Chikkamagaluru Crime: ಎಸಿಬಿ ಬಲೆಗೆ ಬಿದ್ದ ತಹಸೀಲ್ದಾರ್‌: ಕಾರು ಚಾಲಕ ನಿಗೂಢ ಆತ್ಮಹತ್ಯೆ

Kannadaprabha News   | Asianet News
Published : Jan 30, 2022, 06:46 AM IST
Chikkamagaluru Crime: ಎಸಿಬಿ ಬಲೆಗೆ ಬಿದ್ದ ತಹಸೀಲ್ದಾರ್‌: ಕಾರು ಚಾಲಕ ನಿಗೂಢ ಆತ್ಮಹತ್ಯೆ

ಸಾರಾಂಶ

*  ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದ ಘಟನೆ *  ಇತ್ತೀಚೆಗೆ ಎಸಿಬಿ ಬಲೆಗೆ ಬಿದ್ದಿದ್ದರು ಶೃಂಗೇರಿ ತಹಸೀಲ್ದಾರ್‌ *  ಘಟನೆ ಖಂಡಿಸಿ ಶೃಂಗೇರಿ ಪಟ್ಟಣದಲ್ಲಿ ಪ್ರತಿಭಟನೆ 

ಚಿಕ್ಕಮಗಳೂರು(ಜ.30):  ಶೃಂಗೇರಿ ತಹಸೀಲ್ದಾರ್‌ ಜೀಪ್‌ ಚಾಲಕ ಶನಿವಾರ ಸಂಜೆ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ನಡೆದಿದ್ದು, ಅಧಿಕಾರಿಗಳ ದುರಾಸೆ ಮತ್ತು ಬ್ರೋಕರ್‌ಗಳ ಹಾವಳಿಯೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. 

ಶೃಂಗೇರಿ(Sringeri) ತಾಲೂಕಿನ ಹೆತ್ತೂರು ಗ್ರಾಮದ ನಿವಾಸಿ ವಿಜೇತ್‌ (24) ಮೃತಪಟ್ಟವರು. ಅವರು ತಮ್ಮ ಮನೆಯ ಹಿಂಭಾಗದಲ್ಲಿ ನೇಣಿಗೆ ಶರಣಾಗಿದ್ದಾರೆ. ಇತ್ತೀಚೆಗೆ ಶೃಂಗೇರಿ ತಹಸೀಲ್ದಾರ್‌(Tahsildar) ಅಂಬುಜಾ(Ambuja) ಅವರು ಲಂಚ(Bribe) ಸ್ವೀಕರಿಸಿದ ಆರೋಪದ ಮೇಲೆ ಎಸಿಬಿ(ACB) ಬಲೆಗೆ ಬಿದ್ದಿದ್ದರು. ಇದೇ ಪ್ರಕರಣದಲ್ಲಿ ಮೂರು ಮಂದಿ ಗ್ರಾಮ ಲೆಕ್ಕಿಗರು, ಒಬ್ಬ ಕಂದಾಯ ನಿರೀಕ್ಷಕರು ಅಮಾನತುಗೊಂಡಿದ್ದರು. ಈಗ ವಿಜೇತ್‌ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

Domestic violence : ಬೆಳಗಾವಿ, ಬುದ್ಧಿಮಾಂದ್ಯ ಮಕ್ಕಳಾಗಿದ್ದಕ್ಕೆ ಕಿರುಕುಳ, ಮಗನೊಂದಿಗೆ ಕೆರೆಗೆ ಹಾರಿದ ಮಹಿಳೆ

ಘಟನೆಯನ್ನು ಖಂಡಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, 94ಸಿ ಹಾಗೂ 94ಸಿಸಿ ನಕಲಿ ಹಕ್ಕುಪತ್ರ ಹಗರಣದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದ ತಹಸೀಲ್ದಾರ್‌ ಅಂಬುಜಾ, ತಾಲೂಕು ಕಚೇರಿಯ ಉನ್ನತ ಅಧಿಕಾರಿಗಳು, ಕಮಿಷನ್‌ ಏಜೆಂಟರು ನೇರ ಹೊಣೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಸಮುದ್ರಕ್ಕೆ ಹಾರಿದ ಪ್ರಿಯತಮೆಯ ರಕ್ಷಿಸಲು ಹೋಗಿ ಯುವಕ ಸಾವು

ಉಳ್ಳಾಲ(Ullal): ಸಮುದ್ರಕ್ಕೆ ಹಾರಿದ ಪ್ರಿಯತಮೆಯನ್ನು ಉಳಿಸಲು ಮುಂದಾದ ಪ್ರಿಯಕರ ಮುಳುಗಿ ಸಾವನ್ನಪ್ಪಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಶುಕ್ರವಾರ ತಡರಾತ್ರಿ ವೇಳೆ ಸಂಭವಿಸಿದೆ. ರಾಣಿಪುರ ಉಳಿಯ ನಿವಾಸಿ ಹಿಲರಿ ಡಿಸೋಜ ಎಂಬವರ ಪುತ್ರ ಲಾಯ್ಡ್‌ ಡಿಸೋಜ(29) ಮೃತರು(Death). ಪ್ರಕರಣದಲ್ಲಿ ಅಸ್ವಸ್ಥಗೊಂಡಿರುವ ಕೋಟೆಕಾರು ಪಾನೀರು ನಿವಾಸಿ ಅಶ್ವಿತಾ ಫೆರಾವೋ (24) ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ:

ಲಾಯ್ಡ್‌ ಡಿಸೋಜ ಅವರಿಗೆ ಅಶ್ವಿತಾ ಫೆರಾವೋ ಜೊತೆಗೆ ಎಂಟು ವರ್ಷಗಳಿಂದ ಪ್ರೀತಿಯಿತ್ತು. ಇವರಿಬ್ಬರ ಪ್ರೀತಿಯಲ್ಲಿ ಎರಡು ತಿಂಗಳ ಹಿಂದೆ ವ್ಯತ್ಯಾಸ ಉಂಟಾಗಿತ್ತು. ಲಾಯ್ಡ್ ಅವರಿಗೆ ಇನ್ನೋರ್ವ ಚೆಂಬುಗುಡ್ಡೆ ನಿವಾಸಿ ಇನ್ನೋರ್ವ ಯುವತಿ ಜೊತೆ ಪ್ರೀತಿ(Love) ಅರಳಿತ್ತು. ಇದು ಅಶ್ವಿತಾ ಗಮನಕ್ಕೆ ಬಂದ ಇವರಿಬ್ಬರ ನಡುವೆ ಗಲಾಟೆಗಳು ನಡೆದು, ಪ್ರಕರಣ ಇತ್ಯರ್ಥಕ್ಕೆ ಸೋಮೇಶ್ವರ ಸಮುದ್ರ ತೀರಕ್ಕೆ ಮೂವರು ಶನಿವಾರ ಬಂದಿದ್ದರು. ಮೂವರು ಸೋಮೇಶ್ವರದ ರುದ್ರಪಾದೆಯಲ್ಲಿ ಚರ್ಚೆ ನಡೆಸುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದರು. ಈ ನಡುವೆ ಅಶ್ವಿತಾ ಏಕಾಏಕಿ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿದ್ದರು. ಇದನ್ನು ಗಮನಿಸಿದ ಲಾಯ್ಡ್‌ ಕೂಡಾ ಸಮುದ್ರಕ್ಕೆ ಹಾರಿ ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಸ್ಥಳದಲ್ಲಿದ್ದ ಗೃಹರಕ್ಷಕದಳ ಸಿಬ್ಬಂದಿ ಸಮುದ್ರಕ್ಕೆ ಧುಮುಕಿ ಅಶ್ವಿತಾ ಅವರನ್ನು ತಕ್ಷಣಕ್ಕೆ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು. ಆದರೆ ಲಾಯ್ಡ್‌ ಸಮುದ್ರದ(sea) ಅಲೆಗಳ ನಡುವೆ ನಾಪತ್ತೆಯಾಗಿದ್ದು, ಬಹಳಷ್ಟು ಶೋಧ ಕಾರ್ಯ ನಡೆಸಿದ ಬಳಿಕ ಪತ್ತೆಯಾದರೂ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ.

ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ!

ಉತ್ತಮ ಈಜುಪಟುವಾಗಿದ್ದ ಲಾಯ್ಡ್ ಅವರಿಗೆ ಸಮುದ್ರಕ್ಕೆ ಹಾರುವ ಸಂದರ್ಭ ಬಂಡೆಕಲ್ಲುಗಳು ಅಪ್ಪಳಿಸಿ ಗಂಭೀರವಾಗಿ ಗಾಯಗೊಂಡಿರುವ ಸಾಧ್ಯತೆ ಇದೆ. ಲಾಯ್ಡ್ ಅವರು ತಂದೆ, ತಾಯಿ , ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಸೌದಿ ಅರೆಬಿಯಾದಲ್ಲಿ(Saudi Arabia) ಕೆಲಸದಲ್ಲಿದ್ದರು. ಒಂದು ವರ್ಷದ ಹಿಂದೆ ವಾಪಸ್ಸಾಗಿ, ಡೆಕೊರೇಟರ್‌ ಆಗಿ ಊರಲ್ಲೇ ಕೆಲಸ ನಿರ್ವಹಿಸುತ್ತಿದ್ದರು. ಉಳ್ಳಾಲ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ಇಬ್ಬರೂ ಯುವತಿಯರು ಲಾಯ್ಡ್‌ ಡಿಸೋಜ ಜತೆ ಸಲುಗೆಯಿಂದ ಇದ್ದು ಇಬ್ಬರಿಗೂ ಲಾಯ್ಡ್‌ ಜತೆ ಪ್ರೀತಿ ಬೆಳೆದಿತ್ತು. ನನ್ನನ್ನು ಮಾತ್ರ ಪ್ರೀತಿಸಬೇಕು, ಬೇರೆ ಯಾರನ್ನೂ ಪ್ರೀತಿಸಬಾರದು ಎಂದು ಅಶ್ವಿತಾ ಸಮುದ್ರಕ್ಕೆ ಹಾರಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ವೇಳೆ ಆಕೆಯನ್ನು ರಕ್ಷಿಸಲು ಲಾಯ್ಡ್‌ ಕೂಡ ಸಮುದ್ರಕ್ಕೆ ಹಾರಿದ್ದು, ಆಕೆಯನ್ನು ದಡದತ್ತ ತಳ್ಳಿ ರಕ್ಷಣೆಗೆ ಮುಂದಾಗಿದ್ದರು. ಆದರೆ ನೀರಿನ ಸೆಳೆತಕ್ಕೆ ಸಿಲುಕಿದ್ದು, ಆಸ್ಪತ್ರೆಗೆ ಕೊಂಡೊಯ್ದಾಗ ಮೃತಪಟ್ಟಿದ್ದಾರೆ ಅಂತ ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌ ತಿಳಿಸಿದ್ದಾರೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?