ಮೈಸೂರು: ಶಿಕ್ಷಕನ ಮನೆಯಲ್ಲಿ ನೋವಿನ ಮೇಲೆ ನೋವು, ಈಗ ಮತ್ತೊಂದು ಆತ್ಮಹತ್ಯೆ..!

By Girish GoudarFirst Published Nov 4, 2022, 2:23 PM IST
Highlights

ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ನಡೆದ ಘಟನೆ 

ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು

ಮೈಸೂರು(ನ.04):  ಕೆಲ ದಿನಗಳ ಹಿಂದೆ ದರೋಡೆ, ಈಗ ಆತ್ಮಹತ್ಯೆ. ಶಿಕ್ಷಕನ ಮನೆಯಲ್ಲಿ ನೋವಿನ ಮೇಲೆ ನೋವು ಆಗುತ್ತಲೇ ಇದೆ. ಸಾಲದ ಸುಳಿಯಲ್ಲಿ ಬಿದ್ದ ಶಿಕ್ಷಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದೇ ಮನೆಯಲ್ಲಿ ಕೆಲ ದಿನಗಳ ಹಿಂದೆ ಹೆಂಡತಿಯ ಕೈ ಕಾಲು ಕಟ್ಟಿ ಕಳ್ಳತನ ಮಾಡಲಾಗಿತ್ತು. ಸಾಲದ ಉರುಳಿಗೆ ಶಿಕ್ಷಕರೊಬ್ಬರು ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಇಂದು(ಶುಕ್ರವಾರ) ನಡೆದಿದೆ. ಪಟ್ಟಣದ ದೇವಿರಮ್ಮನಹಳ್ಳಿ ಬಳಿ ಇರುವ ರಾಮಸ್ವಾಮಿ ಲೇಔಟ್ ನಿವಾಸಿ ಹಾಗೂ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ 47 ವರ್ಷದ ಶಂಭುಲಿಂಗ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.

ಪ್ರತಿ ದಿನದಂತೆ ಕೆಲಸ ಮುಗಿಸಿಕೊಂಡು ಗುರುವಾರ ಸಂಜೆ ಮನೆಗೆ ಬಂದಿದ್ದ ಶಿಕ್ಷಕ ಶಂಭುಲಿಂಗ ಸ್ವಾಮಿ ಸಂಜೆ ಮನೆಯಿಂದ ಹೊರ ಹೋದವರು ರಾತ್ರಿ ಮನೆ ಸಮೀಪದ ಕಾರ್ ಶೆಡ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾತ್ರಿಯಾದರೂ ಮನೆಗೆ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ತಕ್ಷಣ ಆಸಾಮಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಲಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು.

ಪತ್ನಿ ಸಾವು... ಐದು ವರ್ಷದ ಕಂದನನ್ನು ಕೊಂದು ನೇಣಿಗೆ ಶರಣಾದ ತಂದೆ

ಒಂದು ತಿಂಗಳ ಹಿಂದೆ ಶಿಕ್ಷಕನ ಮನೆಯಲ್ಲಿ ನಡೆದಿತ್ತು ರಾಬರಿ 

ಕಳೆದ ಒಂದು ತಿಂಗಳ ಹಿಂದೆ ಬೆಳ್ಳಂಬೆಳಗ್ಗೆ ಕೊರಿಯರ್ ಪಾರ್ಸೆಲ್ ಕೊಡುವ ನೆಪದಲ್ಲಿ ದುಷ್ಕರ್ಮಿಗಳು ಈತನ ಮನೆಗೆ ನುಗ್ಗಿ ಶಂಭುಲಿಂಗ ಅವರ ಪತ್ನಿ ದಾಕ್ಷಾಯಿಣಿ ಅವರ ಕೈ ಕಾಲು ಕಟ್ಟಿ ನಗನಾಣ್ಯ ದೋಚಿ ಪರಾರಿಯಾಗಿದ್ದರು. ಅಂದೂ ಕೂಡ ಪೊಲೀಸರು ಮನೆಗೆ ಬಂದಿ ಪರಿಶೀಲನೆ ಮಾಡಿ ಖದೀಮರಿಗೆ ಬಲೆ ಬೀಸಿದ್ದರು. ಇನ್ನಾದರೂ ಆರೋಪಿಗಳು ಸಿಕ್ಕಿರಲಿಲ್ಲ.

ಕೋಟಿ ಕೋಟಿ ಚೀಟಿ ವ್ಯವಹಾರ

ಮೃತ ಶಿಕ್ಷಕ ಶಂಭುಲಿಂಗಸ್ವಾಮಿ ಕೋಟ್ಯಂತರ ರೂಪಾಯಿ ಚೀಟಿ ಹಾಗೂ ಹಣಕಾಸು ವ್ಯವಹಾರ ನಡೆಸುತ್ತಿದ್ದ ಕಾರಣ ಈ ದರೋಡೆ ಪ್ರಕರಣವೂ ಕೂಡ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಶಿಕ್ಷಕ ಶಂಭುಲಿಂಗು ಸ್ಥಿತಿವಂತರಾಗಿದ್ದರೂ ಆತ್ಮಹತ್ಯೆಗೆ ಶರಣಾಗಿರುವುದು ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ನಂಜನಗೂಡು ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
 

click me!