ಕೊಳೆತ ಮಹಿಳೆ ಶವದ ಸುಳಿವು ನೀಡಿದ ಟ್ಯಾಟೂ... ಕೈ ಮೇಲಿದ್ದ ಹಚ್ಚೆ ನೀಡಿತ್ತು ಮಾಲೀಕನ ಗುರುತು!

By Mahmad Rafik  |  First Published Aug 3, 2024, 12:38 PM IST

ಶವ ಕೊಳೆತಿದ್ದರಿಂದ ಗುರುತು ಪತ್ತೆ ಮಾಡೋದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಪ್ರಾಥಮಿಕ ಹಂತದಲ್ಲಿ ಪೊಲೀಸರು ಸಹ ಇದೊಂದು ಅಪರಿಚಿತ ಶವ ಎಂದು  ಪ್ರಕರಣ ದಾಖಲಿಸಿಕೊಂಡಿದ್ದರು.


ಮುಂಬೈ: ಕೊಳೆತ ಶವದ ಗುರುತು ಪತ್ತೆ ಹಚ್ಚಲು ಮೃತ ಮಹಿಳೆ ಹಾಕಿಕೊಂಡಿದ್ದ ಟ್ಯಾಟೂ ಪೊಲೀಸರಿಗೆ ಸಹಾಯ ಮಾಡಿದೆ. ಲಕ್ಷ್ಮೀಬಾಯಿ ಗಾಡಿವಾಡರ್ ಮುಂಬೈನಲ್ಲಿ ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಲಕ್ಷ್ಮಿಬಾಯಿ ಅನಕ್ಷರಸ್ಥೆಯಾಗಿದ್ದ ಕಾರಣ, ಆಕೆಗೆ ತನ್ನ ಮಾಲೀಕನ ಮೊಬೈಲ್ ನಂಬರ್ ನೆನಪಿನಲ್ಲಿರುತ್ತಿರಲಿಲ್ಲ. ಮಾಲೀಕನಿಗೆ ಫೋನ್ ಮಾಡಬೇಕಾದ್ರೆ ಸಂಖ್ಯೆ ನೆನಪಿನಲ್ಲಿ ಉಳಿಯುತ್ತಿರಲಿಲ್ಲ. ಹಾಗಾಗಿ ತನಗೆ ಕೆಲಸ ನೀಡಿದ್ದ ಮಾಲೀಕನ ಮೊಬೈಲ್ ನಂಬರ್ ಹಚ್ಚೆ ಹಾಕಿಸಿಕೊಂಡಿದ್ದರು. ಇದೀಗ ಇದೇ ಟ್ಯಾಟೂ ಆಕೆಯ ಶವದ ಗುರುತಿನ ಪತ್ತೆಗೆ ಸಹಕಾರಿಯಾಗಿದೆ. 

13ನೇ ಡಿಸೆಂಬರ್ 2018ರಂದು ಕುರ್ಲಾ ರೈಲ್ವೆ ನಿಲ್ದಾಣದ ಟ್ರ್ಯಾಕ್ ಬಳಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದೆ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು. ಶವ ಕೊಳೆತಿದ್ದರಿಂದ ಗುರುತು ಪತ್ತೆ ಮಾಡೋದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಪ್ರಾಥಮಿಕ ಹಂತದಲ್ಲಿ ಪೊಲೀಸರು ಸಹ ಇದೊಂದು ಅಪರಿಚಿತ ಶವ ಎಂದು  ಪ್ರಕರಣ ದಾಖಲಿಸಿಕೊಂಡಿದ್ದರು. ಆನಂತರ ಶವವನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ, ಮಹಿಳೆಯ  ಬಲಗೈ ಮೇಲೆ ಕೆಲವು ಸಂಖ್ಯೆಗಳು ಕಾಣಿಸಿಕೊಂಡಿವೆ. ಸಂಖ್ಯೆಗಳನ್ನು ಜೋಡಿಸಿದಾಗ, ಇದೊಂದು ಮೊಬೈಲ್ ನಂಬರ್ ಇರಬಹುದು ಎಂಬ ಅನುಮಾನ ಮೂಡಿತ್ತು. 

Tap to resize

Latest Videos

ಪೊಲೀಸರು ಆ ಸಂಖ್ಯೆಗೆ ಕರೆ ಮಾಡಿದಾಗ  ಮೃತ ಮಹಿಳೆ ಲಕ್ಷ್ಮೀಬಾಯಿ ಗಾಡಿವಾಡರ್ ಎಂದು ಗೊತ್ತಾಗಿತ್ತು. ಕರೆ ಸ್ವೀಕರಿಸಿದ ವ್ಯಕ್ತಿ ಸಹ ಲಕ್ಷ್ಮೀಬಾಯಿ ಅನಕ್ಷರಸ್ಥೆಯಾಗಿದ್ದ ಕಾರಣ ತನ್ನ ಮೊಬೈಲ್ ನಂಬರ್ ಹಚ್ಚೆ ಹಾಕಿಸಿಕೊಂಡಿದ್ದಳು ಎಂಬ ವಿಷಯವನ್ನು ತಿಳಿಸಿದ್ರು. ಆದ್ರೆ ಲಕ್ಷ್ಮೀಬಾಯಿ ಕುರ್ಲಾ ರೈಲ್ವೆ ನಿಲ್ದಾಣದ ಬಳಿ ಆಕೆ ಹೋದಳು ಎಂಬುದರ ಬಗ್ಗೆ ಗೊತ್ತಿಲ್ಲ ಎಂದು ಹೇಳಿಕೆಯನ್ನು ದಾಖಲಿಸಿದ್ದರು. 

ಪ್ರಿಯಕರನಿಗೆ ಮೂತ್ರ ಕುಡಿಸಿ ಕೊಂದ್ಳು... ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಗೆಳತಿ ಇಷ್ಟು ಕ್ರೂರಿ ಆಗಿದ್ದೇಕೆ? 

13ನೇ ಡಿಸೆಂಬರ್ 2015ರಂದು ಮಹಿಳೆ ಕಾಣೆಯಾಗಿರುವ ಬಗ್ಗೆ ವಿನೋವಾ ಭಾವೆ ನಗರ, ಕುರ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಿಳೆ ಸೆಂಟ್ರಲ್ ಮುಂಬೈ ಮತ್ತು ಪೂರ್ವ ಪ್ರದೇಶದಲ್ಲಿ ಕೆಲಸ ಮಾಡಿಕೊಂಡಿದ್ದರು. ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ಮಹಿಳೆ ಕಾಯಿನ್ ಬಾಕ್ಸ್‌ ಬೂತ್‌ನಿಂದ  ಕರೆ ಮಾಡುತ್ತಿದ್ದರು. ಮೊಬೈಲ್ ಬೂತ್‌ಗೆ ಹೋದಾಗ ಹಚ್ಚೆ ತೋರಿಸಿ ಆ ಸಂಖ್ಯೆಗೆ ಕರೆ ಮಾಡುವಂತೆ ಮಹಿಳೆ ಹೇಳುತ್ತಿದ್ದರು.  

ಡಿಸೆಂಬರ್ 12ರಂದು 300 ರೂಪಾಯಿ ತೆಗೆದುಕೊಂಡು ಲಕ್ಷ್ಮೀಬಾಯಿ ಮನೆಗೆ ಬಂದಿದ್ದರು. ಮರುದಿನ ಅಂದ್ರೆ ಡಿಸೆಂಬರ್ 13ರಂದು ಎಂದಿನಂತರ ಬೆಳಗ್ಗೆ ಸುಮಾರು 9 ಗಂಟೆಗೆ ಕೆಲಸಕ್ಕೆ ಹೋಗಿದ್ದರು. ಅದೇ ದಿನ ಲಕ್ಷ್ಮೀಬಾಯಿ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರೋದು ಆಶ್ಚರ್ಯವನ್ನುಂಟು ಮಾಡಿತ್ತು. ಲಕ್ಷ್ಮೀಬಾಯಿ ಶವ ಕುರ್ಲಾ ರೈಲ್ವೆ ನಿಲ್ದಾಣ ಬಳಿ ಬಂದಿದ್ದು ಹೇಗೆ? ಸಾವು ಆಗಿದ್ದು ಹೇಗೆ ಎಂಬುದರ ಸೀಕ್ರೆಟ್ ಬೆಳಕಿಗೆ ಬಂದಿಲ್ಲ.

25 ಲಕ್ಷದ ನೌಕರಿ ಬಿಟ್ಟು , UPSC ತಯಾರಿ ನಡೆಸಿದ್ದ ಯುವಕ ವಿಷ ಸೇವಿಸಿ ಬಾರದ ಲೋಕಕ್ಕೆ ಹೋದ!

click me!