
ಮಧುರೈ: ಮೃತ ತಾಯಿಯ ಬಗ್ಗೆ ಕೆಟ್ಟ ಮಾತು ಆಡಿದ ಎಂಬ ಕಾರಣಕ್ಕೆ ಸಿಟ್ಟಿಗೆದ್ದ 13 ವರ್ಷದ ಬಾಲಕ, 10 ವರ್ಷದ ಹುಡುಗನನ್ನು ಕೊಲೆ ಮಾಡಿ ಮಲಗುಂಡಿಗೆ ಬಿಸಾಡಿದ ಆಘಾತಕಾರಿ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಬಿಹಾರ ಮೂಲದ ಈ ಇಬ್ಬರು ಬಾಲಕರು ಇಲ್ಲಿನ ಕಥಪಟ್ಟಿ ಗ್ರಾಮದ ಉರ್ದು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಸಂಜೆಯಿಂದಲೂ ಕೊಲೆಯಾದ ಬಾಲಕ ಕಾಣೆಯಾಗಿದ್ದನೆಂದು ಹುಡುಕಾಟ ಆರಂಭಿಸಿದ ನಂತರ ಶುಕ್ರವಾರ ಸಂಜೆ ವೇಳೆಗೆ ಉರ್ದು ಶಾಲೆಯ ಶೌಚಾಲಯದ ಮಲಗುಂಡಿಯಲ್ಲಿ ಬಾಲಕನ ಶವ ಪತ್ತೆಯಾದ ನಂತರ ಘಟನೆ ಬೆಳಕಿಗೆ ಬಳಿಕ ಸಿಸಿಟೀವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ್ದಾರೆ. ವಿಚಾರಣೆ ವೇಳೆ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೇಪ್ ಮಾಡಿದ್ದಲ್ಲದೇ ವೀಡಿಯೋ ಮಾಡಿ ಬ್ಲಾಕ್‌ಮೇಲ್: 50ರ ಸಲಿಂಗಕಾಮಿ ಕತೆ ಮುಗಿಸಿದ 15ರ ಬಾಲಕ
ಈ ಇಬ್ಬರು ಬಾಲಕರು ಬಿಹಾರದವರಾಗಿದ್ದು, ಆರೋಪಿ ಬಾಲಕ ಬಿಹಾರದ ಕಿಶನ್‌ಗಂಜ್‌ನವನಾದರೆ, ಕೊಲೆಯಾದ ಬಾಲಕ ಪೂರ್ನಿಯಾದವನಾಗಿದ್ದಾನೆ. ಈ ಮಕ್ಕಳು ಸೇರಿದಂತೆ ಬಿಹಾರದ ಒಟ್ಟು 11 ಮಕ್ಕಳು ಟ್ರಸ್ಟ್‌ವೊಂದು ನಡೆಸುತ್ತಿದ್ದ ವಸತಿ ಶಾಲೆಯಲ್ಲಿ ಓದುತ್ತಿದ್ದರು. ಇತ್ತ ಬಾಲಕ ನಾಪತ್ತೆಯಾದ ಹಿನ್ನೆಲೆಯಲ್ಲಿ ಮೆಲೂರು ಪೊಲೀಸರು ಶಾಲೆಗೆ ಭೇಟಿ ನೀಡಿ ನಾಪತ್ತೆಯಾದ ಬಾಲಕನಿಗಾಗಿ ಶೋಧ ನಡೆಸಿದ್ದರು. ಈ ವೇಳೆ ಶಾಲೆಯ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಬಾಲಕನ ಶವ ಪತ್ತೆಯಾಗಿದೆ.
ಸಿಸಿಟಿವಿ ದೃಶ್ಯಾವಳಿ ತೋರಿಸುವಂತೆ 13 ವರ್ಷದ ಆರೋಪಿ ಬಾಲಕ 10 ವರ್ಷದ ಬಾಲಕನನ್ನು ವಾಶ್‌ರೂಮ್‌ನತ್ತ ಬರುವಂತೆ ಕರೆದಿದ್ದಾನೆ. ಜೊತೆಗೆ ಆತನ ದೇಹವನ್ನು ಎಳೆದುಕೊಂಡು ಹೋಗಿ ಸೆಪ್ಟಿಕ್ ಟ್ಯಾಂಕ್‌ಗೆ ಹಾಕುತ್ತಿರುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಬಾಲಕನನ್ನು ಪೊಲೀಸರು ವಿಚಾರಣೆ ಮಾಡಿದಾಗ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ.
ಬೆಂಗಳೂರು: ಯುವತಿಯ ಕೊಂದು 1.5 ತಾಸು ಅಲ್ಲೆ ಇದ್ದ ಅಪ್ರಾಪ್ತ ಬಾಲಕ
ತನ್ನ ಬದುಕಿರದ ತಾಯಿಯ ಬಗ್ಗೆ ಬಾಲಕ ಕೆಟ್ಟದಾಗಿ ಮಾತನಾಡಿದ್ದಕ್ಕೆ ಆತನಿಗೆ ಚೂರಿಯಿಂದ ಇರಿದು ಆತನನ್ನು ಸೆಪ್ಟಿಕ್ ಟ್ಯಾಂಕ್‌ಗೆ ಎಸೆದಿದ್ದಾಗಿ ಬಾಲಕ ಹೇಳಿದ್ದಾನೆ. ಇತ್ತ ಸಂತ್ರಸ್ತ ಬಾಲಕನ ಮೃತದೇಹವನ್ನು ಸೆಪ್ಟಿಕ್ ಟ್ಯಾಂಕ್‌ನಿಂದ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇತ್ತ ಬಾಲಕರಿಬ್ಬರ ಕುಟುಂಬಕ್ಕು ಮಾಹಿತಿ ನೀಡಲಾಗಿದ್ದು, ಅವರು ಮಧುರೈನತ್ತ ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ