
ಹಮಿರ್‌ಪುರ್(ಜು.02): ಅಪ್ಪನ ಪಿಸ್ತೂಲ್‌ನಲ್ಲಿ ಇಬ್ಬರು ಮಕ್ಕಳು ಆಟವಾಡಿದ್ದಾರೆ. ಆಟದ ವೇಳೆ ಪಿಸ್ತೂಲ್‌ನಿಂದ ಸಿಡಿದ ಗುಂಡು 2 ವರ್ಷದ ಪುಟ್ಟ ಕಂದನ ದೇಹ ಹೊಕ್ಕಿದೆ. ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ.
ಹಮೀರ್‌ಪುರದ ಉಮ್ರಿ ಗ್ರಾಮದಲ್ಲಿ ಗ್ರಾಮಭಿವೃದ್ಧಿ ಅಧಿಕಾರಿಯಾಗಿರುವ ಜೈರಾಮ್ ಕುಶ್ವಾ ತಮ್ಮ ಲೈಸೆನ್ಸ್ ಪಿಸ್ತೂಲ್‌ನ್ನು ಮಕ್ಕಳ ಕೈಗೆ ನೀಡಿದ್ದ ಈ ದುರ್ಘಟನೆಗೆ ಕಾರಣ. ಅಪ್ಪನ ಪಿಸ್ತೂಲ್ ಹಿಡಿದು 6 ವರ್ಷ ಹಾಗೂ 2 ವರ್ಷದ ಮಕ್ಕಳಿಬ್ಬರು ಆಟವಾಡಿದ್ದಾರೆ. 6 ವರ್ಷದ ಬಾಲಕ ಕೈಯಿಂದ ಅಚಾನಕ್ಕಾಗಿ ಗುಂಡು ಸಿಡಿದಿದೆ. ಪರಿಣಾಮ ಎದುರಿಗಿದ್ದ 2 ವರ್ಷದ ಮಗುವಿನ ದೇಹ ಹೊಕ್ಕಿದೆ.
Bengaluru Pistol Mafia: ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಪಿಸ್ತೂಲ್, 5 ಜೀವಂತ ಗುಂಡು ಜಪ್ತಿ: ಇಬ್ಬರ ಸೆರೆ!
ಗುಂಡಿನ ಶಬ್ದಕ್ಕೆ ಬಾಲಕ ಬೆಚ್ಚಿ ಬಿದ್ದಿದ್ದಾನೆ. ರಕ್ತ ಹರಿದಿದೆ. 6 ವರ್ಷದ ಬಾಲಕ ಕಿರುಚಾಡಲು ಆರಂಭಿಸಿದ್ದಾನೆ. ಕುಟಂಬಸ್ಥರು ಓಡೋಡಿ ಬಂದಿದ್ದಾರೆ. ಸ್ಥಳದಲ್ಲೆ 2 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಆದರೆ ಕುಟುಂಬಸ್ಥರು ಮೃತ ಬಾಲಕನ ಎತ್ತಿಕೊಂಡು ಜಿಲ್ಲಾಆಸ್ಪತ್ರೆಗೆ ಧಾವಿಸಿದ್ದಾರೆ. ಈ ವೇಳೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಕೇಳಿದ ಆಸ್ಪತ್ರೆ ಸಿಬ್ಬಂಧಿಗೆ ಮಗುವಿನ ತಂದೆ ಒಂದು ಹೇಳಿಕೆ ನೀಡಿದರೆ, ಕುಟುಂಬಸ್ಥರು ಮತ್ತೊಂದು ಹೇಳಿಕೆ ನೀಡಿದ್ದಾರೆ. ತಂದೆ ಜೈರಾಮ್ ಕುಶ್ವಾ ಅಧಿಕಾರ ಬಳಸಿ ಮಗುವಿನ ಸಾವನ್ನು ಮುಚ್ಚಿಡು ಪ್ರಯತ್ನ ಮಾಡಿದ್ದಾರೆ. ಇಷ್ಟೇ ಅಲ್ಲ ಮೃತದೇಹವನ್ನು ನೇರವಾಗಿ ಮಾರ್ಚರಿಗೆ ಕಳುಹಿಸಿದ್ದಾರೆ.
ಕುಟುಂಬಸ್ಥರು ಹಾಗೂ ತಂದೆಯ ಭಿನ್ನ ಹೇಳಿಕೆಯಿಂದ ಅನುಮಾನಗೊಂಡ ಆಸ್ಪತ್ರೆ ಸಿಬ್ಬಂಧಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಬಳಿಯೂ ತಂದೆ ಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದ ಪೊಲೀಸರ ಅನುಮಾನ ಬಲಗೊಂಡಿದೆ.
Michigan Shootout: ಶಾಲಾ ಬಾಲಕನಿಂದ ಫೈರಿಂಗ್, 3 ವಿದ್ಯಾರ್ಥಿಗಳು ಬಲಿ, ಶಿಕ್ಷಕ ಸೇರಿ 8 ಮಂದಿಗೆ ಗಾಯ!
ಬುಲೆಟ್ ಲೋಡ್ ಮಾಡಿರುವ ಪಿಸ್ತೂಲ್ ಮಕ್ಕಳ ಕೈಗೆ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆಗೆ ತಂದೆ ಸಮರ್ಪಕವಾಗಿ ಉತ್ತರ ನೀಡಿಲ್ಲ. ತಾವು ಮದುವೆ ಸಮಾರಂಭಕ್ಕೆ ತೆರಳುವ ಭರದಲ್ಲಿದ್ದೇವು. ಯಾವ ಕ್ಷಣದಲ್ಲಿ ಮಕ್ಕಳು ಪಿಸ್ತೂಲ್ ತೆಗೆದುಕೊಂಡಿದ್ದಾರೆ ಅನ್ನುವುದು ಗೊತ್ತಿಲ್ಲ ಎಂದು ಜೈರಾಮ್ ಕುಶ್ವಾ ಪೊಲೀಸರ ಮುಂದೆ ಹೇಳಿದ್ದಾರೆ. ಇದೇ ವೇಳೆ ಜೈರಾಮ್ ಕುಶ್ವಾ ಕುಟುಂಬದಲ್ಲಿ ನಾಲ್ಕು ಲೈಸೆನ್ಸ್ ಪಿಸ್ತೂಲ್ ಇರುವುದು ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗುವವನ್ನು ಬದುಕಿಸಿಕೊಡುವಂತೆ ತಾಯಿ ಗೋಗೆರೆಯುತ್ತಿದ್ದರೆ, ಇತ್ತ ಪತಿ ಪೊಲೀಸರ ವಶದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಆಟವಾಡಲು ತೆರಳಿದ್ದ ಬಾಲಕ ಸಾವು
ಆಟವಾಡಲು ತೆರಳಿದ್ದ ಬಾಲಕನೊಬ್ಬ ಆಟದ ಸಾಮಗ್ರಿ ಸಮೇತ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ರಾಣಿಬೆನ್ನೂರು ನಗರದ ಎಪಿಎಂಸಿ ವ್ಯಾಪ್ತಿಯ ಲಾಲ್‌ಬಹಾದ್ದೂರ ಶಾಸ್ತ್ರಿ ಉದ್ಯಾನದಲ್ಲಿ ಸಂಭವಿಸಿದೆ. ನಗರದ ಗಾಂಧಿಗಲ್ಲಿ ನಿವಾಸಿ ಶ್ರೀಕಾಂತ ಸತೀಶ ತೇಲ್ಕರ (14) ನತದೃಷ್ಟಬಾಲಕ. ಈತನು ಉದ್ಯಾನದಲ್ಲಿನ ಜಾರುಬಂಡಿಯಲ್ಲಿ ಆಟವಾಡುತ್ತಿರುವಾಗ ಏಕಾಎಕಿ ಆಟದ ಸಾಮಗ್ರಿ ಸಮೇತ ಕುಸಿದು ಬಿದ್ದಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ತಕ್ಷಣ ಗಾಯಾಳು ಬಾಲಕನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ