
ರಾಯಚೂರು (ಸೆ.4): ಶಂಕಿತ ನಕ್ಸಲ್, ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿ 18 ಅಪರಾಧಗಳಲ್ಲಿ ಆರೋಪಿ ಆಗಿರುವ ಬಿಹಾರ ಮೂಲದ ಮನೋಜ ಸದಾನನ್ನು ಅಲ್ಲಿನ ಪೊಲೀಸರು ರಾಯಚೂರಿನ ಯರಮರಸ್ ಕೈಗಾರಿಕಾ ವಲಯದಲ್ಲಿ ಬಂಧಿಸಿದ್ದಾರೆ.
ಆತ ಅಕ್ಕಿ ಗಿರಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಬಿಹಾರದ ಖಗಾರಿಯಾ ಜಿಲ್ಲೆಯ ಅಲೌಲಿ ಠಾಣೆ ಪೊಲೀಸರು ಮನೋಜ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಸುಳಿವು ಆಧರಿಸಿ ರಾಯಚೂರು ಗ್ರಾಮೀಣ ಠಾಣೆ ಪೊಲೀಸರ ಸಹಕಾರದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಿಹಾರದಲ್ಲಿ ಹಲವಾರು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮನೋಜ್, ಶಂಕಿತ ನಕ್ಸಲ್ ಎನ್ನುವ ಅನುಮಾನಗಳಿವೆ.
ಇದನ್ನೂ ಓದಿ: ಬಾತ್ರೂಮ್‌ನಲ್ಲಿ ಮಹಿಳೆ ಅಸಹ್ಯಕರ ಕೃತ್ಯ; ಪ್ರಸಿದ್ಧ ಟಿವಿ ನಟ ಬಂಧನ! ಏನಿದು ಘಟನೆ?
ತಲೆಮರಿಸಿಕೊಳ್ಳಲು ಬಿಹಾರದಿಂದ ಬಂದು ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ. ಪ್ರಕರಣಗಳ ಬೆನ್ನಟ್ಟಿದ ಬಿಹಾರಿ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚಿ ಸ್ಥಳೀಯ ಜಿಲ್ಲಾ ನ್ಯಾಯಾಲಯದ ಎದುರು ಹಾಜರು ಪಡಿಸಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ಶಂಕಿತ ನಕ್ಸಲ್, ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿ 18 ಅಪರಾಧಗಳಲ್ಲಿ ಆರೋಪಿ ಆಗಿರುವ ಬಿಹಾರ ಮೂಲದ ಮನೋಜ ಸದಾನನ್ನು ಅಲ್ಲಿನ ಪೊಲೀಸರು ರಾಯಚೂರಿನ ಯರಮರಸ್ ಕೈಗಾರಿಕಾ ವಲಯದಲ್ಲಿ ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ