ಕಾಶ್ಮೀರದಲ್ಲಿ ಅಪಘಾತ: ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಮೂವರು ಪ್ರವಾಸಿಗರು ಸಾವು

By Kannadaprabha News  |  First Published Jul 17, 2024, 11:02 AM IST

ಕಾರೊಂದು ಪ್ರಪಾತಕ್ಕೆ ಬಿದ್ದು ಬೆಂಗಳೂರು ಮೂಲದ ಮೂವರು ಸಾವನ್ನಪ್ಪಿರುವ ಘಟನೆ ಅಮರನಾಥ ಯಾತ್ರಾ ಸಮೀಪದ ಝಜಿಲ್ಲಾಪಾಸ್‌ ಬಳಿ ನಡೆದಿದೆ. ಮೃತರು ಮೂಲತಃ ಬೆಂಗಳೂರಿನ ಬೆಳ್ಳಂದೂರಿನ ನಿವಾಸಿಗಳು.


ಶ್ರೀನಗರ (ಜು.17): ಕಾರೊಂದು ಪ್ರಪಾತಕ್ಕೆ ಬಿದ್ದು ಬೆಂಗಳೂರು ಮೂಲದ ಮೂವರು ಸಾವನ್ನಪ್ಪಿರುವ ಘಟನೆ ಅಮರನಾಥ ಯಾತ್ರಾ ಸಮೀಪದ ಝಜಿಲ್ಲಾಪಾಸ್‌ ಬಳಿ ನಡೆದಿದೆ. ಮೃತರು ಮೂಲತಃ ಬೆಂಗಳೂರಿನ ಬೆಳ್ಳಂದೂರಿನ ನಿವಾಸಿಗಳು, ಬೆಂಗಳೂರಿನ ಕುಟುಂಬ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿತ್ತು. ಬಾಡಿಗೆ ಕಾರಿನಲ್ಲಿ ಕುಟುಂಬ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಎದುರಿಗೆ ಕಾರೊಂದು ಕೆಟ್ಟು ನಿಂತಿತ್ತು. 

ಈ ವೇಳೆ ಕಾರು ಚಾಲಕ ಹ್ಯಾಂಡ್ ಬ್ರೇಕ್ ಹಾಕದೇ ಕಾರಿನಿಂದ ಕೆಳಕ್ಕೆ ಇಳಿದು ಕೆಟ್ಟು ನಿಂತಿರುವ ಕಾರಿನ ಕಡೆಗೆ ಹೋಗಿದ್ದಾನೆ. ಆಗ ಕಾರು ಪ್ರಪಾತಕ್ಕೆ ಉರುಳಿ ಬಿದ್ದು, ಅನಾಹುತ ಸಂಭವಿಸಿದೆ. ದುರಂತದಲ್ಲಿ ಚಂಪಕ್ ದಾಸ್ (67), ತಂದ್ರ ದಾಸ್ (44) ಮೊನಾಲಿಸಾ (41) ಸಾವನ್ನಪ್ಪಿದ್ದು, ಕಾರಲ್ಲಿದ್ದ ಬಾಲಕಿ ಆದ್ರಿತಾ ಖಾನ್ (9) ಗಾಯ ಗೊಂಡಿದ್ದಾಳೆ. ಪೊಲೀಸರು, ಸೇನೆ, ಸಿಆರ್‌ಎಫ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸಿಬ್ಬಂದಿ ಮೃತ ದೇಹವನ್ನು ಹೊರತೆಗೆದಿದ್ದಾರೆ.

Latest Videos

undefined

ಮಂಗಳೂರು- ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಘೋರ ದುರಂತ: ನದಿಯಲ್ಲಿ ತೇಲಿ ಹೋದ ಗ್ಯಾಸ್​​ ಟ್ಯಾಂಕರ್!

ಡಿವೈಡರ್‌ಗೆ ಕಾರು ಡಿಕ್ಕಿ: ರಾಷ್ಟ್ರೀಯ ಹೆದ್ದಾರಿ ೧೫೦(ಎ) ತಳಕು ಠಾಣಾ ವ್ಯಾಪ್ತಿಯ ಹೊಸಹಳ್ಳಿ ಕ್ರಾಸ್ ಬಳಿ ಸೋಮವಾರ ಬೆಳಗಿನ ಜಾವ ಬೆಂಗಳೂರಿನಿಂದ ಬಳ್ಳಾರಿಗೆ ಚಲಿಸುತ್ತಿದ್ದ ಕಾರೊಂದು ಚಾಲಕನ ಅಜಾಗರೂಕತೆಯಿಂದ ರಸ್ತೆಯ ಎಡ ಭಾಗದ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮೂವರು ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಳ್ಳಾರಿ ನಗರದ ಸತ್ಯನಾರಾಯಣಪೇಟೆ ನಿವಾಸಿ ಬಿ.ಎನ್.ಗೋಪಿನಾಥ(೪೬), ಪತ್ನಿ ಶ್ರೀಲಲಿತ(೪೨) ಮೃತ ದುರ್ದೈವಿಗಳಾಗಿದ್ದಾರೆ. 

ಇವರ ಮಕ್ಕಳಾದ ಶ್ರೇಯಾ(೧೭), ಶ್ರೀನಿವಾಸ್(೧೨), ಚಾಲಕ ಸುರೇಶ್(೨೩) ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತಪಟ್ಟ ಬಿ.ಎನ್.ಗೋಪಿನಾಥ ಗೃಹರಕ್ಷಕ ದಳದ ಅಧಿಕಾರಿಯಾಗಿದ್ದು, ಇತ್ತೀಚೆಗಷ್ಟೆ ಬಳ್ಳಾರಿಯಿಂದ ಮಂಗಳೂರಿಗೆ ವರ್ಗಾವಣೆಯಾಗಿತ್ತು. ಪತ್ನಿ ಶ್ರೀಲಲಿತ ಶಿಕ್ಷಕಿಯಾಗಿದ್ದು, ಜುಲೈ ೧೧ರ ಗುರುವಾರ ತಮ್ಮ ಪುತ್ರ ಶ್ರೀನಿವಾಸ್‌ರವರ ಉಪನಯನ ನಿಮಿತ್ತ ಬೆಂಗಳೂರಿಗೆ ತೆರಳಿ ಅಲ್ಲಿನ ಎಲ್ಲಾ ಕಾರ್ಯಗಳನ್ನು ಮುಗಿಸಿ ಕರ್ತವ್ಯಕ್ಕೆ ಹಾಜರಾಗುವ ದೃಷ್ಠಿಯಿಂದ ಬೆಂಗಳೂರಿನಿಂದ ಬಳ್ಳಾರಿಗೆ ರೈಲಿನಲ್ಲಿ ಹೊರಟಿದ್ದರು. 

ನಕಲಿ ಎನ್‌ಒಸಿ ಸೃಷ್ಟಿಸಿ ಕದ್ದ ಕಾರು ಮಾರಾಟ: ಇಬ್ಬರ ಸೆರೆ

ಮೃತಪಟ್ಟ ಇಬ್ಬರೂ ತಮ್ಮ ಪ್ರಯಾಣವನ್ನು ರೈಲು ಮೂಲಕವೇ ಮಾಡುತ್ತಿದ್ದು, ಭಾನುವಾರ ರಾತ್ರಿ ರೈಲ್ ತಪ್ಪಿದ ಹಿನ್ನೆಲೆಯಲ್ಲಿ ಬಾಡಿಗೆ ಕಾರನ್ನು ಪಡೆದು ರಾತ್ರಿ ೧೦.೪೫ಕ್ಕೆ ಬೆಂಗಳೂರಿನಿಂದ ಬಳ್ಳಾರಿ ಕಡೆಗೆ ಹೊರಟಿದ್ದರು. ತಳಕು ಹೊಸಹಳ್ಳಿ ಡಿವೈಡರ್ ಬಳಿ ಚಾಲಕ ಸುರೇಶ್ ನಿದ್ರೆಗೆ ಜಾರಿ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

click me!