ಶಾಲಾ ವಿದ್ಯಾರ್ಥಿನಿಯರಿಗೆ Porn ವಿಡಿಯೋ ತೋರಿಸಿದ ಶಿಕ್ಷಕ; ಪೋಷಕರು ಏನು ಮಾಡಿದ್ರು ಗೊತ್ತಾ

By Suvarna NewsFirst Published Sep 30, 2022, 1:02 PM IST
Highlights

Crime News today: ಶಾಲಾ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ Porn ಚಿತ್ರಗಳನ್ನು ತೋರಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದಾನೆ. ಮಕ್ಕಳಿಂದ ವಿಚಾರ ತಿಳಿದ ನಂತರ ಪೋಷಕರು ಶಿಕ್ಷಕನಿಗೆ ಕಪ್ಪು ಮಸಿ ಬಳಿದು, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಜಾರ್ಖಂಡ್‌ನ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. 

ಜಾರ್ಖಂಡ್‌: ಜಾರ್ಖಂಡ್‌ ರಾಜ್ಯದ ಚಾಯ್‌ಬಾಸಾದಲ್ಲಿ ಶಿಕ್ಷಕನೊಬ್ಬನಿಗೆ ಪೋಷಕರು, ಮಹಿಳೆಯರು ಮುಖಕ್ಕೆ ಮಸಿ ಬಳಿದು, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಶಿಕ್ಷಕನಿಗೆ ಈ ರೀತಿ ಮಾಡಲು ಕಾರಣವೇನು? ಅಂತಾದ್ದೇನು ಮಾಡಿದ್ದಾನೀತ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಪಾರ್ನ್‌ ವಿಡಿಯೋ ತೋರಿಸಿ ಖಾಸಗಿ ಭಾಗಗಳನ್ನು ಸ್ಪರ್ಷಿಸಲು ಈ ಶಿಕ್ಷಕ ಯತ್ನಿಸಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಪೋಷಕರು ಶಿಕ್ಷಕನಿಗೆ ಬುದ್ಧಿ ಕಲಿಸಿದ್ದಾರೆ. ಮೆರವಣಿಗೆ ಮಾಡುತ್ತಿರುವ ವಿಚಾರ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲದಿದ್ದರೆ ಆಕ್ರೋಶಗೊಂಡಿದ್ದ ಸ್ಥಳೀಯರು ಶಿಕ್ಷಕನಿಗೆ ಏನು ಮಾಡುತ್ತಿದ್ದರು ಎಂಬುದನ್ನು ಹೇಳಲು ಸಾಧ್ಯವಿರಲಿಲ್ಲ. 
ಕನಿಷ್ಟ ಆರು ಹೆಣ್ಣು ಮಕ್ಕಳು ಶಿಕ್ಷಕ ಪಾರ್ನ್‌ ವಿಡಿಯೋ ತೋರಿಸಿ ಅಸಭ್ಯವಾಗಿ ವರ್ತಿಸುತ್ತಾರೆ. ಖಾಸಗಿ ಭಾಗಗಳನ್ನು ಮುಟ್ಟುತ್ತಾರೆ ಎಂದು ಪೋಷಕರಿಗೆ ದೂರಿದ್ದರು ಎನ್ನಲಾಗಿದೆ. ಚಾಯ್‌ಬಾಸಾದ ನೊವಾಮುಂಡಿ ಬ್ಲಾಕ್‌ನಲ್ಲಿರುವ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಸಿ ಬಳಿಯುವುದಕ್ಕೂ ಮುನ್ನವೇ ಪೊಲೀಸರಿಗೆ ಅಧಿಕೃತವಾಗಿ ಪೋಷಕರು ದೂರು ನೀಡಿದ್ದರು. ಆದರೆ ಪೊಲೀಸರು ಯಾವುದೇ ಕ್ರಮ ಜರುಗಿಸಿರಲಿಲ್ಲ. 

ಪೊಲೀಸರು ಯಾವ ಕ್ರಮವನ್ನೂ ಜರುಗಸದೇ ಸುಮ್ಮನಿದ್ದ ಕಾರಣಕ್ಕೆ ಪೋಷಕರೆಲ್ಲಾ ಸಭೆ ಸೇರಿದ್ದಾರೆ. ತಾವೇ ಶಿಕ್ಷಕನಿಗೆ ಶಿಕ್ಷೆ ನೀಡುವ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಗಿದೆ. ಹಳ್ಳಿಗರೆಲ್ಲರೂ ಸೇರಿ ಗುರುವಾರ ಅಂದರೆ ದೂರು ನೀಡಿ ಒಂದು ದಿನವಾದ ನಂತರ ಆರೋಪಿಯನ್ನು ಹಿಡಿದು ಮಸಿ ಬಳಿದಿದ್ದಾರೆ. ನಂತರ ಚಪ್ಪಲಿ ಹಾರ ಹಾಕಿದ್ದಾರೆ. ಕೆಲವರು ಶಿಕ್ಷಕನಿಗೆ ಥಳಿಸಿದ್ದಾರೆ ಕೂಡ. ನಂತರ ರೈಲ್ವೇ ನಿಲ್ದಾಣದತ್ತ ಅವನನ್ನು ಮೆರವಣಿಗೆ ಕರೆದೊಯ್ದಿದ್ದಾರೆ. ಹಳ್ಳಿಗರು ದೂರು ನೀಡಿದಾಗ ಕ್ರಮ ಕೈಗೊಳ್ಳದ ನಿಷ್ಕ್ರಿಯ ಪೊಲೀಸರು ಆಗ ಓಡಿ ಬಂದಿದ್ದಾರೆ. ಇಲ್ಲದಿದ್ದರೆ ಹಳ್ಳಿಗರು ಆತನಿಗೆ ಏನಾದರೂ ಮಾಡಿಬಿಟ್ಟರೆ ಸಮಸ್ಯೆ ಎಂದು ಪೊಲೀಸರು ಓಡೋಡಿ ಬಂದು ಆತನನ್ನು ರಕ್ಷಿಸಿದ್ದಾರೆ. 

ಆತನನ್ನು ರಕ್ಷಿಸಿ ಪೊಲೀಸ್‌ ಚೌಕಿಗೆ ಕರೆದೊಯ್ದ ನಂತರ, ಆತನನ್ನು ತಕ್ಷಣ ಜೈಲಿಗೆ ಕಳಿಸಿ ಎಂದು ಪೋಷಕರು ಪ್ರತಿಭಟನೆ ಮಾಡಿದ್ದಾರೆ. ಕಿರಿಬುರು ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ವೀರೆಂದ್ರ ಎಕ್ಕಾ ಪ್ರತಿಭಟನಾ ನಿರತ ಮಹಿಳೆಯರನ್ನು ಸಮಾಧಾನ ಮಾಡಲು ಯತ್ನಿಸಿದ್ದಾರೆ. ಪ್ರಕರಣದ ಪ್ರಾಥಮಿಕ ವಿಚಾರಣೆ ಮಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಲಾಗಿದೆ. ಆದರೆ ಪೋಷಕರ ಆಕ್ರೋಶ ಮಾತ್ರ ಇನ್ನೂ ಕಡಿಮೆಯಾಗಿಲ್ಲ. 

ಇದನ್ನೂ ಓದಿ: ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ, ಫೋಟೊ ತೆಗೆದು ವಾಟ್ಸ್‌ಆಪ್‌ನಲ್ಲಿ ಹಂಚಿದ ಶಿಕ್ಷಕ

ವಿದ್ಯಾರ್ಥಿನಿಯ ಬಟ್ಟೆ ಬಿಚ್ಚಿಸಿದ್ದ ಶಿಕ್ಷಕ:

ಮಧ್ಯ ಪ್ರದೇಶ ರಾಜ್ಯದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದ್ದು ಐದನೇ ತರಗತಿ ವಿದ್ಯಾರ್ಥಿನಿಯ ಬಟ್ಟೆಯನ್ನು ಎಲ್ಲರೆದುರು ಬಿಚ್ಚಿಸಿದ ಶಿಕ್ಷಕ ಫೋಟೊ ತೆಗೆಯಲಾಗಿದೆ. ವಿದ್ಯಾರ್ಥಿನಿಯ ಬಟ್ಟೆ ಹಳೆಯದ್ದಾದ ಹಿನ್ನೆಲೆ ಅದು ಮಾಸಲಾಗಿತ್ತು, ಈ ಕಾರಣಕ್ಕೆ ಬಟ್ಟೆಯನ್ನು ತರಗತಿಯಲ್ಲೇ ತೆಗೆಯುವಂತೆ ಹೇಳಿ ನಂತರ ಆಕೆಯ ನಗ್ನ ಚಿತ್ರ ತೆಗೆದಿದ್ದಾನೆ. ಘಟನೆ ಬೆಳಕಿಗೆ ಬಂದ ನಂತರ ಕಾಮುಕ ಶಿಕ್ಷಕನನ್ನು ಅಮಾನತ್ತು ಮಾಡಲಾಗಿದೆ. ಭಾನುವಾರ ವಿದ್ಯಾರ್ಥಿನಿಯ ಫೋಟೊ ವಾಟ್ಸ್‌ಆಪ್‌ನಲ್ಲಿ ಹಂಚಿಕೆಯಾದ ಬೆನ್ನಲ್ಲೇ ಪೋಷಕರ ಗಮನಕ್ಕೆ ವಿಚಾರ ಬಂದಿದ್ದು, ಶಾಲಾ ಆಡಳಿತಕ್ಕೆ ದೂರು ನೀಡಲಾಗಿತ್ತು. ಶಹೊದಲ್‌ ಜಿಲ್ಲೆಯ ಬಾರಾ ಕಾಲಾ ಹಳ್ಳಿಯ ಶಾಲೆಯಲ್ಲಿ ಶುಕ್ರವಾರ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವೈರಲ್‌ ಆದ ಚಿತ್ರದಲ್ಲಿ 10 ವರ್ಷದ ಬಾಲಕಿ ಕೇವಲ ಒಳ ಉಡುಪಿನಲ್ಲಿರುವುದು ಕಾಣುತ್ತದೆ. ಶಿಕ್ಷಕ ಶ್ರವಣ್‌ ಕುಮಾರ್‌ ತ್ರಿಪಾಠಿ ಆಕೆಯ ಸಮವಸ್ತ್ರವನ್ನು ಒಗೆಯುತ್ತಿರುವುದು ಕೂಡ ಚಿತ್ರದಲ್ಲಿ ಕಾಣುತ್ತಿದೆ. ಉಳಿದ ಶಾಲಾ ವಿದ್ಯಾರ್ಥಿನಿಯರು ಅಕ್ಕಪಕ್ಕದಲ್ಲಿ ಮೂಕವಾಗಿ ನಿಂತಿದ್ದಾರೆ. 

ಹಳ್ಳಿಗರ ಪ್ರಕಾರ ವಿದ್ಯಾರ್ಥಿನಿ ಒಳ ಉಡುಪಿನಲ್ಲೇ ಸುಮಾರು ಎರಡು ಗಂಟೆಗಳ ಕಾಲ ನಿಂತುಕೊಂಡಿದ್ದಳು. ಆಕೆಯ ಬಟ್ಟೆ ಒಣಗುರವ ವರೆಗೂ ಮುಜುಗರದಿಂದ ಪಾಪದ ಮಗು ಎಲ್ಲರ ಮುಂದೆ ನಗ್ನವಾಗಿ ನಿಂತುಕೊಂಡಿತ್ತು. ಇದಾದ ನಂತರ ಫೊಟೊವನ್ನು ಬುಡಕಟ್ಟು ವ್ಯವಹಾರಗಳ ಇಲಾಖೆಯ ವಾಟ್ಸ್‌ಆಪ್‌ ಗ್ರೂಪಿನಲ್ಲಿ ಶಿಕ್ಷಕ ತ್ರಿಪಾಠಿ ಹಾಕಿದ್ದಾನೆ. ಮಾಡಿದ್ದು ದುಷ್ಟ ಕೆಲಸವಾದರೂ ಏನೋ ಸಾಧಿಸಿದ್ದೇನೆ ಎನ್ನುವತ ರೀತಿ ಸ್ವಚ್ಚತೆಯ ರಕ್ಷಕ ಎಂದು ತನ್ನನ್ನು ತಾನು ಬಣ್ಣಿಸಿಕೊಂಡಿದ್ದಾರೆ. ಆತ ಬುಡಕಟ್ಟು ಸಮುದಾಯಗಳ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಾಗಿರುವ ಶಾಲೆಯಲ್ಲಿ ಶಿಕ್ಷಕನಾಗಿದ್ದ. 

ಇದನ್ನೂ ಓದಿ: ಶಾಲೆಗೆ ಮೊಬೈಲ್‌ ತಂದ ವಿದ್ಯಾರ್ಥಿನಿ ಬಟ್ಟೆ ಬಿಚ್ಚಿಸಿದ ಶಿಕ್ಷಕಿ, ಬರೀ ಮೈಯ್ಯಲ್ಲಿ ಕೂರಿಸಿ ವಿಕೃತಿ!

ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ಫೋಟೊಗಳು ಹರಿದಾಡಲು ಆರಂಭವಾದ ನಂತರ ಹಳ್ಳಿಗರು ಶಿಕ್ಷಕನ ಕೆಲಸವನ್ನು ಖಂಡಿಸಿದ್ದಾರೆ. ಆತನನ್ನು ಅಮಾನತ್ತು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬುಡಕಟ್ಟು ಜನಾಂಗ ಕಲ್ಯಾಣ ಇಲಾಖೆ ಸಹಾಯಕ ಆಯುಕ್ತ ಆನಂದ್‌ ರೈ ಸಿನ್ಹಾ ವಜಾಗೊಳಿಸಿ ಆದೇಶಿಸಿದ್ದಾರೆ. ಅವರ ಪ್ರಕಾರ ಘಟನೆ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಕಳೆದ ಶನಿವಾರವೇ ಶಿಕ್ಷಕನನ್ನು ವಜಾಗೊಳಿಸಲಾಗಿದೆ. ವಿದ್ಯಾರ್ಥಿನಿಯ ಬಟ್ಟೆ ಕೊಳೆಯಾಗಿದೆ ಎಂಬುದನ್ನು ಗಮನಿಸಿದ ನಂತರ ಬಟ್ಟೆ ಬಿಚ್ಚಿಸಿ ಸಮವಸ್ತ್ರ ತೊಳೆದಿದ್ದಾನೆ. ಪ್ರಕರಣದ ಕುರಿತು ತನಿಖೆಗೆ ಆದೇಶಿಲಾಗಿದೆ ಎಂದು ಸಿನ್ಹಾ ತಿಳಿಸಿದ್ದಾರೆ.

click me!