
ಕಂಡ ಕಂಡ ಪೋಸ್ಟ್ಗೆ ಕೆಟ್ಟ ಕೆಟ್ಟ ಕಮೆಂಟ್ಸ್ ಹಾಕುವುದು ಎಂದರೆ ಕೆಲವರಿಗೆ ಇನ್ನಿಲ್ಲದ ಖುಷಿ. ವಿಕೃತ ಸಂತೋಷ. ಅದರಲ್ಲಿಯೂ ಹೆಣ್ಣುಮಕ್ಕಳ ಪೋಸ್ಟ್ ಇಲ್ಲವೇ ತಮಗೆ ಆಗದವರ ಪೋಸ್ಟ್ ಕಂಡರಂತೂ ಮುಗಿದೇ ಹೋಯ್ತು. ಮನಸ್ಸಿನಲ್ಲಿ ಇರುವ ವಿಕಾರತೆಯನ್ನೆಲ್ಲಾ ಕಮೆಂಟ್ ಮೂಲಕ ಉಗುಳುತ್ತಾರೆ. ಅಸಭ್ಯ, ಅಶ್ಲೀಲ ಕಮೆಂಟ್ಸ್ ಹಾಕುತ್ತಾರೆ. ಈ ಮೂಲಕ ತಮ್ಮ ಮನೋವಿಕಾರತೆಯನ್ನು ಪ್ರದರ್ಶಿಸುತ್ತಾರೆ. ಇಂಥ ವಿಕೃತಿ ಹೆಚ್ಚಾಗಿ ಕಂಡುಬರುವುದು ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿರುವವರೇ ಹೆಚ್ಚು. ತಮಗೆ ಇನ್ನೊಂದು ಪಕ್ಷ ಆಗುವುದಿಲ್ಲ ಎನ್ನುವ ಮಾತ್ರಕ್ಕೆ ಸರಿಯೋ, ತಪ್ಪೋ ವಿಕೃತಿ ಮೆರೆಯುವವರೇ ಹೆಚ್ಚು. ಅದು ಅವರ ಸಂಸ್ಕೃತಿಯನ್ನು ತೋರಿಸುವುದು ನಿಜವಾದರೂ, ಅವರ ಅಭಿಮಾನಿಗಳಿಗೆ ಅದು ಖುಷಿ ಕೊಟ್ಟರೂ ಇನ್ಮುಂದೆ ಹೀಗೆಲ್ಲಾ ವಿಕೃತಿಯ ಸಂತೋಷಿಗಳ ಟೈಮ್ ಕೆಟ್ಟರೆ ಇನ್ಮುಂದೆ ಜೈಲೂಟ ಫಿಕ್ಸ್ ಆದರೂ ಆದೀತೆ!
ಈ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ (Dr. Nagalakshmi Choudhary)ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಸುವರ್ಣ ಬೆಂಗಳೂರು ಬಜ್ (Suvarna Bengaluru Buzz)ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯ ರಿವೀಲ್ ಮಾಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಹೆಣ್ಣುಮಕ್ಕಳ ಪೋಸ್ಟ್ಗೆ ಕಮೆಂಟ್ ಹಾಕುವಾಗ ಹೇಗೆ ಎಚ್ಚರಿಕೆಯಿಂದ ಇರಬೇಕು ಎನ್ನುವ ಬಗ್ಗೆ ಅವರು ತಿಳಿಸಿದ್ದಾರೆ. ಈಚೆಗೆ ಸ್ಯಾಂಡಲ್ವುಡ್ ನಟಿ ರಮ್ಯಾ ಅವರು, ತಮ್ಮ ವಿರುದ್ಧ ಅಶ್ಲೀಲ ಕಮೆಂಟ್ ಹಾಕಿದವರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಅವರನ್ನು ಅರೆಸ್ಟ್ ಮಾಡಲಾಗಿದೆ. ಅವರ ಪೈಕಿ ಹೆಚ್ಚಿನವರು ಗಾರೆ, ಕೂಲಿ ಕೆಲಸ ಮಾಡುವವರು. ಇಂಥ ಕಮೆಂಟ್ ಹಾಕಿದ್ದಕ್ಕೆ ಜೈಲು ಶಿಕ್ಷೆ, ಕೋರ್ಟು, ಕಚೇರಿ ಅಲೆಯುವುದು ಬೇಕಾ ಎನ್ನುವುದು ಅವರ ಮಾತು.
ದೂರು ದಾಖಲಿಸಿ ಎಂದ ಅಧ್ಯಕ್ಷೆ
ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ಕೆಲವೊಂದು ವಿಷಯಗಳನ್ನು ಪೋಸ್ಟ್ ಮಾಡಿದಾಗ ತಮಗೂ ಇದೇ ರೀತಿಯ ಅನುಭವ ಆಗಿದೆ ಎಂದಿರುವ ಡಾ.ನಾಗಲಕ್ಷ್ಮಿ ಅವರು, ಇದೇ ವೇಳೆ ಹೆಣ್ಣುಮಕ್ಕಳಿಗೂ ಮನವಿ ಮಾಡಿಕೊಂಡಿದ್ದಾರೆ. ಅದೇನೆಂದರೆ, ನಿಮ್ಮ ವಿರುದ್ಧ ಅಶ್ಲೀಲ ಎನ್ನುವ ಕಮೆಂಟ್ ಮಾಡಿದರೆ ಅಂಥವರ ವಿರುದ್ಧ ದೂರು ದಾಖಲು ಮಾಡಲು ಹಿಂಜರಿಯಬೇಡಿ, ಅಂಜಿಕೆ ಪಟ್ಟುಕೊಳ್ಳದೇ ದೂರು ದಾಖಲು ಮಾಡಿ ಎಂದು ಹೇಳಿದ್ದಾರೆ. ಆದ್ದರಿಂದ ಇನ್ನುಮುಂದೆ ಕಮೆಂಟ್ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನು ಇದು ಸೂಚಿಸುತ್ತದೆ.
ಇದನ್ನೂ ಓದಿ: Prajwal Revanna ಪೆನ್ಡ್ರೈವ್ನಲ್ಲಿ ಏನೇನಿತ್ತು? ಶಾಕಿಂಗ್ ವಿಷ್ಯ ರಿವೀಲ್ ಮಾಡಿದ ಮಹಿಳಾ ಆಯೋಗದ ಅಧ್ಯಕ್ಷೆ
ಇಂಥ ಅಸಭ್ಯ, ಅಶ್ಲೀಲ ಕಮೆಂಟ್ ಮಾಡುವವರ ಪೈಕಿ ಹೆಚ್ಚಿನವರು ಫೇಕ್ ಐಡಿ ಇಟ್ಟುಕೊಂಡಿರುತ್ತಾರೆ, ಇಲ್ಲವೇ ಏನೋ ಸೂಚನೆ ಸಿಗುತ್ತಿದ್ದಂತೆಯೇ ಡಿಲೀಟ್ ಮಾಡುತ್ತಾರೆ. ಆದರೆ ಒಂದು ನೆನಪಿಸಿ ಫೇಕ್ ಐಡಿ ಆದರೂ ನಿಮ್ಮನ್ನು ಕಂಡುಹಿಡಿಯುವುದು ತುಂಬಾ ಸುಲಭ. ಡಿಲೀಟ್ ಮಾಡಿದ್ರೂ ಅದು ಸಿಗುತ್ತದೆ ಇಲ್ಲವೇ ಸ್ಕ್ರೀನ್ಷಾಟ್ ತೆಗೆದುಕೊಂಡಿದ್ದರೆ ನೀವು ಡಿಲೀಟ್ ಮಾಡಿಯೂ ಎಸ್ಕೇಪ್ ಆಗಲು ಆಗುವುದಿಲ್ಲ. ಇದಾಗಲೇ ಖುದ್ದು ಡಾ.ನಾಗಲಕ್ಷ್ಮಿ ಅವರ ವಿರುದ್ಧ ಅಸಭ್ಯ ಕಮೆಂಟ್ ಹಾಕಿದ್ದ, ಫೇಕ್ ಐಡಿ ಮಾಡಿಕೊಂಡಿದ್ದ ಮಹಿಳೆಯೊಬ್ಬರ ವಿರುದ್ಧ ದೂರು ದಾಖಲಾಗಿದೆ ಎನ್ನುವುದು ನೆನಪಿರಲಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ