ಬೆಂಗಳೂರು, ಮಂಗಳೂರಿಗೆ ಸೀಮಿತವಾಗಿದ್ದ ಅಂತರರಾಜ್ಯ ಡ್ರಗ್ಸ್ ಪೆಡ್ಲರ್ ಜಾಲ ಈಗ ಹುಬ್ಬಳ್ಳಿಗೂ ಕಾಲಿಟ್ಟಿದ್ದು, ತಮಿಳುನಾಡು ಪೊಲೀಸರು ಹುಬ್ಬಳ್ಳಿ ಯುವಕನನ್ನು ಬಂಧಿಸಿದ್ದಾರೆ.
ಹುಬ್ಬಳ್ಳಿ (ಆ.08): ಈವರೆಗೆ ಬೆಂಗಳೂರು, ಮಂಗಳೂರಿನಲ್ಲಿ ಕಾಣಸಿಗುತ್ತಿದ್ದ ಡ್ರಗ್ಸ್ ಪೆಡ್ಲರ್‌ಗಳ ಜಾಲ ಈಗ ಹುಬ್ಬಳ್ಳಿ ಮಹಾನಗರಕ್ಕೂ ಕಾಲಿಟ್ಟಿದೆ. ಹುಬ್ಬಳ್ಳಿಯ ಪ್ರತಿಷ್ಠಿತ ಮೆಡಿಕಲ್ ಶಾಪ್‌ನಲ್ಲಿ ಮಾದಕ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎನ್ನಲಾದ ಯುವಕನೊಬ್ಬನನ್ನು ತಮಿಳುನಾಡು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ಮತ್ತು ಗಾಂಜಾ ಮಾರಾಟ ಪ್ರಕರಣಗಳು ಹೆಚ್ಚಾಗುತ್ತಿವೆ. ಕರ್ನಾಟಕದ ಪೊಲೀಸರು ಎಷ್ಟೇ ಪ್ರಕರಣಗಳನ್ನು ಭೇದಿಸಿದರೂ ಡ್ರಗ್ಸ್ ಪೆಡ್ಲರ್‌ಗಳಿಗೆ ಮಾತ್ರ ಕಡಿವಾಣ ಬೀಳುತ್ತಿಲ್ಲ. ಇನ್ನು ಕರ್ನಾಟಕ ಪೊಲೀಸರು ಬೇಧಿಸಲು ಸಾಧ್ಯವಾಗದ ಹುಬ್ಬಳ್ಳಿ ಯುವಕನ ಡ್ರಗ್ಸ್ ಮಾರಾಟ ಜಾಲದ ಪ್ರಕರಣವೊಂದನ್ನು ತಮಿಳುನಾಡಿದ ಕೋಯಮತ್ತೂರು ಪೊಲೀಸರು ಬೇಧಿಸಿ ಆರೋಪಿ ಯುವಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ರಾಜ್ಯದ ಪ್ರತಿಷ್ಠಿತ ನಗರಗಳಿಗೆ ಸೀಮಿತವಾಗಿದ್ದ ಡ್ರಗ್ಸ್ ಮತ್ತು ಗಾಂಜಾ ಪೆಡ್ಲರ್‌ಗಳ ಹಾವಳಿ ಮತ್ತು ಮಾರಾಟ ಜಾಲ ಹುಬ್ಬಳ್ಳಿಗೂ ಕಾಲಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಮಂಗಳೂರಿನ ಜನರು ಪತ್ನಿಗೆ ಕಳ್ಳಿ ಅಂತಾರೆಂದು ಬೆಂಗಳೂರಿಗೆ ಕರೆತಂದು ಕೊಲೆ ಮಾಡಿದ ಪತಿ
ಹುಬ್ಬಳ್ಳಿ ಜನತಾ ಬಜಾರ್ ಮೆಡಿಕಲ್ ಶಾಪ್‌ನಲ್ಲಿ ಡ್ರಗ್ಸ್ ಮಾರಾಟ: ಹೌದು, ಹುಬ್ಬಳ್ಳಿಯ ಕೂಯುವಕನಿಗಿದೇಯಾ ಅಂತಾರಾಜ್ಯ ಡ್ರಗ್ ಪೆಡರಲ್‌ಗಳೊಂದಿಗೆ ನಂಟು? ಎನ್ನುವ ಆತಂಕ ಕಂಡುಬರುತ್ತಿದೆ. ತಮಿಳುನಾಡು ಪೊಲೀಸರು ಹುಬ್ಬಳ್ಳಿ ಮೂಲದ ಯುವಕನನನ್ನು ಬಂಧಿಸಿ ತಮ್ಮೊಂದಿಗೆ ಕೊಯಮತ್ತೂರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಂಧಿತವಾದ ಯುವಕ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಸೂರಜಗೌಡ ಖಾನಗೌಡರ ಆಗಿದ್ದಾನೆ. ಈತ ಹುಬ್ಬಳ್ಳಿಯ ಜನತಾ ಬಜಾರ್‌ನಲ್ಲಿನ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದನು. ಇಲ್ಲಿಂದಲೇ ಡ್ರಗ್ಸ್ ಸರಬರಾಜು ಮಾಡುತ್ತಿದ್ದನು ಎಂಬ ಆರೋಪ ಕೇಳಿಬಂದಿದೆ.
ಹುಬಳ್ಳಿ ಯುವಕನ ಹೆಸರು ಹೇಳಿದ ತಮಿಳುನಾಡು ಆರೋಪಿಗಳು: ಇನ್ನು ಕೊಯಮತ್ತೂರು ಪೊಲೀಸರು ಬಂಧಿಸಿದ ಸೂರಜಗೌಡ ಮೆಡಿಕಲ್ ಶಾಪ್‌ನಲ್ಲಿಯೇ ನಿಷೇಧಿತ ಟ್ಯಾಬ್ಲೆಟ್ ಮಾರಾಟ ಮಾಡುತ್ತಿದ್ದನು ಎಂದು ಹೇಳಲಾಗುತ್ತಿದೆ. ತಮಿಳನಾಡಿನ ಕೊಯಮತ್ತೂರಿನ ಫಿಲಮೇಡ ಠಾಣೆ ಪೊಲೀಸರು ಸ್ಥಳೀಯ ಡ್ರಗ್ಸ್ ಜಾಲವನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ವಸ್ತುಗಳು (NARCOTIC DRUGS AND PSYCHOTROPIC SUBSTANCES-NDPS)ಆ್ಯಕ್ಟ್ ಅಡಿ ಭೇದಿಸಿದೆ. ಅಲ್ಲಿನ ಆರೋಪಿಗಳ ವಿಚಾರಣೆ ವೇಳೆ ಹುಬ್ಬಳ್ಳಿಯ ಸೂರಜ್‌ಗೌಡನ ಹೆಸರು ಬೆಳಕಿಗೆ ಬಂದಿದೆ.
ಜಸ್ಟೀಸ್ ಫಾರ್ ಸೌಜನ್ಯಾ ಕೇಸಿಗೆ ಮಣಿಯುತ್ತಾ ಸರ್ಕಾರ.! ನಾಲ್ವರ ವಿರುದ್ಧ ಮರು ತನಿಖೆ ನಡೆಯುತ್ತಾ.?
ತಮಿಳುನಾಡು ಪೊಲೀಸರಿಗೆ ನಿಷೇಧಿತ ಡ್ರಗ್ಸ್ ಮಾತ್ರೆ ಕೊಟ್ಟ ಸೂರಜ್‌ಗೌಡ: ತಮಿಳುನಾಡು ಆರೋಪಿಗಳು ಹುಬ್ಬಳ್ಳಿಯ ಸೂರಜಗೌಡನ ಜತೆ ನಂಟು ಹೊಂದಿರುವ ವಿಚಾರನ್ನ ಬಾಯಿಬಿಟ್ಟಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೊಯಮತ್ತೂರು ಪೊಲೀಸರು ಡ್ರಗ್ಸ್ ಜಾಲದ ಪತ್ತೆಗೆ ಹುಬ್ಬಳ್ಳಿಗೆ ಆಗಮಿಸಿದ್ದರು. ಸಾರ್ವಜನಿಕರು ಬಳಸಲು ನಿರ್ಬಂಧಿತವಾದ ಮೆಡಿಷನ್ ಖರೀದಿಸುವ ನೆಪದಲ್ಲಿ ಹುಬ್ಬಳ್ಳಿಯ ಸೂರಜ್‌ಗೌಡನನ್ನು ಪೊಲೀಸರು ಟ್ರ್ಯಾಪ್ ಮಾಡಿದ್ದರು. ಕೊಯಮತ್ತೂರು ಪೊಲೀಸರು ತೋಡಿದ ಖೆಡ್ಡಾಕ್ಕೆ ಸೂರಜ್‌ಗೌಡ ಬಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ. ಕೊಯಮತ್ತೂರಿನ ಪೀಲಮೆಡು ಪೊಲೀಸರು ಹುಬ್ಬಳ್ಳಿಯ ಸೂರಜ್ ಗೌಡನ ಬಂಧಿಸಿರುವ ಮಾಹಿತಿಯನ್ನು ಹುಬ್ಬಳ್ಳಿ ಗ್ರಾಮೀಣ ಹಾಗೂ ಹುಬ್ಬಳ್ಳಿ ಉಪನಗರ ಪೊಲೀಸರಿಗೆ ನೀಡಿದ್ದಾರೆ.