ಭಂಗಿ ಸೊಪ್ಪಿನ ಕತೆ/ ಕ್ಷಿಂಟಾಲ್ ಗೆ 5 ಕೋಟಿ/ ಕರ್ನಾಟಕದಲ್ಲಿ ಗಾಂಜಾ ಹೇ ಗಾಂಜಾ/ ಕಲಬುರಗಿ ಜಿಲ್ಲೆಯ ತೋಟದ ಮನೆಯಲ್ಲಿನ ಗಾಂಜಾ ಖಜಾನೆ
ಕಲಬುರಗಿ (ಸೆ.11) ರಾಜ್ಯದಲ್ಲಿ ಪ್ರಗತಿಪರ ರೈತರ ನೆಟ್ ವರ್ಕ್ ಬಟಾಬಯಲಾಗಿದೆ.. ಒಂದುವರೆ ಕ್ವಿಂಟಾಲ್ ಗೆ ಇದೆಷ್ಟು ಬೆಲೆ.. ಹಾಗಂತ ಬೆಳಿಯೋಕೆ ಹೊರಟೆ ಪೊಲೀಸರು ಹುಡಕಿಕೊಂಡು ಬರುತ್ತಾರೆ.
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಕೋಲಾಹಲ ಎಬ್ಬಿಸಿದೆ. ಪೊಲೀಸರು ಹಿಂದೆಂದೂ ಕಂಡು ಕೇಳರಿಯದ ಗಾಂಜಾ ಖಜಾನೆಯ ಮೇಲೆ ದಾಳಿ ಮಾಡಿದ ಪೊಲೀಸರು. ಭಂಗಿ ಸೊಪ್ಪಿನ ಕತೆ...
ಡೋಪ್ ಟೆಸ್ಟ್ ಬೇಡ, ನಾನ್ ವೆಜ್ ತನ್ನಿ ಎಂದ ಸಂಜನಾ
ಸಿದ್ದುನಾಥ್ ನಾವಳಿಗೆ ಕಲಬುರಗಿಂದ ಗಾಂಜಾ ಬರುತ್ತಿತ್ತು. ಗಾಂಜಾ ಖರೀದಿ ಮಾಡುವ ಗಿರಾಕಿಗಳಂತೆ ಹೋಗಿದ್ದ ಶೇಷಾದ್ರಿ ಪುರಂ ಪೊಲೀಸರು ಕಮಲಾಪುರ ಬಳಿ ದೊಡ್ಡ ಕಾರ್ಯಾಚರಣೆ ಮಾಡಿದ್ದಾರೆ.
ಗಾಂಜಾ ಖರೀದಿ ಗೆ ಹೋಗಿದ್ದವರ ( ಪೊಲೀಸರು) ಬಳಿ ಹಣ ಕಿತ್ತುಕೊಳ್ಳುವ ಯತ್ನವೂ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ನಾಗನಾಥ್, ಚಂದ್ರಕಾಂತ್ ಚೌಹಾಣ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.
ಕುರಿಫಾರಂ ಬಳಿ ಹೋದಾಗ ಶೇಖರಿಸಿಟ್ಟಿದ್ದ ಗಾಂಜಾ ನೋಡಿ ಅಚ್ಚರಿ ಕಾದಿತ್ತು ಭೂಮಿಯಲ್ಲಿ ಹೂತು ಇಟ್ಟಿದ್ದ 1352 ಕೇಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು ಓರಿಸ್ಸಾದಿಂದ ತರಿಉಸಿಕೊಳ್ಳಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.