Gadag Crime: ಅತಿಥಿ ಶಿಕ್ಷಕನಿಂದ ಹಲ್ಲೆಗೊಳಗಾಗಿದ್ದ ಶಿಕ್ಷಕಿಯೂ ಚಿಕಿತ್ಸೆ ಫಲಿಸದೆ ಸಾವು

By Sathish Kumar KH  |  First Published Dec 22, 2022, 5:04 PM IST

ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕನಿಂದ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ಸಹ ಶಿಕ್ಷಕಿ ಗೀತಾ ಬಾರಕೇರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 



ಗದಗ (ಡಿ.22):  ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕನಿಂದ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ಸಹ ಶಿಕ್ಷಕಿ ಗೀತಾ ಬಾರಕೇರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಡಿಸೆಂಬರ್ 19ರಂದು ಸೋಮವಾರ, ನಾಲ್ಕನೇ ತರಗತಿ ವಿದ್ಯಾರ್ಥಿ ಭರತ್‌ನನ್ನು ಹತ್ಯೆ ಮಾಡಿ, ಅತಿಥಿ ಶಿಕ್ಷಕಿ ಗೀತಾ ಬಾರಕೇರ ಹಾಗೂ ಸಹಶಿಕ್ಷಕ ಸಂಗನಗೌಡ ಪಾಟೀಲ ಅವರ ಮೇಲೆ ಅದೇ ಶಾಲೆಯಲ್ಲಿ ಅಥಿತಿ ಶಿಕ್ಷಕನಾಗುದ್ದ ಮುತ್ತಪ್ಪ ಹಡಗಲಿ ಹಲ್ಲೆ ನಡೆಸಿದ್ದರು.

ಘಟನೆ ನಂತ್ರ ಪರಾರಿಯಾಗಿದ್ದ ಆರೋಪಿ ಮುತ್ತಪ್ಪ ನರಗುಂದ ಪಟ್ಟಣ ಸಮೀಪ ಇರುವ ರೋಣ ಕ್ರಾಸ್‌ ಬಳಿ ಮಂಗಳವಾರ ಪೊಲೀಸರ ಬಂಧಿಸಿದ್ದರು. ಗಾಯಾಳು ಗೀತಾ ಅವರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡ್ಲಾಗ್ತಿತ್ತು.. ಆದ್ರೆ ತಲೆ ಹಾಗೂ ಭುಜದ ಭಾಗಕ್ಕೆ ತೀವ್ರವಾಗಿ ಪೆಟ್ಟು ಬಿದ್ದಿದ್ರಿಂದ ಗೀತಾ ಆರೋಗ್ಯಸ್ಥಿತಿ ಚಿಂತಾಜನಕವಾಗಿತ್ತು.. ಮೂರು ದಿನ ಜೀನವ ಮರಣದ ಮಧ್ಯ‌ ಹೋರಾಡಿ ಚಿಕಿತ್ಸೆ ಫಲಿಸದೆ ಗೀತಾ ಇಂದು ಮೃತಪಟ್ಟಿದ್ದಾರೆ ಅಂತಾ ಕುಟುಂಬದ ಮೂಲಗಳು‌ ದೃಢಪಡಿಸಿವೆ.

Tap to resize

Latest Videos

Gadag Crime: ಶಿಕ್ಷಕಿಯ ಮೇಲಿನ ಮೋಹದಾಸೆಗೆ ಆಕೆಯ ಮಗನನ್ನು ಕೊಂದ ಅತಿಥಿ ಶಿಕ್ಷಕ

ಇನ್ನೊಬ್ಬರ ಸಹವಾಸವೇ ಕೊಲೆಗೆ ಕಾರಣ : ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದ ಮುತ್ತಪ್ಪ ಹಡಗಲಿ ಹಾಗೂ ಗೀತಾ ಬಾರಕೇರ ಅವರ ನಡುವೆ ಮೊದಲಿನಿಂದಲೂ ಸಲುಗೆ ಇತ್ತು. ಶಾಲೆಯಿಂದ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಗೀತಾ ಬಾರಕೇರ ಸಹ ಶಿಕ್ಷಕ ಸಂಗನಗೌಡ ಪಾಟೀಲ ಜತೆಗೆ ಆಪ್ತವಾಗಿ ನಡೆದುಕೊಂಡಿದ್ದು, ಇವರಿಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.

ಇತ್ತೀಚೆಗೆ ಶಾಲಾ ಪ್ರವಾಸಕ್ಕೆ ಅಂತಾ  ಹೋದ ಸಂದರ್ಭದಲ್ಲಿ ಗೀತಾ ಸಹ ಶಿಕ್ಷಕನೊಂದಿಗೆ ಆಪ್ತವಾಗಿ ನಡೆದುಕೊಂಡಿದ್ದು ಮುತ್ತಪ್ಪಗೆ ಸಿಟ್ಟು ತರಿಸಿತ್ತು. ಈ ಕಾರಣದಿಂದಲೇ, ಗೀತಾಗೆ ಸಂಬಂಧಪಟ್ಟವರು ಯಾರೇ ಸಿಕ್ಕರೂ ಹೊಡೆದು ಹಾಕಬೇಕು ಎಂದು ನಿರ್ಧರಿಸಿದ್ದಾಗಿ ಆರೋಪಿ ಮುತ್ತಪ್ಪ ಸೋಮವಾರ ಭರತ್ ಹಾಗೂ ಗೀತಾ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದನು. 

click me!