ಕೂಲ್‌ ಡ್ರಿಂಕ್ಸ್‌ ವಿಚಾರವಾಗಿ ಜಗಳ: 15 ವರ್ಷದ ಹುಡುಗಿಯನ್ನು ಶೂಟ್‌ ಮಾಡಿ ಕೊಂದ 9 ವರ್ಷದ ಬಾಲಕ..!

By BK AshwinFirst Published Aug 11, 2022, 11:52 AM IST
Highlights

ಕೂಲ್‌ ಡ್ರಿಂಕ್ಸ್‌ ವಿಚಾರವಾಗಿ ನಡೆದ ಜಗಳದಲ್ಲಿ 15 ವರ್ಷದ ಹುಡುಗಿಯನ್ನು 9 ವರ್ಷದ ಬಾಲಕ ಗುಂಡಿಕ್ಕಿ ಕೊಂದಿದ್ದಾನೆ ಎಂದು ಕುಟುಂಬ ಆರೋಪಿಸಿದೆ. ಈಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಅಮೆರಿಕದಲ್ಲಿ ಜನಸಂಖ್ಯೆಗಿಂತ ಗನ್‌ಗಳನ್ನು ಹೊಂದಿದವರ ಸಂಖ್ಯೆಯೇ ಹೆಚ್ಚಿದೆಯಂತೆ. ಅಷ್ಟು ಸುಲಭವಾಗಿ ಅಲ್ಲಿ ಶಸ್ತಾಸ್ತ್ರ ದೊರೆಯುತ್ತದೆ. ಇದರಿಂದ ನಾನಾ ಪರಿಣಾಮಗಳಾಗುತ್ತಿದ್ದರೂ ಆ ದೇಶದ ಕಾನೂನು ಮಾತ್ರ ಬಿಗಿಯಾಗುತ್ತಿಲ್ಲ. ಅದೇ ರೀತಿ, 9 ವರ್ಷದ ಬಾಲಕ ಕೂಲ್‌ ಡ್ರಿಂಕ್ಸ್‌ ವಿಚಾರಕ್ಕೆ ನಡೆದ ಜಗಳದಲ್ಲಿ 15 ವರ್ಷದ ಬಾಲಕಿಯನ್ನು ಗನ್‌ನಿಂದ ಶೂಟ್‌ ಮಾಡಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಗ್ಯಾಟೊರೇಡ್‌ (Gatorade) ಎಂಬ ಕೂಲ್‌ ಡ್ರಿಂಕ್ಸ್‌ (Cool Drinks) ಬಾಟಲ್‌ ವಿಚಾರಕ್ಕೆ ನಡಡೆದ ಜಗಳದಲ್ಲಿ ತಮ್ಮ ಹದಿಹರೆಯ ಹುಡುಗಿಯನ್ನು 9 ವರ್ಷದ ಬಾಲಕ ಕೊಲೆ ಮಾಡಿದ್ದಾನೆ ಎಂದು ಹುಡುಗಿಯ ಕುಟುಂಬ ಹೇಳಿಕೊಂಡಿದೆ. ಗುಂಡೇಟಿನಿಂದ ಗಾಯಗಳೊಳಾಗಿ 15 ವರ್ಷದ ನೈಕಾಯ್ಲಾ ಸ್ಟ್ರಾಡರ್‌ ಮನೆಯ ಮುಂಭಾಗ ಬಿದ್ದಿದ್ದಳು ಎಂದು ಕುಟುಂಬ ತಿಳಿಸಿದೆ. ಆಕೆಯನ್ನು ಆಸ್ಪತ್ರೆಗೆ (Hospital) ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಅಮೆರಿಕದ (United States) ಪಶ್ಚಿಮ ಬಾಲ್ಟಿಮೋರ್‌ನ 600 ಲಿನ್ನಾರ್ಡ್‌ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ. 

ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಗೆ ಬೆಂಕಿ ಹಚ್ಚಿದ ಪತ್ನಿ..!

ಸ್ಟ್ರಾಡರ್‌ ಹಾಗೂ 9 ವರ್ಷದ ನೆರೆಹೊರೆಯ ಬಾಲಕ ಬುಲೆಟ್‌ಗಳಿಂದ ಲೋಡ್‌ ಆಗಿದ್ದ ಗನ್‌ಗಳನ್ನಿಟ್ಟುಕೊಂಡು ಶನಿವಾರ ರಾತ್ರಿ ಅವರ ಮನೆಯ ಮುಮದೆ ಆಟವಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಬಾಲಕ ಆಕಸ್ಮಿಕವಾಗಿ ಹದಿಹರೆಯದ ಹುಡುಗಿಯನ್ನು ಶೂಟ್‌ ಮಾಡಿ, ನಂತರ ಗನ್‌ ಅನ್ನು ಬಿಟ್ಟು ಅಲ್ಲಿಂದ ಓಡಿ ಹೋದ ಎಂದೂ ಪೊಲೀಸರು ತಿಳಿಸಿದ್ದಾರೆ.

 ಇನ್ನು, ಆ ಗನ್‌ ಬಾಲಕನ ಕುಟುಂಬ ಸದಸ್ಯರ ಹೆಸರಲ್ಲಿ ನೋಂದಣಿಯಾಗಿದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದ್ದು, ಅವರು ಸೆಕ್ಯೂರಿಟಿ ಗಾರ್ಡ್‌  ಆಗಿ ಕೆಲಸ ಮಾಡುತ್ತಿದ್ದರು ಎಂದೂ ಹೇಳಲಾಗಿದೆ. ಇನ್ನು, ಅಮೆರಿಕದ ಮೇರಿಲ್ಯಾಂಡ್‌ (Maryland) ಕಾನೂನಿನ ಪ್ರಕಾರ ಬಾಲಕನ ವಯಸ್ಸಿನ ಆಧಾರದಲ್ಲಿ ಆತನಿಗೆ ಯಾವ ಶಿಕ್ಷೆಯನ್ನೂ ನೀಡುವಂತಿಲ್ಲ ಎಂದು ತಿಳಿದುಬಂದಿದೆ. ಆದರೆ, ಬಾಲಕನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವಂತೆ ನೈಕಾಯ್ಲಾ ಸಂಬಂಧಿಕರು ಅಧಿಕಾರಿಗಳಿಗೆ ಮನವಿ ಮಾಡಿದ್ದು, ತನ್ನ ಮಗಳನ್ನು ಗ್ಯಾಟೊರೇಡ್‌ (ಕೂಲ್‌ ಡ್ರಿಂಕ್ಸ್‌) ಬಾಟಲ್‌ ವಿಚಾರವಾಗಿ ಉದ್ದೇಶಪೂರ್ವಕವಾಗಿ ತನ್ನ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ನೈಕಾಯ್ಲಾಗೆ ಮಂಗಳವಾರ ಚರ್ಚ್‌ನಲ್ಲಿ ಅವರ ಕುಟುಂಬದವರು ಹಾಗೂ ಗೆಳೆಯರು ನಮನ ಸಲ್ಲಿಸಿದ್ದು, ಅವಳ ಸಾವಿನ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿದರು. ಇನ್ನು, ಘಟನೆ ಬಗ್ಗೆ ಸ್ಥಳೀಯ ಮಾಧ್ಯಮಕ್ಕೆ ಹೇಳಿಕೆ ನೀಡಿದ ಹದಿಹರೆಯ ಹುಡುಗಿಯ ತಂದೆ, ನನ್ನ ಮಗಳು ಸತ್ತು ಬಿದ್ದಿದ್ದನ್ನು ನೋಡಲು ನನಗೆ ಹೇಗೆ ಅನಿಸುತ್ತದೆ ಎಂಬುದನ್ನು ನಾನು ನಿಮಗೆ ವಿವರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಐಎಎಸ್ ಅಧಿಕಾರಿ ಟೀನಾ ದಾಬಿ ಹೆಸರಲ್ಲಿ ವಂಚಿಸಲು ಯತ್ನಿಸಿದ ವ್ಯಕ್ತಿ ಬಂಧನ

ನನ್ನ ಮಗಳ ಬಳಿ ಇದ್ದ ಕೂಲ್‌ ಡ್ರಿಂಕ್ಸ್ ಬಾಟಲ್‌ ಅನ್ನು ಬಾಲಕ ಕಸಿದುಕೊಂಡ. ನಂತರ, ಆಕೆ ಅದನ್ನು ವಾಪಸ್‌ ಕೇಳಿದ್ದಕ್ಕೆ ಪಿಸ್ತೂಲ್‌ ಹಿಡಿದು ನನ್ನ ಮಗಳ ತಲೆಗೆ ಬಂದೂಕಿನಿಂದ ಶೂಟ್‌ ಮಾಡಿದ. ಅವರು ಗನ್‌ನೊಂದಿಗೆ ಆಟವಾಡುತ್ತಿರಲಿಲ್ಲ ಎಂದು ಮೃತ ಹುಡುಗಿಯ ತಂದೆ ಆರೋಪಿಸಿದ್ದಾರೆ. ಅಲ್ಲದೆ, ಗನ್‌ ಮಿಸ್‌ ಆಗಿದ್ದನ್ನು ಅವರ ಮನೆಯವರು ಹೇಗೆ ಗುರುತಿಸಲು ಸಾಧ್ಯವಿಲ್ಲ. ಮನೆಯಲ್ಲಿ ಬಾಲಕ ಇದ್ದಾಗ ಗನ್‌ ಅನ್ನು ಬಚ್ಚಿಡದಿದ್ದರೆ ಅದಕ್ಕೆ ಯಾವುದೇ ಕ್ಷಮೆ ಇಲ್ಲ. ನಮ್ಮ ಮಗಳು ಯಾವತ್ತೂ ವಾಪಸ್‌ ಬರಲ್ಲ. ಅವಳ ನಗುವನ್ನು ನೋಡಲು ಸಹ ಸಾಧ್ಯವಿಲ್ಲ ಎಂದೂ ಹುಡುಗಿಯ ತಂದೆ ಬೇಸರದಿಂದ ಹೇಳಿಕೊಂಡಿದ್ದಾರೆ. 

ಇನ್ನು, ಅಪ್ರಾಪ್ತರಿಗೆ ಗನ್‌ ಸಿಗುವಂತೆ ಮನೆಯಲ್ಲಿ ಇಟ್ಟರೆ ಅದಕ್ಕೆ ಮೇರಿಲ್ಯಾಂಡ್‌  ಕಾನೂನಿನ ಪ್ರಕಾರ 1,000 ಡಾಲರ್‌ ದಂಡ ವಿಧಿಸಬಹುದಾಗಿದೆ. 

click me!