ಪೆನ್ನು ಕದ್ದಿದ್ದಕ್ಕೆ ಬಾಲಕನಿಗೆ ಮನಬಂದಂತೆ ಥಳಿಸಿದ ಗುರೂಜಿ! ಮಗನ ಸ್ಥಿತಿ ಕಂಡು ತಾಯಿ ಆಘಾತ!

By Ravi Janekal  |  First Published Aug 3, 2024, 11:24 AM IST

ಪೆನ್ನು ಕದ್ದಿದ್ದಕ್ಕೆ ಬಡ ವಿದ್ಯಾರ್ಥಿಯೋರ್ವನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ರಾಯಚೂರು ನಗರದ ರಾಮಕೃಷ್ಣ ಆಶ್ರಮದಲ್ಲಿ ನಡೆದಿದೆ. ಶ್ರವಣ್ ಕುಮಾರ್, ಹಲ್ಲೆಗೊಳಗಾದ ಬಾಲಕ. ರಾಮಕೃಷ್ಣ ಮಠದ ಗುರೂಜಿ ವೇಣುಗೋಪಾಲ್ ಎಂಬಾತನಿಂದ ಹಲ್ಲೆ


ರಾಯಚೂರು (ಆ.3): ಪೆನ್ನು ಕದ್ದಿದ್ದಕ್ಕೆ ಬಡ ವಿದ್ಯಾರ್ಥಿಯೋರ್ವನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ರಾಯಚೂರು ನಗರದ ರಾಮಕೃಷ್ಣ ಆಶ್ರಮದಲ್ಲಿ ನಡೆದಿದೆ.

ಶ್ರವಣ್ ಕುಮಾರ್, ಹಲ್ಲೆಗೊಳಗಾದ ಬಾಲಕ. ರಾಮಕೃಷ್ಣ ಮಠದ ಗುರೂಜಿ ವೇಣುಗೋಪಾಲ್ ಎಂಬಾತನಿಂದ ಹಲ್ಲೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ. ಬಡತನದ ಕಾರಣಕ್ಕೆ ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮ ಸೇರಿಸಿದ್ದ ಪೋಷಕರು. ಆಕಸ್ಮಿಕವಾಗಿ ತಾಯಿ ಆಶ್ರಮಕ್ಕೆ ಭೇಟಿ ನೀಡಿ ಮಗುವನ್ನು ನೋಡಿದಾಗ ಮಗುವಿನ ಸ್ಥಿತಿ ಕಂಡು ಆಘಾತಕ್ಕೊಳಗಾದ ತಾಯಿ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Tap to resize

Latest Videos

ಪಿಎಸ್‌ಐ ಅನುಮಾನಾಸ್ಪದ ಸಾವು; ಯಾದಗಿರಿ ಶಾಸಕ, ಪುತ್ರನ ವಿರುದ್ಧ ಕುಟುಂಬ, ಸಂಘಟನೆಗಳು ಗಂಭೀರ ಆರೋಪ!

ಘಟನೆ ಹಿನ್ನೆಲೆ?

ಸಹಪಾಠಿಗಳ ಜೊತೆ ಆಟವಾಡು ವೇಳೆ ತಿಳಿದೋ ತಿಳಿಯದೋ ಪೆನ್ನು ಕದ್ದಿದ್ದ ಬಾಲಕ ಶ್ರವಣಕುಮಾರ್. ಸಹಪಾಠಿಗಳು ಗುರೂಜಿ ವೇಣುಗೋಪಾಲ್ ಬಳಿ ದೂರು ನೀಡಿದ್ದಾರೆ. ದೂರು ನೀಡುತ್ತಿದ್ದಂತೆ ಬಾಲಕನಿಗೆ ಮನಸೋ ಇಚ್ಛೆ ಥಳಿಸಿರುವ ವೇಣುಗೋಪಾಲ. ಅಷ್ಟು ಸಾಲದ್ದಕ್ಕೆ ಮೂರು ದಿನಗಳ ಕಾಲ ಕತ್ತಲೆ ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಹಲ್ಲೆಯಿಂದ ಬಾಲಕನ ಕಣ್ಣುಗಳು ಬಾವು ಬಂದಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ವೇಣುಗೋಪಾಲನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!