ಎಕ್ಸಾಂ ಬರೆಯಲು ಹೋಗಿ ಶಾಲೆಯಲ್ಲೇ ಹೃದಯ ಸ್ತಂಭನದಿಂದ ಮೃತಪಟ್ಟ 15 ವರ್ಷದ ಬಾಲಕಿ!

Published : Nov 04, 2023, 02:32 PM ISTUpdated : Nov 04, 2023, 02:53 PM IST
ಎಕ್ಸಾಂ ಬರೆಯಲು ಹೋಗಿ ಶಾಲೆಯಲ್ಲೇ ಹೃದಯ ಸ್ತಂಭನದಿಂದ ಮೃತಪಟ್ಟ 15 ವರ್ಷದ ಬಾಲಕಿ!

ಸಾರಾಂಶ

ಗುಜರಾತ್‌ನ ರಾಜ್‌ಕೋಟ್‌ನ ಜಾಸ್ಡೋನ್ ತಾಲೂಕಿನ 9ನೇ ತರಗತಿ ವಿದ್ಯಾರ್ಥಿನಿ ಸಾಕ್ಷಿ ರಾಜೋಸರ ಬೆಳಗ್ಗೆ ಶಾಂತಬಾ ಗಜೇರಾ ಶಾಲೆಯ ತರಗತಿಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಶೀಘ್ರದಲ್ಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.

ಅಹಮದಾಬಾದ್ (ನವೆಂಬರ್ 4, 2023): ಗುಜರಾತ್‌ನ ಅಮ್ರೇಲಿ ಪಟ್ಟಣದಲ್ಲಿ 15 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಹೃದಯ ಸ್ತಂಭನದಿಂದ ಆಕೆ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. ಎಕ್ಸಾಂ ಬರೆಯಲು ಪರೀಕ್ಷೆಯ ಹಾಲ್‌ಗೆ ಬರೆಯೋಕೆ ಹೋದ ಬಾಲಕಿ ಬಲಿಯಾಗಿದ್ದಾಳೆಂದು ವರದಿ ತಿಳಿಸಿದೆ. 

ಗುಜರಾತ್‌ನ ರಾಜ್‌ಕೋಟ್‌ನ ಜಾಸ್ಡೋನ್ ತಾಲೂಕಿನ 9ನೇ ತರಗತಿ ವಿದ್ಯಾರ್ಥಿನಿ ಸಾಕ್ಷಿ ರಾಜೋಸರ ಬೆಳಗ್ಗೆ ಶಾಂತಬಾ ಗಜೇರಾ ಶಾಲೆಯ ತರಗತಿಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಶೀಘ್ರದಲ್ಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಅಲ್ಲದೆ, ವಿದ್ಯಾರ್ಥಿನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದೂ ವರದಿ ತಿಳಿಸಿದೆ.

ಮತ್ತೆ ಭಯ ಬೀಳಿಸುತ್ತಿದ್ದಾನೆ ಕೊರೊನಾ ರಾಕ್ಷಸ: ಅನಿರೀಕ್ಷಿತ ಸಾವುಗಳ ಹಿಂದಿದೆ ಕೋವಿಡ್ ಕೈವಾಡ?

ಗುಜರಾತ್‌ನಲ್ಲಿ, ಅದ್ರಲ್ಲೂ ರಾಜ್‌ಕೋಟ್‌ನಲ್ಲಿ ಹೃದಯ ಸಮಸ್ಯೆಗೆ ಸಂಬಂಧಿಸಿದ ಹಲವಾರು ಸಾವುಗಳು ಕಳೆದ ಕೆಲ ತಿಂಗಳಲ್ಲಿ ದಾಖಲಾಗಿವೆ. ನವರಾತ್ರಿ ಆಚರಣೆಗಳಿಗೆ ಸಂಬಂಧಿಸಿದ 'ಗರ್ಬಾ' ಕಾರ್ಯಕ್ರಮಗಳಲ್ಲಿ ಸಹ ಹಲವರು ಬಲಿಯಾಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಗುಜರಾತ್‌ ರಾಜ್ಯ ಆರೋಗ್ಯ ಸಚಿವ ರುಶಿಕೇಶ್ ಪಟೇಲ್, ಪರಿಸ್ಥಿತಿಯನ್ನು ಪರಿಹರಿಸಲು ವೈದ್ಯಕೀಯ ತಜ್ಞರು, ನಿರ್ದಿಷ್ಟವಾಗಿ ಹೃದ್ರೋಗ ತಜ್ಞರೊಂದಿಗೆ ಸಭೆ ಕರೆದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ತಜ್ಞರು ಈ ಸಾವುಗಳ ಕಾರಣಗಳನ್ನು ಮತ್ತು ಸಂಭಾವ್ಯ ಪರಿಹಾರಗಳನ್ನು ಗುರುತಿಸಲು ಡೇಟಾವನ್ನು ಸಂಗ್ರಹಿಸಲು ಗುಜರಾತ್‌ ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ. 

ಈ ಮಧ್ಯೆ, ಭಾನುವಾರದಂದು, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿ, ಈ ಹಿಂದೆ ಕೋವಿಡ್ -19 ನ ತೀವ್ರತರವಾದ ಪ್ರಕರಣವನ್ನು ಅನುಭವಿಸಿದ ವ್ಯಕ್ತಿಗಳು ಓಟ, ಮತ್ತು ಒಂದರಿಂದ ಎರಡು ವರ್ಷಗಳ ಅವಧಿಗೆ ಶ್ರಮದಾಯಕ ವ್ಯಾಯಾಮಗಳು. ತೀವ್ರವಾದ ವ್ಯಾಯಾಮದಂತಹ ಅತಿಯಾದ ದೈಹಿಕ ಪರಿಶ್ರಮದಿಂದ ದೂರವಿರಬೇಕು ಎಂದು ಎಚ್ಚರಿಕೆ ನೀಡಿದರು. 

ಇದನ್ನು ಓದಿ: ಕೋವಿಡ್‌ಗೆ ತುತ್ತಾದವರು ಕಠಿಣ ಕೆಲಸ ಮಾಡಬೇಡಿ: ಕೇಂದ್ರ ಆರೋಗ್ಯ ಸಚಿವ

ಇತ್ತೀಚೆಗೆ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರು ಮತ್ತು ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಕೂಡ ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡ್ಬೇಕೆಂದ ನಾರಾಯಣ ಮೂರ್ತಿ: ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞರ ಟ್ವೀಟ್‌ ವೈರಲ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?