ಪರೀಕ್ಷಾ ಕೊಠಡಿಯಲ್ಲಿ ಟೀಚರ್‌ಗೆ ಚಾಕು ಇರಿದ ವಿದ್ಯಾರ್ಥಿ, ಶಿಕ್ಷಕ ಆಸ್ಪತ್ರೆ ದಾಖಲು!

By Suvarna NewsFirst Published Jan 19, 2023, 7:42 PM IST
Highlights

ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಪರೀಕ್ಷಾ ಕೊಠಡಿಯಲ್ಲಿದ್ದ ಟೀಚರ್ ಎಲ್ಲರ ಕಡೆ ಗಮನಕೇಂದ್ರೀಕರಿಸಿದ್ದರು. ಆದರೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಏಕಾಏಕಿ ಟೀಚರ್ ಮೇಲೆ ದಾಳಿ ನಡೆಸಿದ್ದಾನೆ. ಚಾಕು ಇರಿದು ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ.

ದೆಹಲಿ(ಜ.19): ಶಿಕ್ಷರ ಮೇಲೆ ವಿದ್ಯಾರ್ಥಿಗಳಿಂದ ನಡೆದ ದಾಳಿಗಳ ಕುರಿತು ವರದಿಯಾಗಿದೆ. ಇದೀಗ ಬೆಚ್ಚಿ ಬೀಳಿಸುವ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಪ್ರಾಕ್ಟಿಕಲ್ ಎಕ್ಸಾಮ್‌ಗೆ ಎಲ್ಲಾ ವಿದ್ಯಾರ್ಥಿಗಳು ಕೊಠಡಿಯಲ್ಲಿ ಹಾಜರಾಗಿದ್ದರು. ಪರೀಕ್ಷೆ ಕೂಡ ಆರಂಭಗೊಂಡಿತ್ತು. ಇತ್ತ ಪರೀಕ್ಷಾ ಕೊಠಡಿಯ ಶಿಕ್ಷಕ ಎಲ್ಲಾ ವಿದ್ಯಾರ್ಥಿಗಳ ಮೇಲೆ ನಿಗಾ ಇಟ್ಟಿದ್ದರು. ಕೊಠಡಿಯಲ್ಲಿ ಪರಿಶೀಲನೆ ನಡೆಸುತ್ತಾ ನಡೆದಾಡುತ್ತಿದ್ದ ಶಿಕ್ಷಕನ ಮೇಲೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಏಕಾಏಕಿ ದಾಳಿ ಮಾಡಿದ್ದಾನೆ. ತಾನು ತಂದಿದ್ದ ಚಾಕು ಹಿಡಿದು ಶಿಕ್ಷನ ಹೊಟ್ಟೆಗೆ ಇರಿದಿದ್ದಾನೆ. ವಿದ್ಯಾರ್ಥಿಯ ಇರಿತಕ್ಕೆ ಶಿಕ್ಷಕ ನೆಲಕ್ಕೆ ಉರುಳಿದ್ದಾನೆ. ಇತ್ತ ಇತರ ವಿದ್ಯಾರ್ಥಿಗಳು ಚೀರಿಕೊಂಡಿದ್ದಾರೆ. ಗಾಬರಿಗೊಂಡ ವಿದ್ಯಾರ್ಥಿ ಓಡಿಹೋಗಲು ಯತ್ನಿಸಿದ್ದಾನೆ. ಆದರೆ ಸಿಬ್ಬಂದಿಗಳು ವಿದ್ಯಾರ್ಥಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದೆಹಲಿಯ ಇಂದರ್‌ಪುರಿ ವಲಯದಲ್ಲಿ ನಡೆದಿದೆ. 

ವಿದ್ಯಾರ್ಥಿಗಳ ಪರೀಕ್ಷಾ ವಿಜಿಲೆಂಟ್ ಆಗಿ ಶಿಕ್ಷಕ ಭುದೇವ್ ಜವಾಬ್ದಾರಿ ವಹಿಸಿಕೊಂಡಿದ್ದರು. ಎಲ್ಲಾ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಹಾದರಾಗಿದ್ದಾರೆ. ಈ ವಿದ್ಯಾರ್ಥಿಗಳ ಪೈಕಿ ಚಾಕು ಇರಿದ ವಿದ್ಯಾರ್ಥಿ ಕೂಡ ಪರೀಕ್ಷೆಗೆ ಹಾಜರಾಗಿದ್ದಾರೆ. ಆದರೆ ಈತ ಕೊಠಡಿಯೊಳಕ್ಕೆ ಬರುವಾಗಲೇ ಚಾಕು ಸಮೇತ ಬಂದಿದ್ದ. ಪರೀಕ್ಷೆ ಆರಂಭಗೊಂಡ ಕೆಲ ಕ್ಷಣದಲ್ಲಿ ಈ ದಾಳಿ ನಡೆದಿದೆ. ಯಾವುದೇ ಅರಿವಿಲ್ಲದೆ ತಿರುಗಾಡುತ್ತಿದ್ದ ಶಿಕ್ಷನ ಹೊಟ್ಟೆಗೆ ಚಾಕು ಇರಿದಿದ್ದಾನೆ. ಇದರಿಂದ ಶಿಕ್ಷಕ ಭುದೇವ್ ತೀವ್ರ ಗಾಯಗೊಂಡಿದ್ದಾರೆ. ತಕ್ಷಣ ಭುದೇವ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

'ಸೂರರೈ ಪೊಟ್ರು' ನಟಿ ಅಪರ್ಣಾ ಜೊತೆ ಕಾಲೇಜು ವಿದ್ಯಾರ್ಥಿಯ ಕೆಟ್ಟ ವರ್ತನೆ; ವಿಡಿಯೋ ವೈರಲ್

ಸಿಬ್ಬಂದಿಗಳು ವಿದ್ಯಾರ್ಥಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿದ್ಯಾರ್ಥಿ ಬಳಸಿದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪ್ರಾಪ್ತ ಬಾಲಕನ ವಿರುದ್ಧ ಕೊಲೆ ಯತ್ನ ಐಪಿಸಿ ಸೆಕ್ಷನ್ 307ರಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರಿಗೆ ಮತ್ತೊಂದು ತಲೆನೋವು ಎದುರಾಗಿದೆ. ಈ ರೀತಿ ಭೀಕರ ದಾಳಿಗೆ ಯಾವ ಶಿಕ್ಷೆ ಅನ್ನೋ ಕುರಿತು ಬಾಲಾಪರಾಧಿ ಕಾಯ್ದೆಯಲ್ಲಿ ಉಲ್ಲೇಖವಿಲ್ಲ. 

ದೆಹಲಿಯಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇದೆ. ಇದೀಗ ಬಾಲಾಪರಾಧಿ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಶಿಕ್ಷನ ನಡೆ ಕುರಿತು ಸಹ ಶಿಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಮಟ್ಟಿಗೆ ವಿದ್ಯಾರ್ಥಿಗಳ ಮನಸ್ಸು ಕಲುಷಿತಗೊಳ್ಳಲು ಕಾರಣವೇನು ಅನ್ನೋದರ ಕುರಿತು ಚರ್ಚೆಗಳು ನಡೆಯುತ್ತಿದೆ. ವಿದ್ಯಾರ್ಥಿಗಳು ದಾಳಿ, ಕೊಲೆ ಯತ್ನದಂತೆ ಪ್ರಕರಣಕ್ಕೆ ಇಳಿಯಲು ಪ್ರಚೋದನೆ ಏನು ಅನ್ನೋ ಕುರಿತು ಚರ್ಚೆ ನಡೆಯುತ್ತಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಐಐಎಂ ವಿದ್ಯಾರ್ಥಿ ಶವ ಪತ್ತೆ: ಕೊಲೆ ಎಂದು ಶಂಕಿಸಿದ ಪೋಷಕರು..!

ಶಿಕ್ಷಕ ಭುದೇವ್ ಆಸ್ಪತ್ರೆಯಲ್ಲಿ ಚೇಕರಿಸಿಕೊಳ್ಳುತ್ತಿದ್ದಾರೆ. ಆದರೆ ಹೆಚ್ಚಿನ ವಿಶ್ರಾಂತಿ ಹಾಗೂ ಸಮಯದ ಅವಶ್ಯಕತೆ ಇದೆ. ಇತ್ತ ವಿದ್ಯಾರ್ಥಿಯನ್ನು ಬಾಲಾಪರಾಧಿ ಕಾಯ್ದೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇತ್ತ ಬಾಲಕನ ಪೋಷಕರು ಕಂಗಾಲಾಗಿದ್ದಾರೆ. ಈ ಕುರಿತು ಬಾಲಕನ ಪೋಷಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಮ್ಮ ಮಗ ಈ ರೀತಿ ಕೃತ್ಯಕ್ಕೆ ಇಳಿಯುತ್ತಾನೆ ಅನ್ನೋದು ಊಹಿಸಲು ಅಸಾಧ್ಯವಾಗಿದೆ ಎಂದಿದ್ದಾರೆ. 
 

click me!