ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಕಲಿ ಕೀ ಬಳಸಿ ಆಶಾ ಕಾರ್ಯಕರ್ತೆಯರಿಗೆ ವಿತರಿಸಲು ಶೇಖ ರಿಸಿಟ್ಟಿದ್ದ ಟ್ಯಾಬ್‌ಗಳನ್ನು ಕಳವು ಮಾಡಿದ್ದ ಮಾಜಿ ಆ್ಯಂಬುಲೆನ್ಸ್ ಚಾಲಕನೊಬ್ಬ ಸಿದ್ದಾಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರು (ಜು.17): ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಕಲಿ ಕೀ ಬಳಸಿ ಆಶಾ ಕಾರ್ಯಕರ್ತೆಯರಿಗೆ ವಿತರಿಸಲು ಶೇಖ ರಿಸಿಟ್ಟಿದ್ದ ಟ್ಯಾಬ್‌ಗಳನ್ನು ಕಳವು ಮಾಡಿದ್ದ ಮಾಜಿ ಆ್ಯಂಬುಲೆನ್ಸ್ ಚಾಲಕನೊಬ್ಬ ಸಿದ್ದಾಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹೊಸಕೆರೆಹಳ್ಳಿ ಸಮೀಪದ ದತ್ತಾತ್ರೇಯನಗರದ ನಿವಾಸಿ ಶ್ರೀನಿವಾಸ್ ಬಂಧಿತ. 19 ಲಕ್ಷ ಮೌಲ್ಯದ ಲೆನೋವಾ ಕಂಪನಿಯ 62 ಟ್ಯಾಬ್‌ಗಳು ಹಾಗೂ 2 ಬ್ಯಾಟರಿಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಜಯನಗರದ 2ನೇ ಹಂತದ ಬಿಬಿಎಂಪಿ ಆಸ್ಪತ್ರೆಯ ತಾತ್ಕಾಲಿಕ ದಾಸ್ತಾನು ಮಳಿಗೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಟ್ಯಾಬ್‌ಗಳು ಕಳ್ಳತನವಾಗಿದ್ದವು. ತನಿಖೆ ಗಿಳಿದ ಮೋಹನ್ ಡಿ.ಪಟೇಲ್ ನೇತೃತ್ವದ ತಂಡವು, ತಾಂ ತ್ರಿಕ ಮಾಹಿತಿ ಆಧರಿಸಿ ಆ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲ ಕನಾಗಿದ್ದ ಶ್ರೀನಿವಾಸ್‌ನನ್ನು ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಕೊರೋನಾ ಸಮಯದಲ್ಲಿ ಜಯನಗರದ ಬಿಬಿಎಂಪಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕನಾಗಿ ಹೊರಗುತ್ತಿಗೆ ಆಧಾರದ ಮೇರೆಗೆ ಮೂರು ವರ್ಷ ಶ್ರೀನಿವಾಸ್ ಕೆಲಸ ಮಾಡಿದ್ದ.
ತುಮಕೂರಿನಲ್ಲಿ 5 ರೈಲ್ವೇ ಮೇಲ್ಸೇತುವೆಗೆ ಅನುಮೋದನೆ: ಕೇಂದ್ರ ಸಚಿವ ವಿ.ಸೋಮಣ್ಣ ಮೊದಲ ಕೊಡುಗೆ!
ಆ ವೇಳೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಜತೆ ಆತನಿಗೆ ಆತ್ಮೀಯ ಒಡನಾಟ ಬೆಳೆಯಿತು. ಅದೇ ಸಮಯದಲ್ಲಿ ಆಸ್ಪತ್ರೆಯ ದಾಸ್ತಾನು ಕೇಂದ್ರದ ಬೀಗದ ಕೀಗಳನ್ನು ಆತ ನಕಲು ಮಾಡಿಕೊಂಡಿದ್ದ. ಇನ್ನು ಗುತ್ತಿಗೆ ಅವಧಿ ಮುಗಿದು ಆಸ್ಪತ್ರೆಯಲ್ಲಿ ಕೆಲಸ ತೊರೆದ ಬಳಿಕವು ವೈದ್ಯರು ಮತ್ತು ಸಿಬ್ಬಂದಿ ಜತೆ ಆತನ ಸಂಪರ್ಕ ಮುಂದುವರೆದಿತ್ತು. ಆಗಾಗ್ಗೆ ವೈದ್ಯರ ಕಾರುಗಳಿಗೆ ಆತನೇ ಚಾಲಕನಾಗಿ ಸಹ ಕೆಲಸ ಮಾಡುತ್ತಿದ್ದ. ಹೀಗೆ ಆಸ್ಪತ್ರೆಗೆ ಬಂದಾಗ ದಾಸ್ತಾನು ಮಳಿಗೆಯಲ್ಲಿ ಸಂಗ್ರಹಿಸಿದ್ದ ದುಬಾರಿ ಮೌಲ್ಯದ ಹೊಸ ಟ್ಯಾಬ್‌ಗಳು ಆತನ ಕಣ್ಣಿಗೆ ಬಿದ್ದಿದೆ. ಹಣದಾಸೆಗೆ ಅವುಗಳನ್ನು ಕಳವು ಮಾಡಲು ಸಂಚು ರೂಪಿಸಿದ್ದ ಶ್ರೀನಿವಾಸ್, ಜು.10 ರಂದು ರಾತ್ರಿ ಆಸ್ಪತ್ರೆಗೆ ಬಂದು ನಕಲಿ ಕೀ ಬಳಸಿ ದಾಸ್ತಾನು ಕೇಂದ್ರದ ಬಾಗಿಲು ತೆರೆದು ಟ್ಯಾಬ್‌ಗಳನ್ನು ಕಳವು ಮಾಡಿದ್ದ.
ಮರು ದಿನ ಟ್ಯಾಬ್ ಕಳ್ಳತನ ಬಗ್ಗೆ ಸಿದ್ದಾಪುರ ಠಾಣೆ ಪೊಲೀಸರಿಗೆ ಆಸ್ಪತ್ರೆ ಅಧಿಕಾರಿಗಳು ದೂರು ನೀಡಿದರು. ಅಂತೆಯೇ ತನಿಖೆಗಿಳಿದ ಪೊಲೀಸರು, ಶಂಕೆ ಮೇರೆಗೆ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಕೆಲವರನ್ನು ವಿಚಾರಿಸಿದರು. ಆ ವೇಳೆ ಶ್ರೀನಿವಾಸ್ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಆತನ ಮೊಬೈಲ್ ಕರೆಗಳ ವಿವರ (ಸಿಡಿಆರ್) ಸಂಗ್ರಹಿಸಿದಾಗ ಕೃತ್ಯ ನಡೆದ ಸಂದರ್ಭದಲ್ಲಿ ಆಸ್ಪತ್ರೆ ಸುತ್ತಮುತ್ತ ಟವರ್‌ನಲ್ಲೇ ಆತನ ಮೊಬೈಲ್ ಸಂಪರ್ಕದಲ್ಲಿರುವುದು ಗೊತ್ತಾಯಿತು. ಈ ಸುಳಿವು ಆಧರಿಸಿ ಮತ್ತಷ್ಟು ಶೋಧಿಸಿದಾಗ ಕೃತ್ಯ ನಡೆದ ರಾತ್ರಿ ಆತನ ಮೊಬೈಲ್‌ನಿಂದ ನಮ್ಮ-122ಗೆ ಮಿಸ್ ಕಾಲ್ ಬಂದಿರುವ ವಿಷಯ ಗೊತ್ತಾಗಿದೆ.
₹25 ಲಕ್ಷದ ಡ್ರಗ್ಸ್ ಜಪ್ತಿ: ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಐವರನ್ನು ಸಿಸಿಬಿ ಹಾಗೂ ಶೇಷಾದ್ರಿಪುರ ಠಾಣೆ ಪೊಲೀಸರು ಪ್ರತ್ಯೇಕವಾಗಿ ಬಂಧಿಸಿದ್ದಾರೆ. ನೈಜೀರಿಯಾದ ಸಂಡೆ ಜುಕ್ವಾಡಿ, ದಕ್ಷಿಣ ಆಫ್ರಿಕಾದ ಕಿಂಗ್ಸ್ ಲೇ ನಾನಾ, ಕೇರಳದ ಅರ್ಜುನ್, ಅಂಜಿನ್, ಆಕಾಶ್, ಒಡಿಶಾದ ಹಿಮಾನ್ಷು ಮತ್ತು ಶಿವಾಜಿನಗರದ ರೌಡಿ ನಾಸಿರ್ ಬಂಧಿತರಾಗಿದ್ದು, ಆರೋಪಿಗಳಿಂದ ₹26 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಈ ಐವರು ಪ್ರತ್ಯೇಕವಾಗಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ ವ್ಯಾಪಾರ ವೀಸಾದಡಿ ಭಾರತಕ್ಕೆ ಬಂದಿದ್ದ ಸಂಡೆ ಹಾಗೂ ನಾನಾ, ನಂತರ ನಗರಕ್ಕೆ ಬಂದು ನೆಲೆಸಿದ್ದರು. ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗಿಳಿದ ಇವರು ದೆಹಲಿ, ಗೋವಾ ಹಾಗೂ ಮುಂಬೈನಲ್ಲಿರುವ ಡ್ರಗ್ಸ್ ಜಾಲದಿಂದ ಎಡಿಎಂಎ ಖರೀದಿಸಿ ನಗರಕ್ಕೆ ತರುತ್ತಿದ್ದರು. ಬಳಿಕ ನಗರದಲ್ಲಿ ತಮ್ಮ ಪರಿಚಯಸ್ಥ ಗಿರಾಕಿಗಳಿಗೆ ದುಬಾರಿ ಬೆಲೆಗೆ ಮಾರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪರಪ್ಪನ ಅಗ್ರಹಾರ ಕೇಂದ್ರ ಸಮೀಪ ಸಂಡೆ ಹಾಗೂ ನಾನಾನನ್ನು ಬಂಧಿಸಿ ₹21 ಲಕ್ಷ ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಇನ್ಸ್‌ಪೆಕ್ಟರ್ ಭರತಗೌಡ ತಂಡ ಜಪ್ತಿ ಮಾಡಿದೆ.
ಉಬರ್ ಚಾಲಕ ಡ್ರಗ್ಸ್ ಪೆಡ್ಲರ್: ಹೊರ ರಾಜ್ಯಗಳಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಉಬರ್ ಚಾಲಕ ಆಕಾಶ್ ಸೇರಿದಂತೆ ಮೂವರು ಕೇರಳ ರಾಜ್ಯದ ಪೆಡ್ಲರ್‌ಗಳನ್ನು ಸಿಸಿಬಿ ಸೆರೆ ಹಿಡಿದಿದೆ. ಕೆಂಗೇರಿ ಸಮೀಪ ಅರ್ಜುನ್ ಹಾಗೂ ಅಂಜಿನ್‌ನನ್ನು ಬಂಧಿಸಿ ಅವರಿಂದ ₹3 ಲಕ್ಷ ಮೌಲ್ಯದ 2.75 ಕೇಜಿ ಗಾಂಜಾ ಜಪ್ತಿ ಮಾಡಿದ ಸಿಸಿಬಿ ಇನ್‌ಸ್ಪೆಕ್ಟರ್ ಮೊಹಮ್ಮದ್ ಮುಕ್ರಂ ನೇತೃತ್ವದ ತಂಡವು, ವರ್ತೂರು ಸಮೀಪ ಉಬರ್ ಚಾಲಕ ಆಕಾಶ್‌ನನ್ನು ಬಂಧಿಸಿ ₹2 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದೆ.
ರೌಡಿ ಸೇರಿ ಇಬ್ಬರ ಸೆರೆ: ಇನ್ನು ಒಡಿಶಾದ ಹಿಮಾನ್ಷು ಹಾಗೂ ಶಿವಾಜಿನಗರದ ರೌಡಿ ನಾಸಿರ್‌ನನ್ನು ಸೆರೆ ಹಿಡಿದ ಶೇಷಾದ್ರಿಪುರ ಠಾಣೆ ಇನ್‌ಸ್ಪೆಕ್ಟರ್ ಹೇಮಂತ್ ಕುಮಾರ್ ನೇತೃತ್ವದ ತಂಡ, ಆರೋಪಿಗಳಿಂದ ₹1.75 ಲಕ್ಷ ಮೌಲ್ಯದ 8 ಕೇಜಿ ಗಾಂಜಾ ಜಪ್ತಿ ಮಾಡಿದೆ. ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ದುಬಾರಿ ಬೆಲೆಗೆ ಇಬ್ಬರು ಮಾರುತ್ತಿದ್ದರು.
ಒಂಟಿ ಮಹಿಳೆಯರ ಸರ ಕಳವು: ಜೊಮ್ಯಾಟೋ ಡೆಲಿವರಿ ಬಾಯ್ ಜೈಲಿಗೆ: ರಸ್ತೆಯಲ್ಲಿ ಸಂಚರಿಸುವ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಕೃತ್ಯದಲ್ಲಿ ತೊಡಗಿದ್ದ ಜೊಮ್ಯಾಟೋ ಡೆಲಿವರಿ ಬಾಯ್‌ವೊಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಂಬಳಗೋಡು ಸಮೀಪದ ಕೆ.ಗೊಲ್ಲಹಳ್ಳಿ ನಿವಾಸಿ ಸಂಜೀವ್ ಕುಮಾರ್‌ಂಧಿತನಾಗಿದ್ದು, ಆರೋಪಿಯಿಂದ ಕ7 ಲಕ್ಷ ಮೌಲ್ಯದ 104.5 ಗ್ರಾಂ ಚಿನ್ನಾಭರಣ ಹಾಗೂ 1 ಬೈಕ್ ಜಪ್ತಿ ಮಾಡ ನಿಲ್ದಾಣ ಸಮೀಪ ಆತನನ್ನು ಸೆರೆ ಹಿಡಿದು ವಿಚಾರಣೆಗೆ ಒಳಪಡಿಸಿದಾಗ ತಪ್ಪೋಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಶ್ಮೀರದಲ್ಲಿ ಅಪಘಾತ: ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಮೂವರು ಪ್ರವಾಸಿಗರು ಸಾವು
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಶಿವನಪುರದ ಸಂಜೀವ್, ನಗರದಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದ. ಹಣದಾಸೆಗೆ ರಸ್ತೆಯಲ್ಲಿ ಏಕಾಂಗಿಯಾಗಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಕೃತ್ಯ ಎಸಗುತ್ತಿದ್ದ. ಜೂನ್ 1ರಂದು ಕೋಡಿಪಾಳ್ಯ ಗ್ಲೋಬಲ್ ಬೇಕರಿ ಸಮೀಪ ತಮ್ಮ ಮಗಳನ್ನು ಶಾಲಾ ವಾಹನಕ್ಕೆ ಕಳುಹಿಸಿ ಮನೆಗೆ ಮರಳುತ್ತಿದ್ದ ಗೃಹಿಣಿಯೊಬ್ಬರಿಂದ ಸಂಜೀವ್ ಸರ ಅಪಹರಿಸಿದ್ದ. ಇದೇ ರೀತಿ ಕುಂಬಳಗೋಡು, ಕೆಂಗೇರಿ ಹಾಗೂ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ 7 ಕಡೆ ಸಂಜೀವ್ ಸರಗಳ್ಳತನ ಕೃತ್ಯ ಎಸಗಿದ್ದ. ಈ ಕೃತ್ಯದ ಬಗ್ಗೆ ತನಿಖೆಗಿಳಿದ ಕೆಂಗೇರಿ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ದೊಡ್ಡಬೆಲೆ ಮೆಟ್ರೋ ನಿಲ್ದಾಣ ಬಳಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.