Gadag Crime: ತಾಯಿ ಮಾಡಿದ ತಪ್ಪಿಗೆ ಅಮಾಯಕ ಮಗನ ಬಲಿ: ವಿದ್ಯಾರ್ಥಿಯನ್ನ ಕೊಂದುಬಿಟ್ಟ ಪಾಪಿ ಶಿಕ್ಷಕ!

By Sathish Kumar KH  |  First Published Dec 22, 2022, 12:43 PM IST

ವಿದ್ಯಾರ್ಥಿಯನ್ನ ಕೊಂದುಬಿಟ್ಟ ಪಾಪಿ ಶಿಕ್ಷಕ! 
ಸ್ನೇಹಿತೆ ಬೇರೆಯವರ ಜೊತೆ ಮಾತನ್ನಾಡಿದ್ದೇ ತಪ್ಪಾಗಿಬಿಡ್ತು!
ವಿದ್ಯಾರ್ಥಿಯ ಸಾವಿಗೆ ತಾಯಿಯೇ ಕಾರಣ..!
ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದೇ ತಪ್ಪಾಗಿಹೊಯ್ತು..!
ತಾಯಿ ಮಾಡಿದ ತಪ್ಪಿಗೆ ಮಗನಿಗೆ ಶಿಕ್ಷೆ..!
10 ವರ್ಷದ ಬಾಲಕನನ್ನ ಮಹಡಿಯಿಂದ ಎಸೆದುಬಿಟ್ಟ..!
ಮಗುವನ್ನ ಕೊಂದು ಎಸ್ಕೇಪ್ ಆಗಲು ನೋಡಿದ್ದ..!


ಗದಗ (ಡಿ.22): ಶಿಕ್ಷಕ ವೃತ್ತಿಯನ್ನ ನೋಬೆಲ್ ಪ್ರೊಫೆಷನ್ ಅಂತಾರೆ. ಶಿಕ್ಷಕನಾದವನು ವಿದ್ಯಾರ್ಥಿಯ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ಹೊತ್ತಿರ್ತಾನೆ. ಆದರೆ ಇಲ್ಲಿ ಗುರು ಸ್ಥಾನದಲ್ಲಿದ್ದ ವ್ಯಕ್ತಿಯೊಬ್ಬ ವಿದ್ಯಾರ್ಥಿಯ ಪಾಲಿಗೆ ಯಮನಾಗಿದ್ದ. ಮೃಗನಂತೆ ಎರಗಿದ್ದ ಶಿಕ್ಷಕ, ವಿದ್ಯಾರ್ಥಿಯೋರ್ವನ ರಕ್ತ ಚೆಲ್ಲಿದ್ದಾನೆ.  ಅಷ್ಟೇ ಅಲ್ಲ ಅವನನ್ನ ತಡೆಯಲು ಬಂದವರನ್ನೂ ಕೊಲ್ಲೋದಕ್ಕೆ ಮುಂದಾಗಿದ್ದಾನೆ. 

ಆದರೆ, ಒಬ್ಬ ಶಿಕ್ಷಕನಾದವನು ಇಂಥಹ ಕೆಲಸ ಮಾಡೋದಕ್ಕೆ ಹೇಗೆ ಸಾಧ್ಯ? ಈ ಡೌಟ್ ಪೊಲೀಸರಿಗೂ ಬಂದಿತ್ತು. ಅವನನ್ನ ಎತ್ತಾಕೊಂಡು ಬಂದು ವರ್ಕ್ ಮಾಡಿದ ಮೇಲೆ ಅವನು ಕೊಟ್ಟ ಉತ್ತರ ಪೊಲೀಸರನ್ನೇ ದಂಗುಬಡಿಸಿತ್ತು. ಅಲ್ಲೊಂದು ಟ್ರೈಯಾಂಗುಲರ್ ಫ್ರೆಂಡ್ಶಿಪ್ ಕಹನಿ ತೆರೆದುಕೊಂಡಿತ್ತು. ಹೀಗೆ ಅತಿಥಿ ಶಿಕ್ಷಕನ ಹುಚ್ಚು ಆಭರ್ಟದ ಕಂಪ್ಲೀಟ್ ಡಿಟೈಲ್ಸ್ ಬಗ್ಗೆ ಇವತ್ತಿನ ಎಫ್.ಐ.ಆರ್ ಓದಿ..

Tap to resize

Latest Videos

undefined

ಶಾಲೆಯ ಬೀಭತ್ಸ ಕೃತ್ಯಕ್ಕೆ ರಾಜ್ಯವೇ ಬೆಚ್ಚಿಬಿದ್ದಿತ್ತು: ಅವತ್ತು ಶಾಲೆ ಆವರಣದಲ್ಲಿ ನಡೆದ ಬೀಭತ್ಸ ಕೃತ್ಯಕ್ಕೆ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಶಿಕ್ಷಕನಾದವನು ಹೀಗೆ ಮಾಡಿದ್ರೆ ಮಕ್ಕಳ ಸಂರಕ್ಷಣೆ ಹೇಗೆ ಅಂತಾ ಜನ ಮಾತನಾಡುತ್ತಿದ್ದರು.  ಅಷ್ಟಕ್ಕೂ ಆ ಮುಗ್ದ ಕಂದಮ್ಮ ಮಾಡಿರೋ ತಪ್ಪಾದ್ರೂ ಏನಿತ್ತು.? ಒಬ್ಬ ಶಿಕ್ಷಕ ರಾಕ್ಷಸನಾಗಿ ಬದಲಾಗಿದ್ದು ಯಾಕೆ? ಅನ್ನೋ ಪ್ರಶ್ನೆಗಳು ಆ ಗ್ರಾಮದ ಜನರನ್ನ ಕಾಡೋದಕ್ಕೆ ಶುರು ಮಾಡಿತ್ತು. ಆದರೆ ಇದೇ ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಎಸ್ಕೇಪ್ ಆಗಲು ಹೊಂಚು ಹಾಕಿದ್ದ ಶಿಕ್ಷಕನನ್ನ ಎತ್ತಾಕೊಂಡು ಹೋಗಿ ವರ್ಕ್ ಮಾಡಿದ ಮೇಲೆ ಗೊತ್ತಾಗಿದ್ದು ಆ ಬಾಲಕ ಯಾವುದೇ ತಪ್ಪು ಮಾಡಿರಲಿಲ್ಲ ಅಂತ.

ಇದನ್ನೂ ಓದಿ: Gadag Crime: ಶಿಕ್ಷಕಿಯ ಮೇಲಿನ ಮೋಹದಾಸೆಗೆ ಆಕೆಯ ಮಗನನ್ನು ಕೊಂದ ಅತಿಥಿ ಶಿಕ್ಷಕ

ಯಾವುದೇ ಕೀಟಲೆ ಮಾಡದ ಹುಡುಗನ ಕೊಲೆ: ಅಮಾಯಕವಾಗಿ ಬಲಿಯಾಗಿರುವ ಮಗು ಕೀಟ್ಲೆ ಮಾಡ್ತಿದ್ದಿಲ್ಲ. ತುಂಬ ಒಳ್ಳೆಯ ಹುಡುಗ. ತಮಾಷೆ ಮಾಡ್ಕೊಂಡು ಎಲ್ಲ ಹುಡುಗರ ಹಾಗೆ ಅವನೂ ಎಂಜಾಯ್ ಮಾಡ್ಕೊಂಡು ಪಾಠ ಕಲಿಯುತ್ತಿದ್ದನು, ಆದರೆ, ಮುತ್ತಪ್ಪನ ಕಣ್ಣು ಆತನ ಮೇಲೆ ಬಿದ್ದಿದ್ದಾದರೂ ಯಾಕೆ? ಪೊಲೀಸರ ಮುಂದೆ ಹಲ್ಲೆ ಹಾಗೂ ಕೊಲೆಗೆ ಕಾರಣ ಏನ್ ಅಂತ ಹೇಳಿದ್ದಾನೆ ನೀವೇ ನೋಡಿ.

ಆತನ ತಾಯಿಗಾಗಿ ಕೊಂದುಬಿಟ್ಟೆ: ಮನೆತುಂಬ ಆಡ್ತಾ ಬೆಳೆದ ಮುದ್ದು ಕಂದಮ್ಮ ಇಲ್ಲ ಅನ್ನೋದು ಭರತ್ ಕುಟುಂಬಕ್ಕೆ ಅರಗಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಇನ್ನೂ ಯಾಕಪ್ಪ ಹೀಗೆ ಮಾಡಿದೆ? ವಿದ್ಯಾರ್ಥಿಗಳು ತಪ್ಪು ಮಾಡಿದ್ರೆ ಬೈದು ಒಂದೇಟು ಹಾಕಿ ಬುದ್ಧಿ ಹೇಳಬೇಕು. ಆದರೆ ಅದನ್ನ ಬಿಟ್ಟು ಸಾಯಿಸೇ ಬಿಡೋದ ಅಂತ ಕೇಳಿದರೆ? ಶಿಕ್ಷಕ ವಿದ್ಯಾಥಿಯದ್ದು ಯಾವುದೇ ತಪ್ಪಿಲ್ಲ ಸರ್. ನಾನು ಅವನನ್ನ ಕೊಂದಿದ್ದು ಆತನ ತಾಯಿಗಾಗಿ ಅಂದುಬಿಟ್ಟ. ಆಷ್ಟೇ ಅಲ್ಲ ಒಂದು ಟ್ರಯಾಂಗುಲರ್ ಫ್ರೆಂಡ್‌ಶಿಪ್‌ ಕಹಾನಿಯೊಂದನ್ನ ಹೇಳೋದಕ್ಕೆ ಶುರು ಮಾಡಿದ್ದನು.

ಅತಿಥಿ ಶಿಕ್ಷಕನ ಅಮಾನವೀಯ ದಾಳಿ, ಕಿಮ್ಸ್‌ನಲ್ಲಿರುವ ಗಾಯಾಳು ಅತಿಥಿ ಶಿಕ್ಷಕಿಯ ಆರೋಗ್ಯ ವಿಚಾರಿಸಿದ ಶಿಕ್ಷಣ ಸಚಿವ

ನಾಲಾಯಕ್‌ ಶಿಕ್ಷಕನಿಗೆ ಉಗ್ರ ಶಿಕ್ಷೆಯಾಗಲಿ: ವಿದ್ಯಾ ದೇವಿಯ ಆರಾಧನೆಯ ಸ್ಥಳದಲ್ಲಿ ಭಯ ಹುಟ್ಟಿಸುವ ಕೆಲಸ ಮಾಡಿದ್ದ ನಾಲಾಯಕ್ ಶಿಕ್ಷಕನಿಗೆ ಉಗ್ರಾತಿ ಉಗ್ರ ಶಿಕ್ಷೆಯಾಗಬೇಕುಕು. ಶಾಲೆಯಲ್ಲಿ ಗೆಸ್ಟ್ ಟೀಚರ್ ತೆಗೆದುಕೊಳ್ಳಬೇಕಾದರೆ ಎರಡು ಸಾರಿ ಬ್ಯಾಕ್‌ಗ್ರೌಂಡ್ ವಿಚಾರಿಸೋದು ಒಳಿತು ಅಂತ ಹೇಳ್ತಾ ಇವತ್ತಿನ ಎಫ್.ಐ.ಆರ್ ಮುಗಿಸುತ್ತಿದ್ದೇನೆ.

click me!