ಹಂಚಿನಾಳ ಗ್ರಾಮದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಮಾರಾಟ ಮಾಡುತ್ತಿದ್ದ ವೇಳೆ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಿ.ಆರ್. ಗಡ್ಡೇಕರ ನೇತೃತ್ವದ ತಂಡ ದಾಳಿ ನಡೆಸಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಿಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.