ವಿಮೆ ಹಣಕ್ಕಾಗಿ ಗರ್ಭಿಣಿ ಪತ್ನಿಯನ್ನು ಪ್ರಪಾತಕ್ಕೆ ತಳ್ಳಿ ಕೊಂದಿದ್ದ ವ್ಯಕ್ತಿಗೆ 30 ವರ್ಷ ಜೈಲು!

Published : Nov 04, 2022, 01:44 PM IST
ವಿಮೆ ಹಣಕ್ಕಾಗಿ ಗರ್ಭಿಣಿ ಪತ್ನಿಯನ್ನು ಪ್ರಪಾತಕ್ಕೆ ತಳ್ಳಿ ಕೊಂದಿದ್ದ ವ್ಯಕ್ತಿಗೆ 30 ವರ್ಷ ಜೈಲು!

ಸಾರಾಂಶ

ವಿಮೆಯ ಹಣಕ್ಕಾಗಿ ಏಳು ತಿಂಗಳ ಗರ್ಭಿಣಿ ಪತ್ನಿಯನ್ನು ಪ್ರಪಾತಕ್ಕೆ ತಳ್ಳಿ ಸಾಯಿಸಿದ್ದ ಟರ್ಕಿಯ ವ್ಯಕ್ತಿಗೆ ಅಲ್ಲಿನ ಸ್ಥಳೀಯ ನ್ಯಾಯಾಲಯ, 30 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.  

ನವದೆಹಲಿ (ನ. 4): ಸಾಮಾನ್ಯವಾಗಿ ಹೆಚ್ಚಿನ ಕೊಲೆಗಳ ಹಿಂದೆ ಒಂದು ಉದ್ದೇಶ ಖಂಡಿತಾ ಇರುತ್ತದೆ. ಒಮ್ಮೊಮ್ಮೆ ಸೇಡಿಗಾಗಿ ಕೊಲೆ ನಡೆದರೆ, ಇನ್ನೊಮ್ಮೆ ದುರಾಸೆಗಾಗಿ ಕೊಲೆ ನಡೆಯುತ್ತದೆ. ಒಮ್ಮೊಮ್ಮೆ ತಾವು ಮಾಡಿದ ಕೃತ್ಯವನ್ನು ಬಹಿರಂಗಪಡಿಸಬಹುದು ಎನ್ನುವ ಆತಂಕದಲ್ಲಿ ಕೊಲೆಗಳಾಗುತ್ತದೆ. ಆದರೆ, ತಮ್ಮ ಸ್ವಾರ್ಥಕ್ಕಾಗಿ ಒಬ್ಬ ವ್ಯಕ್ತಿ ಎಷ್ಟರ ಮಟ್ಟಿಗೆ ಇಳಿಯಬಹುದು? ಟರ್ಕಿಯಲ್ಲಿ ನಡೆದ ಈ ಘಟನೆಯನ್ನು ಓದಿದರೆ, ಮನುಷ್ಯ ತನ್ನ ಆಸೆಗಾಗಿ, ಹಣಕ್ಕಾಗಿ ಏನು ಬೇಕಾದರೂ ಮಾಡಬಲ್ಲ ಎನ್ನುವುದಂತೂ ಖಚಿತ. ಕೇವಲ ವಿಮೆ ಪಾಲಿಸಿಯ ಹಣಕ್ಕಾಗಿ ತನ್ನ 7 ತಿಂಗಳ ಗರ್ಭಿಣಿ ಪತ್ನಿಯನ್ನು 304 ಮೀಟರ್‌ ಅಡಿ ಕಲ್ಲಿನ ಪ್ರಪಾತಕ್ಕೆ ನೂಕಿ ವ್ಯಕ್ತಿಯೊಬ್ಬ ಸಾಯಿಸಿದ್ದಾನೆ. ಜೂನ್ 2018 ರಲ್ಲಿ ದಕ್ಷಿಣ ಟರ್ಕಿಯ ಮುಗ್ಲಾದ ಜನಪ್ರಿಯ ಪ್ರವಾಸಿ ತಾಣ ಬಟರ್‌ಫ್ಲೈ ವ್ಯಾಲಿಯಲ್ಲಿನ ಬಂಡೆಯೊಂದರಿಂದ ಏಳು ತಿಂಗಳ ಗರ್ಭಿಣಿ ಪತ್ನಿ 32 ವರ್ಷದ ಸೆಮ್ರಾ ಐಸಲ್ ಅವರನ್ನು 41 ವರ್ಷದ ಹಕನ್ ಐಸಲ್ ನೂಕಿ ಕೊಂದಿದ್ದ. ಈ ಪ್ರಕರಣದಲ್ಲಿ ಹಕನ್‌ ಐಸಲ್‌ ತಪ್ಪಿತಸ್ಥ ಎಂದು ಕೋರ್ಟ್‌ ತೀರ್ಪು ನೀಡಿದ್ದಾಗಿ ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ.

ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಪತ್ನಿಯನ್ನು 304 ಮೀಟರ್ ಬಂಡೆಯ ಅಂಚಿಗೆ ಕರೆದೊಯ್ದಿದ್ದಾನೆ. ಎತ್ತರದ ಪ್ರದೇಶ ಕುರಿತಾಗಿ ಸೆಮ್ರಾ ಹೆದರಿಕೆ ಹೊಂದಿದ್ದರು. ಆದರೆ, ಗಂಡನಿದ್ದಾನೆ ಎನ್ನುವ ಕಾರಣಕ್ಕೆ ಬಂಡೆಯ ಅಂಚಿಗೆ ಬಂದಿದ್ದಳು. ಆದರೆ, ಆಕೆ ನಂಬಿದ್ದ ವ್ಯಕ್ತಿಯೇ, ಆಕೆಯನ್ನು ಪ್ರಪಾತಕ್ಕೆ ನೂಕಿ ಸಾಯಿಸಿದ್ದ. ಆಕೆಯನ್ನು ಸಾಯಿಸಿದ ಬಳಿಕ, 25 ಸಾವಿರ ಅಮೆರಿಕನ್‌ ಡಾಲರ್‌ ಮೊತ್ತದ ವಿಮೆ ಹಣಕ್ಕಾಗಿ ಹಕನ್‌ ಐಸಲ್‌ ಕ್ಲೇಮ್‌ ಮಾಡಿದ್ದು, ಅನುಮಾನ ಬರಲು ಕಾರಣವಾಗಿದೆ. ಜೂನ್‌ 2018ರಂದು ನಡೆದ ಘಟನೆಯ ಸಂಪೂರ್ಣ ವಿಚಾರಣೆ ನಡೆಸಿದ ಕೋರ್ಟ್‌ ಇದರಲ್ಲಿ ಹಕನ್‌ ಐಸಲ್‌ ತಪ್ಪಿತಸ್ಥ ಎಂದು ಹೇಳಿದೆ.  ಇದಕ್ಕೂ ಹಿಂದಿನ ವಿಚಾರಣೆಯಲ್ಲಿ, ಐಸಲ್ ಆರಂಭದಲ್ಲಿ ಈ ಕೃತ್ಯವನ್ನು ನಿರಾಕರಿಸಿದ್ದ ಮತ್ತು ಕೊನೆಯ ಕ್ಷಣದಲ್ಲಿ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ 41 ವರ್ಷ ವಯಸ್ಸಿನ ವ್ಯಕ್ತಿಯ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿತು.

ನಾನು ಮಾನಸಿಕವಾಗಿ ಸರಿಯಿಲ್ಲ ಆ ಕಾರಣಕ್ಕಾಗಿ ನಾನು ಅಪರಾಧಿಯಲ್ಲ ಎಂದು ತೀರ್ಪನ್ನು ಹಕನ್‌ ಐಸಲ್‌ ಪ್ರಶ್ನೆ ಮಾಡಿದ್ದರು. ಆದರೆ, ಫೋರೆನ್ಸಿಕ್ ಮೆಡಿಸಿನ್‌ನ 4 ನೇ ವಿಶೇಷ ವಿಭಾಗದ ವೈದ್ಯರು ಆತನ ಈ ವಾದವನ್ನು ತಿರಸ್ಕರಿಸಿದ್ದರು. ಕಳೆದ ಮಂಗಳವಾರ, ಅಕ್ಟೋಬರ್ 25 ರಂದು ಪ್ರಕರಣದ ಅಂತಿಮ ತೀರ್ಪು ಬಂದಿದ್ದಯ, ನ್ಯಾಯಾಲಯವು ಐಸಲ್ ಅವರನ್ನು ಬಿಡುಗಡೆಗೆ ಪರಿಗಣಿಸುವ ಮೊದಲು ಕನಿಷ್ಠ 30 ವರ್ಷಗಳ ಶಿಕ್ಷೆಯನ್ನು ಅನುಭವಿಸಲು ಆದೇಶ ನೀಡಿದೆ.

ಕಾರ್ಮಿಕಳಾಗಿ ಬಂದು ಹುಣಸೆ ಹಣ್ಣಿನ ಆಸೆಗೆ ವಿವಾಹಿತೆ ಬಲಿ!

ಈ ಪ್ರಕರಣದ ಬಗ್ಗೆ ವರದಿಗಳು ಪ್ರಕಟವಾದಾಗ ಪೊಲೀಸರು ಹಕನ್‌ ಬಗ್ಗೆ ಮೊದಲ ಬಾರಿಗೆ ಅನುಮಾನ ವ್ಯಕ್ತಪಡಿಸಿದ್ದರು. ಇದರಲ್ಲಿ ಹಕನ್‌, ಬಂಡೆಯ ತುದಿಯ ಮೇಲೆ ಪತ್ನಿಯೊಂದಿಗೆ ನಿಂತ ಚಿತ್ರವನ್ನು ಪ್ರಕಟಿಸಲಾಗಿತ್ತು. ಈ ಸುದ್ದಿ ಪ್ರಕಟವಾದ ಬೆನ್ನಲ್ಲಿಯೇ ಪ್ರತ್ಯಕ್ಷದರ್ಶಿಯೊಬ್ಬ ಪ್ರಕರಣದದ ವಿಡಿಯೋ ದೃಶ್ಯಾವಳಿಯನ್ನು ಪೊಲೀಸರಿಗೆ ನೀಡಿದ್ದ. ಇದರಲ್ಲಿ 41 ವರ್ಷದ ಹಕನ್‌ ಐಸಲ್‌, ಬಂಡೆಯ ಮೇಲೆ ವಿಚಿತ್ರವಾಗಿ ವರ್ತಿಸುತ್ತಿದ್ದದ್ದು ಕಾಣಿಸಿತ್ತು.

9 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ 92ರ ಮುದುಕನಿಗೆ 3 ವರ್ಷ ಜೈಲು!

ಸಾಕ್ಷಿಯನ್ನು ರೆಸೆಪ್ ಸಾಹಿನ್ ಎಂದು ಗುರುತಿಸಲಾಗಿದೆ. ಸೆಮ್ರಾ ಅವರ ಕೊನೆಯ ಕ್ಷಣಗಳನ್ನು ಜೀವಂತವಾಗಿ ಚಿತ್ರೀಕರಿಸಿದ ಸಾಹಿನ್, ಕಳೆದ ವಿಚಾರಣೆಯಲ್ಲಿ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡಿದ್ದರು. ನನ್ನ ಕುಟುಂಬದೊಂದಿಗೆ ಕಬಕ್‌ ಕೊಲ್ಲಿಯ ನೋಟವನ್ನು ನೋಡಲು ನಾನು ಅಲ್ಲಿಗೆ ಹೋಗಿದ್ದೆ. ಈ ವೇಳೆ ಅಲ್ಲಿಗೆ ಬಂದಿದ್ದ ಐಸಲ್‌ ದಂಪತಿಗಳನ್ನು ನನ್ನ ಮಗಳು ಫೋನ್‌ನಲ್ಲಿ ಚಿತ್ರೀಕರಣ ಮಾಡಿದ್ದಳು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆಗ ನಮ್ಮಲ್ಲೇ ನಾವು ತಮಾಷೆ ಮಾಡಿಕೊಂಡಿದ್ದೆವು. ಒಂದೋ ಆತ ಮಹಿಳೆಯನ್ನು ಪ್ರಪಾತಕ್ಕೆ ದೂಡುತ್ತಾನೆ. ಇಲ್ಲವೇ ಮಹಿಳೆಯೇ ಆತನನ್ನು ಕೆಳಕ್ಕೆ ನೂಕುತ್ತಾಳೆ ಎಂದು ಮಾತನಾಡಿಕೊಂಡಿದ್ದೆವು. ಅದಲ್ಲದೆ, ಬೆಟ್ಟದ ತುದಿಯಲ್ಲಿದ್ದ ಅವರ ನಡುವೆ ಯಾವುದೇ ಸಂವಹನ ನಡೆದಿರಲಿಲ್ಲ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು